20 ವರ್ಷಗಳ ಬಳಿಕ ಮರು ಬಿಡುಗಡೆಗೆ ಸಜ್ಜಾದ “ಸೈನೈಡ್” ಚಿತ್ರ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರದ ಘಟನೆಗಳನ್ನು ಆಧರಿಸಿದ ಚಿತ್ರ “ಸೈನೈಡ್” ಚಿತ್ರ 20 ವರ್ಷಗಳ ಬಳಿಕ ಇದೇ ತಿಂಗಳ 23 ರಂದು ಮರು ಬಿಡುಗಡೆಗೆ ಸಜ್ಜಾಗಿದೆ.
ಕೆಂಚಪ್ಪ ಗೌಡ ಹಾಗೂ ಎಸ್ ಇಂದುಮತಿ ನಿರ್ಮಿಸಿದ್ದ, ಎಎಂಆರ್ ರಮೇಶ್ ನಿರ್ದೇಶಿಸಿದ್ದ ಚಿತ್ರದಲ್ಲಿ ಹಿರಿಯ ಕಲಾವಿದರಾದ ತಾರಾ, ರಂಗಾಯಣ ರಘು, ರವಿಕಾಳೆ, ಮಾಳವಿಕ, ಅವಿನಾಶ್, ಉಷಾ ಭಂಡಾರಿ ಮುಂತಾದವರು ಅಭಿನಯಿಸಿದ್ದ “ಸೈನೈಡ್” ಚಿತ್ರ 2006 ರಲ್ಲಿ ಬಿಡುಗಡೆಯಾಗಿ ಜನಪ್ರಿಯವಾಗಿತ್ತು. ಜನ ಮನ್ರಣೆ ಗಳಿಸಿತ್ತು

ನಿರ್ದೇಶಕ ಎಎಂಆರ್ ರಮೇಶ್ ಮಾತನಾಡಿ “ಸೈನೈಡ್” ಚಿತ್ರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ನಡೆದ ಘಟನೆ ಆಧರಿಸಿದ ಚಿತ್ರ. 2006 ರಲ್ಲಿ ಚಿತ್ರ ಬಿಡುಗಡೆ ಮಾಡುವಾಗ ಸೂಕ್ಷ್ಮವಾದ ವಿಷಯದ ಕುರಿತ ಸಿನಿಮಾ. ಏನಾಗುತ್ತದೊ ಏನೋ. ಎಂಬ ಆತಂಕವಿತ್ತು. ಆದರೆ ಬಿಡುಗಡೆ ಆದ ಮೇಲೆ ಜನ ಈ ಚಿತ್ರ ಸ್ವೀಕರಿಸಿದ ರೀತಿ ಕಂಡು ಆತಂಕ ದೂರವಾಯಿತು. ನಾಡಿನ ಖ್ಯಾತ ಸಾಹಿತಿಗಳು, ನಟರು ಹಾಗೂ ನಿರ್ದೇಶಕರು ಸಹ ಈ ಚಿತ್ರದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದರು.
ತಾರಾ ಅವರ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ತಂದುಕೊಟ್ಟ ಚಿತ್ರ ಕೂಡ ಇದ್ದಾಗಿತ್ತು. ಪ್ರಸ್ತುತ ಈ ಚಿತ್ರವನ್ನು ಈಗಿನ ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿ ಜೊತೆಗೆ ಹತ್ತು ನಿಮಿಷ ಸಿನಿಮಾ ಅವಧಿಯನ್ನು ಹೆಚ್ಚಿಸಿ ಮೇ 23 ರಂದು ಮರು ಬಿಡುಗಡೆ ಮಾಡುತ್ತಿದ್ದೇವೆ. ” ಸೈನೈಡ್” ಚಿತ್ರದ ಪ್ರೀಕ್ವೆಲ್ ಸಹ ಬರಲಿದ್ದು, ಅದರ ಕಾರ್ಯಗತಿಯೂ ಸಹ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಹಿರಿಯ ನಟಿ ತಾರಾ ಅನುರಾಧ ಮಾತನಾಡಿ “ಸೈನೈಡ್” ಚಿತ್ರದಲ್ಲಿ ಮೃದುಲ ಎಂಬ ಮುಗ್ಧ ಹೆಣ್ಣು ಮಗಳ ಪಾತ್ರ ನಿರ್ವಹಿಸಿದ್ದೆ. ಇಪ್ಪತ್ತು ವರ್ಷಗಳ ಹಿಂದೆ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ನಾನು ಮೃದುಲ ಅವರನ್ನು ಭೇಟಿ ಮಾಡಲು ಪ್ರಯತ್ನ ಪಟ್ಟೆ . ಆಗಲಿಲ್ಲ. ಅವರ ಪತಿ ರಂಗನಾಥ್ ಚಿತ್ರೀಕರಣ ಸ್ಥಳಕ್ಕೆ ಬರುತ್ತಿದ್ದರು. ಅವರಿಂದ ಮೃದುಲ ಅವರ ಸ್ವಭಾವ ತಿಳಿದುಕೊಂಡು ನಟಿಸಿದ್ದೆ. ನನ್ನ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಕೂಡ ಬಂತು. ಈಗ ರಮೇಶ್ ಈ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ. ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಸಿದ್ದರಾಮಯ್ಯ ಅವರಿ ಈ ಚಿತ್ರದ ತುಣುಕು ನೋಡಿದರು. ಚಿತ್ರವನ್ನು ಸಹ ನೋಡುತ್ತೇನೆ ಎಂದುಹೇಳಿದರು
“ಸೈನೈಡ್” ಚಿತ್ರದಲ್ಲಿ ಟೆರರಿಸ್ಟ್ ಪಾತ್ರ ಮಾಡಿದ್ದನ್ನು ನಟಿ ಉಷಾ ಭಂಡಾರಿ ನೆನಪಿಕೊಂಡರು. ನಿರ್ಮಾಪಕರಾದ ಕೆಂಚಪ್ಪ ಗೌಡ, ಎಸ್ ಇಂದುಮತಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.