“ತೀರ್ಥರೂಪ ತಂದೆಯವರಿಗೆ” ಚಿತ್ರದ ‘ನೀ ನನ್ನವಳೇ” ಹಾಡು ಬಿಡುಗಡೆ
ಕುತೂಹಲ ಹೆಚ್ಚಿಸಿರುವ ಸಿನಿಮಾ “ತೀರ್ಥರೂಪ ತಂದೆಯವರಿಗೆ.” ಚಿತ್ರದ ‘ನೀ ನನ್ನವಳೇ” ಹಾಡು ಬಿಡುಗಡೆಯಾಗಿದ್ದು ನಾಯಕ ನಿಹಾರ್ ಮುಖೇಶ್ ಹಾಗೂ ನಾಯಕಿ ರಚನಾ ಇಂದರ್ ಹಾಡಿನಲ್ಲಿ ಮಿಂಚಿದ್ದಾರೆ.

ಹೊಂದಿಸಿ ಬರೆಯರಿ ಕಥೆ ಹೇಳಿದ್ದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ತೀರ್ಥರೂಪ ತಂದೆಯವರಿಗೆ ಚಿತ್ರದ ನನದೇ ಜಗದಲಿ ಎಂಬ ಹಾಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಇದೀಗ ಚಿತ್ರತಂಡ ಎರಡನೇ ಹಾಡನ್ನು ಅನಾವರಣ ಮಾಡಿದೆ.
ನೀ ನನ್ನವಳೇ ಹಾಡಿಗೆ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದು, ರಜತ್ ಹೆಗ್ಡೆ, ಈಶಾ ಸುಚಿ ಧ್ವನಿಯಾಗಿದ್ದಾರೆ. ಜೋ ಕೋಸ್ಟ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂಡೆ, ಅಶ್ವಿತಾ ಹೆಗಡೆ ಸೇರಿದಂತೆ ಅನುಭವಿ ತಾರಾಬಳಗದವಿದೆ. ‘ತೀರ್ಥರೂಪ ತಂದೆಯವರಿಗೆ’ ಚಿತ್ರವು `ಜೈ ಚಾಮುಂಡೇಶ್ವರಿ ಪ್ರೊಡಕ್ಷನ್’ ಮೂಲಕ ನಿರ್ಮಾಣ ಆಗುತ್ತಿದೆ.
ರಾಮೇನಹಳ್ಳಿ ಜಗನ್ನಾಥ ಅವರೇ ಕಥೆ ಬರೆದಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಹೊಂದಿಸಿ ಬರೆಯಿರಿ' ಚಿತ್ರ ನಿರ್ಮಾಣ ಮಾಡಿದ್ದಸಂಡೇ ಸಿನಿಮಾಸ್’ ಈ ಚಿತ್ರ ಪ್ರೆಸೆಂಟ್ ಮಾಡುತ್ತಿದೆ. ಬ್ಲಿಂಕ್' ಸಿನಿಮಾ ಖ್ಯಾತಿಯ ರವಿಚಂದ್ರ ಎ.ಜೆ.ತೀರ್ಥರೂಪ ತಂದೆಯವರಿಗೆ’ ಸಿನಿಮಾಗೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಕೆಲಸ ಮಾಡುತ್ತಿದ್ದಾರೆ.
ದೀಪಕ್ ಯರಗೇರಾ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಮಾಡುತ್ತಿದ್ದಾರೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ.

