“ದಿ ರೂಲರ್ಸ್” ಚಿತ್ರದ ಟ್ರೈಲರ್ ಬಿಡುಗಡೆ ; ಸದ್ಯದಲ್ಲಿಯೇ ಚಿತ್ರಮಂದಿರದಲ್ಲಿ ತೆರೆಗೆ

ಸಂವಿಧಾನದ ಮಹತ್ವ ಸಾರುವ “ ದಿ ರೂಲರ್ಸ್” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಸಮಾನತೆ ಮತ್ತು ಹಕ್ಕುಗಳನ್ನು ವಿಚಾರ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ಕಥೆಯ ಸಾರಾಂಶ.

ಕೆ ಎಮ್ ಸಂದೇಶ್ ಕಥೆ ಚಿತ್ರಕಥೆ ಸಂಭಾಷಣೆ ಬರೆಯುವ ಮೂಲಕ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸ್ವತಃ ಹೋರಾಟಗಾರರಾಗಿರುವ ಸಂದೇಶ ಬದುಕಿನಲ್ಲಿ ಕಂಡ ಘಟನೆಗಳನ್ನು ಚಿತ್ರ ರೂಪದಲ್ಲಿ ತೆರೆಗೆ ತರಲು ಮುಂದಾಗಿದ್ದಾರೆ

ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಡಾ.ವಿ ನಾಗೇಂದ್ರ ಪ್ರಸಾದ್ ವರ್ಷಕ್ಕೆ ಇನ್ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳು ಸಿದ್ಧವಾಗುತ್ತವೆ, ಆದರೆ ಈ ಚಿತ್ರ ತುಂಬ ವಿಶೇಷವಾಗಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನ ಹಾಗೂ ಹೋರಾಟದ ಮನೋಭಾವನೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ.ಇಂತಹ ಚಿತ್ರವನ್ನು ಶಾಲಾ ಕಾಲೇಜುಗಳ ಮಕ್ಕಳು ನೋಡುವುದರಿಂದ, ತಿಳುವಳಿಕೆ ಜೊತೆಗೆ ಜ್ಞಾನ ಹೆಚ್ಚುತ್ತದೆ ಎಂದರು

ಚಿತ್ರಕ್ಕೆ ಉದಯ್ ಭಾಸ್ಕರ್ ಆಕ್ಷನ್ ಕಟ್ ಹೇಳಿದ್ದು, ಅಶ್ವತ್ ಬಳಗೆರೆ ಬಂಡವಾಳ ಹೂಡಿದ್ದಾರೆ.ಕರುಣಾ ಸಂಗೀತ ನಿರ್ದೇಶನ ನೀಡಿದ್ದಾರೆ

ಬಿಡುಗಡೆಗೆ ಸಿದ್ಧವಿರುವ ದಿ ರೂಲರ್ಸ್, ಚಿತ್ರದ ಪ್ರಚಾರ ಕಾರ್ಯಗಳು ಆರಂಭವಾಗಿದ್ದು ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಹೇಳಿದ್ದಾರೆ