The first look of the film "Puttanna Katte" is released.

“ಪುಟ್ಟಣ್ಣನ ಕತ್ತೆ’ ಚಿತ್ರದ ಮೊದಲ ನೋಟ ಬಿಡುಗಡೆ - CineNewsKannada.com

“ಪುಟ್ಟಣ್ಣನ ಕತ್ತೆ’ ಚಿತ್ರದ ಮೊದಲ ನೋಟ ಬಿಡುಗಡೆ

ದಾರಿ ಯಾವುದಯ್ಯ ವೈಕುಂಠಕೆ” ಸೇರಿದಂತೆ ಹಲವು ಚಿತ್ರ ನಿರ್ದೇಶಿಸಿರುವ ಸಿದ್ದು ಪೂರ್ಣಚಂದ್ರ, ಈಗ ಪುಟ್ಟಣ್ಣನ ಕತ್ತೆ” ಎಂಬ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ.ಚಿತ್ರದ ಪುಟ್ಟಣ್ಣನ ಕತ್ತೆ”ಪೋಸ್ಟರ್ ಬಿಡುಗಡೆ ಮಾಡಿದೆ. ಮೊದಲ ಪೋಸ್ಟರ್ ನಲ್ಲಿ ಕತ್ತೆಯನ್ನು ತೋರಿಸಿರುವುದು ಚಿತ್ರದ ಶುಭ ಸೂಚನೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಿದ್ದು ಪೂರ್ಣಚಂದ್ರ, ಎಲ್ಲರು ನಾಯಿ ಮೇಲೆ ಚಿತ್ರ ಮಾಡಿದರೆ ನಾನ್ಯಾಕೆ ಕತ್ತೆ ಮೇಲೆ ಕತೆ ಬರೆದು ಚಿತ್ರ ಮಾಡಬಾರದು ಅಂತ ಐಡಿಯಾ ಬಂದಾಗ ಈ ಕಥೆ ಹೊಳೆಯಿತು. ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಮನುಷ್ಯರ ಜೊತೆ ಕತ್ತೆ ಬಳಸಲಾಗಿದೆ. ಮೊದಲಿಗೆ ಸಾವಾಲಾಗಿ ಪರಿಣಮಿಸಿದರೂ ನಂತರ ಅದರೊಂದಿಗೆ ನಟರನ್ನು ಬಿಟ್ಟು ಅಭ್ಯಾಸ ಮಾಡಿಸಿದೆವು, ನಟನೆ ಜೊತೆಗೆ ಅದರೊಂದಿಗೆ ಬಾಂದವ್ಯ ಬೆಳೆಸಿಕೊಂಡ ನಂತರ ಚಿತ್ರೀಕರಿಸಲಾಯಿತು ಎಂದಿದ್ಧಾರೆ

ಚಿತ್ರತಂಡಕ್ಕೆ ಕತ್ತೆಯ ಜೊತೆಗಿನ ಒಡನಾಟ ಹೊಸದು, ಮನಸ್ಥಿತಿ ನೋಡಿಕೊಂಡು ಚಿತ್ರೀಕರಣ ಮಾಡಿದೆವು. ಮುಂದಿನ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಪ್ರಾರಂಭದಲ್ಲಿ ಕಷ್ಟವೆಸಿದರೂ ಒಂದೆರಡು ದಿನಗಳಲ್ಲಿ ಕತ್ತೆಯೂ ನಮ್ಮೊಂದಿಗೆ ಸಹಕರಿಸಿದ್ಧು ವಿಶೇಷ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಚಿತ್ರಕ್ಕೆ “ತನ್ಮಯ್ ಎಸ್ ಗೌಡ” ಬಂಡವಾಳ ಹೂಡಿದ್ದಾರೆ. ಮುಖ್ಯ ಪಾತ್ರದಲ್ಲಿ ಅನಿಶ್ ಆರ್ಯನ್, ಭೀಮೇಶ್ ಅಭಿನಯಿಸಿದ್ದಾರೆ. ಕಲಾರತಿ ಮಹದೇವ್, ಸಿದ್ದು ಮಂಡ್ಯ, ರಶ್ಮಿ ಮೈಸೂರ್, ಬಾಬು, ರೋಹಿಣಿ, ಎನ್ ಟಿ ರಾಮಸ್ವಾಮಿ, ಲಕ್ಕಿ ಶಂಕರ್, ಶೃತಿ ಗಗನ, ಸೌಮ್ಯ, ಕವಿತಾ ಕಂಬಾರ್, ಲಿಯೋ ಶರ್ಮ, ವಿಭಾ ವಂದನ್ ಇನ್ನೂ ಮುಂತಾದವರು ಅಭಿನಯಿಸುತ್ತಿದ್ದಾರೆ.

ಛಾಯಾಗ್ರಾಹಕರಾಗಿ ರಾಜು ಹೆಮ್ಮಿಗೇಪುರ, ಸಂಕಲನಕಾರರಾಗಿ ದೀಪು, ಸಂಗೀತ ಅನಂತ್ ಆರ್ಯನ್, ಸಿಂಕ್ ಸೌಂಡ್ ಕೃಷ್ಣಮೂರ್ತಿ ನಿರ್ವಹಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin