The song "Your life is dark in the chaos of caste and religion" is released.

“ಜಾತಿ ಧರ್ಮದ ಜಂಜಾಟದಲ್ಲಿ ನಿನ್ನ ಬಾಳು ಕತ್ತಲು” ಹಾಡು ಬಿಡುಗಡೆ - CineNewsKannada.com

“ಜಾತಿ ಧರ್ಮದ ಜಂಜಾಟದಲ್ಲಿ ನಿನ್ನ ಬಾಳು ಕತ್ತಲು” ಹಾಡು ಬಿಡುಗಡೆ

ಸಾಮಾಜಿಕ ಕಾರ್ಯಗಳ ಮೂಲಕ ಮನೆಮಾತಾಗಿರುವ ಎಂ ರಾಮಚಂದ್ರ (ಹೂಡಿ ಚಿನ್ನಿ ಗಾಯಕರಾಗೂ ಜನಪ್ರಿಯ. ಸಾಹಿತಿ ಮಂಜುಕವಿ ಬರೆದು, ಹೂಡಿ ಚಿನ್ನಿ ಅವರು ಹಾಡಿರುವ “ಜಾತಿ ಧರ್ಮದ ಜಂಜಾಟದಲ್ಲಿ ನಿನ್ನ ಬಾಳು ಕತ್ತಲು” ಎಂಬ ಹಾಡಿಗೆ ಧ್ವನಿಯಾಗಿದ್ದಾರೆ.

ಹಿಂದು, ಮುಸ್ಲಿಂ, ಕ್ರೈಸ್ತ ಹಾಗೂ ಬೌದ್ಧ ಧರ್ಮದ ಗುರುಗಳು ಭಾವೈಕ್ಯತೆ ಸಾರುವ ಈ ಹಾಡನ್ನು ಲೋಕಾರ್ಪಣೆ ಮಾಡಿದರು. ಸಾಲುಮರದ ತಿಮ್ಮಕ್ಕ ಅವರ ಪುತ್ರ ಉಮೇಶ್, ಗಾಯಕ ಮಳವಳ್ಳಿ ಮಹದೇವಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಹೂಡಿ ಚಿನ್ನಿ ಮಾತನಾಡಿ ಭಾರತ ಭಾವೈಕ್ಯತೆಯ ರಾಷ್ಟ್ರ. ಇಲ್ಲಿ ವಾಸಿಸುವ ನಾವೆಲ್ಲರೂ ಅಣ್ಣ ತಮ್ಮಂದಿರು. ಜಾತಿ, ಧರ್ಮ ಎಲ್ಲದಕ್ಕಿಂತ ಮಿಗಿಲು ಮಾನವೀಯತೆ. ಇಂತಹ ಉತ್ತಮ ವಿಷಯವನ್ನು ತಮ್ಮ ಅರ್ಥಗರ್ಭಿತ ಸಾಲುಗಳ ಮೂಲಕ ಮಂಜುಕವಿ ಉತ್ತಮ ಗೀತೆಯನ್ನು ಬರೆದಿದ್ದಾರೆ. ಅವರು ಬರೆದಿರುವ ಹಾಡನ್ನು ನನ್ನಿಂದಲ್ಲೇ ಹಾಡಿಸಿದ್ದಾರೆ. ಹಾಡು ಚೆನ್ನಾಗಿ ಮೂಡಿಬಂದಿದೆ. ನಮ್ಮ ಬಳಿ ಎಷ್ಟು ದುಡ್ಡು ಇದ್ದರೂ, ನಾವು ಹೋಗಬೇಕಾದರೆ ಏನು ತೆಗೆದುಕೊಂಡು ಹೋಗುವುದಿಲ್ಲ. ಹಾಗಾಗಿ ಬದುಕಿದ್ದಾಗ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣ ಬೆಳಸಿಕೊಳ್ಳಬೇಕು. ಈ ಕುರಿತು ಕೂಡ ಮಂಜು ಕವಿ “ಕೋಟಿ ಕೋಟಿ ರೊಕ್ಕ ಗಳಿಸಿ” ಎಂಬ ಹಾಡನ್ನು ಬರೆದಿದ್ದರು. ಆ ಹಾಡನ್ನು ನನ್ನಿಂದ ಹಾಡಿಸಿ ನನ್ನನ್ನು ಗಾಯಕನನ್ನಾಗಿ ಮಾಡಿದ್ದರು. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪೆÇ್ರೀತ್ಸಾಹವಿರಲಿ ಎಂದರು.

ಹಾಡು ಬರೆದಿರುವ ಮಂಜುಕವಿ ಮಾತನಾಡಿ ಯಾರಿಗಾದರೂ ತುರ್ತಾಗಿ ರಕ್ತ ಬೇಕಿದ್ದಾಗ, ರಕ್ತದ ಅವಶ್ಯಕತೆ ಇರುತ್ತದೆ ಹೊರತು ಅಲ್ಲಿ ಜಾತಿ ಮುಖ್ಯವಾಗಿರುವುದಿಲ್ಲ. ಇಲ್ಲಿ ನಾವೆಲ್ಲಾ ಸಮಾನರು ಎಂಬ ಸಾಮಾಜಿಕ ಕಳಕಳಿಯ ಅಂಶಗಳನ್ನಿಟ್ಟಿಕೊಂಡು ಈ ಹಾಡನ್ನು ಬರೆದಿದ್ದೇನೆ. ಹೂಡಿ ಚಿನ್ನಿ ಅವರ ಗಾಯನ, ವಿನು ಮನಸು ಅವರ ವಾದ್ಯ ಸಂಯೋಜನೆ ಹಾಗೂ ವೆಂಕಿ ಯುಡಿವಿ ಅವರ ಸಂಕಲನ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದ ಹೂಡಿ ಚಿನ್ನಿ ಅವರ ಸಹಕಾರಕ್ಕೆ ವಿಶೇಷ ಧನ್ಯವಾದ ಹೇಳಿದರು.

ಬಿಎಸ್‍ಎಸ್ ನ ರಾಜ್ಯ ಅಧ್ಯಕ್ಷವಿ ಅಮರ್ ಹಾಗೂ ಮೂಲ ನಿವಾಸಿ ಅಂಬೇಡ್ಕರ್ ಸಂಘದ ರಾಜ್ಯಾಧ್ಯಕ್ಷ ಮುನಿ ಮಾರಪ್ಪ,ರಾಜ್ಯ ಉಪಾಧ್ಯಕ್ಷ ಅಂಜನಪ್ಪ ಯಾದವ್, ಮುನಿರಾಜು, ಭಾಗ್ಯ, ಕರ್ಣಾಟಕ ರಕ್ಷಣಾ ವೇದಿಕೆ ಮೋಹನ್ ಗೌಡ ಕೆ.ಪ್ರಭಾಕರ್ ಗೌಡ ನಾರಾಯಣಸ್ವಾಮಿ ಚಿಕ್ಕಬಳ್ಳಾಪುರ ಮಹಿಳಾ ಒಕ್ಕೂಟದ ಯಶೋದಮ್ಮ ಪರಿಮಳ ಬೀದಿ ಬದಿ ವ್ಯಾಪಾರಿ ಅಧ್ಯಕ್ಷರು ಮುನಿರಾಜ್ , ಚಿಂತಾಮಣಿ ಕೃಷ್ಣಪ್ಪನವರು ಮತ್ತಿತರರು ಉಪಸ್ಥಿತರಿದ್ದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin