'The Man Who Stood on the World' Motivational Song from the Movie 'September 10' Released

‘ಪ್ರಪಂಚವನ್ನು ಮೆಟ್ಟಿನಿಂತ ಮಾನವ’ ‘ಸೆಪ್ಟೆಂಬರ್ 10’ ಚಿತ್ರದ ಮೋಟಿವೇಷನ್ ಹಾಡು ಬಿಡುಗಡೆ - CineNewsKannada.com

‘ಪ್ರಪಂಚವನ್ನು ಮೆಟ್ಟಿನಿಂತ ಮಾನವ’ ‘ಸೆಪ್ಟೆಂಬರ್ 10’ ಚಿತ್ರದ ಮೋಟಿವೇಷನ್ ಹಾಡು ಬಿಡುಗಡೆ

ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೇ ಪರಿಹಾರವಲ್ಲ,ಯೋಚನೆ ಮಾಡಿದಾಗ ಅದಕ್ಕೆ ಒಂದಲ್ಕ ಒಂದು ಪರಿಹಾರ ಸಿಕ್ಕೇ ಸಿಗುತ್ತೆ ಎಂಬ ಸಮಾಜಮುಖಿ ಸಂದೇಶ ಇಟ್ಟುಕೊಂಡು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಆಕ್ಷನ್ ಕಟ್ ಹೇಳಿರುವ ‘ಸೆಪ್ಟೆಂಬರ್ 10’ ಚಿತ್ರಕ್ಕಾಗಿ ಡಾ‌.ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಮೋಟೊವೇಶನಲ್ ಸಾಂಗ್ ಬಿಡುಗಡೆ ಆಗಿದ್ದು ಗಮನ ಸೆಳೆದಿದೆ.

ಕೇಂದ್ರ ಕಿಸಾನ್ ಸಮಿತಿಯ ನಿರ್ದೇಶಕ ಆರ್.ಎಸ್‌.ರಾಜು ಈ ಹಾಡನ್ನು ಬಿಡುಗಡೆಗೊಳಿಸಿ ಗುರುಗಳಾದ ಸಾಯಿಪ್ರಕಾಶ್ ಹಾಗೂ ನನ್ನ ಒಡನಾಟ 20 ವರ್ಷಗಳದ್ದು‌. ಅವರೀಗ ಸಮಾಜಮುಖಿ ಸಂದೇಶ ಇಟ್ಟುಕೊಂಡು ‘ಸೆಪ್ಟೆಂಬರ್ 10’ ಎಂಬ ಚಿತ್ರ ನಿರ್ದೇಶನ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಆದಂಥ ಸಾವು, ನೋವುಗಳು. ಹಸಿವು, ಕಷ್ಟ, ನಷ್ಟ ಅನುಭವಿಸಿದ ಕೆಲವರು ತಮಗೆ ಆತ್ಮಹತ್ಯೆ ಒಂದೇ ಪರಿಹಾರ ಎಂದು ನಿರ್ಧರಿಸಿದರು. ಹುಡುಕಿದರೆ ಎಂಥ ಕಷ್ಟಕ್ಕಾದರೂ ಪರಿಹಾರ ಇದ್ದೇ ಇರುತ್ತದೆ ಎಂದು ಈ ಚಿತ್ರದ ಮೂಲಕ ಅವರು ಹೇಳಹೊರಟಿದ್ದಾರೆ ಶುಭವಾಗಲಿ ಎಂದು ಹಾರೈಸಿದರು

.ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಮಾತನಾಡಿ ಶಾಲೆಯ ದಿನಗಳಲ್ಲಿ ಓಂ ಸಾಯಿ ಪ್ರಕಾಶ್ ಅವರ ಸಾಲು ಸಾಲು ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು.ಅವರ ಸಿನಿಮಾಗೆ ಒಂದು ಹಾಡು ಬರೆದರೆ, ನಾನೊಬ್ಬ ಸಾಹಿತಿಯಾಗಿ ಗುರುತಿಸಿಕೊಂಡಂತೆ ಎಂದು ಕಾಯುತ್ತಿದ್ದೆವು. ಇಂಥ ಒಂದು ಕಾನ್ಸೆಪ್ಟ್ ಮಾಡಿದ್ದೇನೆ‌ 2 ಹಾಡು ಬರೆದುಕೊಡಿ ಎಂದು ಒಂದು ಲೈನ್ ಹೇಳಿದರು.

ಪ್ರಪಂಚವನ್ನು ಮೆಟ್ಟಿನಿಂತ ಮಾನವ ಎಂಬ ಮೋಟಿವೇಶನಲ್ ಸಾಂಗ್ ಇದು. ಸಾವಿಗೆ ಮಾಡುವ ಧೈರ್ಯವನ್ನು ಬದುಕಲಿಕ್ಕೆ ಮಾಡಿ ಅಂತ ಹೇಳುವ ಹಾಡಿದು. ಸಾಯಿಪ್ರಕಾಶ್ ಅವರು ತಮ್ಮ ಬದುಕಿನ ಭಾಗವನ್ನು ಕೂಡ ಕಥೆಯಾಗಿಸಿದವರು. ಜಯಸಿಂಹ, ತನುಜಾ, ಪದ್ಮಾ ವಾಸಂತಿ, ಶ್ರೀನಿವಾಸಮೂರ್ತಿ, ಶಶಿಕುಮಾರ್, ರಮೇಶ್ ಭಟ್ ಹೀಗೆ ಅವರ ಹಿಂದಿನ ಸಿನಿಮಾಗಳಲ್ಲಿ ಮಾಡಿದ ಅನೇಕ ಹಿರಿ, ಕಿರಿಯ ಕಲಾವಿದರೆಲ್ಲ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದ ಕಥೆ, ಹಾಡು ಜನರ ಜೀವನದಲ್ಲಿ ಒಂದು ಸಣ್ಣ ಬದಲಾವಣೆ ತಂದರೆ ಅದೇ ಸಿನಿಮಾದ ಸಕ್ಸಸ್. ಈ ಚಿತ್ರ ಅಂಥಾ ಕೆಲಸ ಮಾಡುತ್ರೆ ಎಂದು ಹೇಳಿದರು.

ರಾಜಮ್ಮ ಸಾಯಿಪ್ರಕಾಶ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಡಾ.ಎಸ್. ರಾಜು ಬೆನ್ನೆಲುಬಾಗಿ ನಿಂತು ಬಿಡುಗಡೆಗೆ ತಮ್ಮ ಸಹಕಾರ ನೀಡುತ್ತಿದ್ದಾರೆ.

ನಿರ್ದೇಶಕ ಓಂ ಸಾಯಿಪ್ರಕಾಶ್ ಮಾತನಾಡಿ 2020ರಲ್ಲಿ ಸೆಪ್ಟೆಂಬರ್ 10 ಸಿನಿಮಾ ಪ್ರಾರಂಭ ಮಾಡಿದೆ. ಅಷ್ಟರಲ್ಲಿ ಕೊರೋನಾ ಬಂದದ್ದರಿಂದ ರಿಲೀಸ್ ಮಾಡಲಾಗಲಿಲ್ಲ. ಈಗ ಎಲ್ಕರ ಸಹಕಾರದಿಂದ ಬಿಡುಗಡೆ ಮಾಡಲು ಹೊರಟಿದ್ದೇನೆ. ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತೇನೆ ಎಂದು ಹೇಳಿದರು.

ನಟಿ ಶ್ರೀರಕ್ಷಾ, ಶಿವಕುಮಾರ್ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೆಜಿ.ಕೃಷ್ಣ ಚಿತ್ರದ ಛಾಯಾಗ್ರಾಹಕರು. ಮ್ಯೂಸಿಕ್ ಬಜಾರ್ ಈ ಚಿತ್ರದ ಹಾಡುಗಳನ್ನ ಹೊರತಂದಿದೆ.

ಉಳಿದಂತೆ ದೊಂಬರ ಕೃಷ್ಣ, ಗಣೇಶರಾವ್ ಕೇಸರಕರ್ ಹಾಗೂ ಉಳಿದವರು ಚಿತ್ರ ಹಾಗೂ ನಿರ್ದೇಶಕ ಓಂ ಸಾಯಿ ಪ್ರಕಾಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin