“ಭಘೀರ” ಚಿತ್ರದ ಯಶಸ್ಸು ನಿರ್ದೇಶಕ ಡಾ,ಸೂರಿ ಸೇರಿ ತಂಡದ ಹರ್ಷ
“ಭಘೀರ” ಚಿತ್ರದ ಯಶಸ್ಸು ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ. ಅದರಲ್ಲಿಯೂ ನಾಯಕ ಶ್ರೀಮುರುಳಿ ಅವರಿಗೆ ಬರೋಬ್ಬರಿ 3 ವರ್ಷದ ಬಳಿಕ ಗೆಲುವು ಸಿಕ್ಕರೆ ಗೆಲುವಿಗಾಗಿ ಕಾದು ಕುಳಿತಿದ್ದ ನಿರ್ದೇಶಕ ಡಾ. ಸೂರಿ ಅವರಿಗೆ ಹೊಸ ಚೈತನ್ಯ ತಂದುಕೊಟ್ಟಿದೆ. ಹೀಗೆ ತಂಡದ ಒಬ್ಬೊಬ್ಬ ಕಲಾವಿದ ಮತ್ತು ತಂತ್ರಜ್ಞರಿಗೆ “ಭಘೀರ’ನ ಗೆಲುವು ವಿಶೇಷವಾಗಿದೆ.
ಒಂದರ ಮೇಲೆ ಯಶಸ್ವಿ ಚಿತ್ರಗಳನ್ನು ನೀಡುತ್ತಿರುವ ಹೊಂಬಾಳೆ ಸಂಸ್ಥೆಗೆ ಈ ಗೆಲುವು ಸಾಮಾನ್ಯವಾಗಿ ಕಂಡುಬಂದರೂ ಚಿತ್ರಕ್ಕಾಗಿ ಕೆಲಸ ಮಾಡಿದ ಶ್ರಮಪಟ್ಟ ಎಲ್ಲರಲ್ಲಿಯೂ “ಭಘೀರ”ನ ಯಶಸ್ಸು ಹೊಸ ಹುಮ್ಮಸ್ಸು ಮತ್ತು ಹುರುಪು ಮೂಡಿಸಿದೆ. ಇದೇ ಯಶಸ್ಸು ನಿರ್ದೇಶಕ ಡಾ. ಸೂರಿ ಅವರಲ್ಲಿ “ಭಘೀರ” ಮುಂದುವರಿದ ಭಾಗ ಮಾಡಲು ಸ್ಪೂರ್ತಿ ನೀಡಿದೆ.
“ಕೆ.ಜಿ.ಎಫ್”, ” ಕಾಂತಾರ” ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್‍ನ ಮತ್ತೊಂದು ಯಶಸ್ವಿ ಚಿತ್ರ “ಬಘೀರ”. ವಿಜಯ್ ಕಿರಗಂದೂರು ನಿರ್ಮಾಣದ, ಡಾ.ಸೂರಿ ನಿರ್ದೇಶನದ ಹಾಗೂ ಶ್ರೀಮುರಳಿ ನಾಯಕರಾಗಿ ನಟಿಸಿರುವ ” ಬಘೀರ ” ಚಿತ್ರ ಕಳೆದವಾರ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು.
ಚಿತ್ರ ತೆರೆ ಕಂಡ ದಿನದಿಂದ ಈವರೆಗೂ ರಾಜ್ಯಾದ್ಯಂತ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಜೊತೆಗೆ ಪ್ರೇಕ್ಷಕರ ಮನಸ್ಸಿಗೆ ಚಿತ್ರ ಹತ್ತಿರವಾಗಿದೆ. ಕುಟುಂಬ ಸಮೇತ ಬಂದು ಜನರು ಚಿತ್ರವನ್ನು ನೋಡುತ್ತಿರುವುದು ಚಿತ್ರತಂಡದವರಲ್ಲಿ ಸಂತಸ ಮೂಡಿಸಿದೆ.
ಚಿತ್ರದ ಗೆಲುವಿನ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಇಡೀ ತಂಡ ಹಾಜರಿತ್ತು, ಬೇರೊಂದು ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಿಂದ ನಟಿ ರುಕ್ಮುಣಿ ವಸಂತ್ ಗೈರು ಹಾಜರಾಗಿದ್ದರು
ನಟ ಶ್ರೀಮುರುಳಿ ಮಾತನಾಡಿ, ಭಘೀರ ಚಿತ್ರದ ಗೆಲುವುಉ ಖುಷಿಕೊಟ್ಟಿದೆ, ಇಡೀ ತಂಡದ ಶ್ರಮದಿಂದ ಇದು ಸಾಧ್ಯವಾಯಿತು ಎಂದು ಹೇಳಿದರು
ನಿರ್ದೇಶಕ ಡಾ. ಸೂರಿ ಮಾತನಾಡಿ ಇದು ನಮ್ಮ ನಿರೀಕ್ಷೆಗೂ ಮೀರಿದ ಗೆಲುವು. ಹಬ್ಬದ ಸಮಯದಲ್ಲಿ ಇಷ್ಟು ಜನರು ಬಂದು ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಸಂತೋಷವಾಗಿದೆ. ಅವರೆಲ್ಲರಿಗೂ ನಾನು, ನನ್ನ ತಂಡ ಚಿರ ಋಣಿ. ನನ್ನ ಮೇಲೆ ನಂಬಿಕೆಯಿಟ್ಟು ಬಿಗ್ ಬಜೆಟ್ ನ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ, ಒಳ್ಳೆಯ ಕಥೆ ಕೊಟ್ಟ ಪ್ರಶಾಂತ್ ನೀಲ್ ಅವರಿಗೆ, “ಬಘೀರ”ನ ಪಾತ್ರಕ್ಕೆ ಜೀವ ತುಂಬಿದ ಶ್ರೀಮುರಳಿ ಅವರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು.
ಹಿರಿಯ ನಟ ಅಚ್ಯುತ್ ಕುಮಾರ್ ಮಾತನಾಡಿ ಶುಕ್ರವಾರ ಬಂತೆಂದರೆ ಸೋಲುಗಳನ್ನು ನೋಡಿದ್ದೇವೆ. ಚಿತ್ರ ಯಶಸ್ಸು ಗಳಿಸಿದಾಗ ಅದರ ಖುಷಿ ಹೇಳತೀರದು, ಹೊಂಬಾಳೆ ಸಂಸ್ಥೆಯೊಂದಿಗೆ ನಿರಂತವಾಗಿ ಚಿತ್ರದಲ್ಲಿ ಕೆಲಸ ಮಾಡುತ್ತಿರುವುದು ಖುಷಿಕೊಟ್ಟಿದೆ ಎಂದರು
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾತನಾಡಿ ಚಿತ್ರದ ಯಶಸ್ಸು ಖುಷಿ ಕೊಟ್ಟಿದೆ. ಯಶಸ್ಸು ಮಗುವನ್ನು ಹೆರುವುದಕ್ಕೆ ಸಮ. ಒತ್ತಡದಲ್ಲಿ ಕೆಲಸ ಮಾಡಿದ್ದೆವು. ಫಲಿತಾಂಶ ಬಂದಿದೆ. ಎಲ್ಲರ ಆಶೀರ್ವಾದದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಸಿ.ಆರ್ ಬಾಬ್ಬಿ ಅವರು ಬೇರೆ ಬೇರೆ ಹಂತಗಳಲ್ಲಿ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿಕೊಟ್ಟರು ಎಂದು ಹೇಳಿದರು.
ಖಳನಟ ಗರುಡ ರಾಮ್, ಒಳ್ಳೆಯ ಪಾತ್ರ,. ಚಿತ್ರದಲ್ಲಿ ಮೇಕಪ್ ಬೇರೆಯ ರೀತಿ ಮಾಡಿ ವಿಭಿನ್ನವಾಗಿ ತೆರೆಯ ಮೇಲೆ ತೋರಿಸಲಾಗಿದೆ ಎಂದು ಹೇಳಿದರು
ಖಳನಟ ಪುನೀತ್ ಮಾತನಾಡಿ, ಹತ್ತು ವರ್ಷದ ಹಿಂದೆ ಡಾ. ಸೂರಿ ಅವರೊಂದಿಗೆ ಸಿನಿಮಾ ಜರ್ನಿ ಆರಂಭವಾಯಿತು. ಕಲೆಯನ್ನು ಗುರುತಿಸುತ್ತಾರೆ. ಶಿವ 143 ಸೇರಿ ಅನೇಕ ಚಿತ್ರಗಳಿಗೆ ಹಲವು ಕಲಾವಿದರನ್ನು ಪರಿಚಯಸಿದ್ದಾರೆ ಭಘೀರ ಚಿತ್ರದಲ್ಲಿ ಉತ್ತಮ ಪಾತ್ರ ಸಿಕ್ಕಿದೆ ಎಂದರು.
ಛಾಯಾಗ್ರಾಹಕ ಎಜೆ ಶೆಟ್ಟಿ, ಬಾಯಿ ಮಾತನಾಡಲ್ಲ ಕಣ್ಣು ಮಾತನಾಡುತ್ತದೆ. ಸಕ್ಸಸ್ ಭಾಗವಾಗಿರುವುದು ಖುಷಿಕೊಟ್ಟಿದೆ ಎಂದರೆ ಕಲಾ ನಿರ್ದೇಶಕ ರವಿ ಸಂತೇಹಕ್ಲು, ಸಂಕಲನಕಾರ ಪ್ರವಣ್ ಸೇರಿದಂತೆ ರಘು ರಾಮನಕೊಪ್ಪ ಮುಂತಾದ ಕಲಾವಿದರು ” ಬಘೀರ” ನ ಗೆಲುವನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.
ನಿರ್ದೇಶಕರಾಗಿ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಜಾಕಿ (ತಿಮ್ಮೇಗೌಡ) ಯ ಶ್ರಮವನ್ನು ವಿಶೇಷವಾಗಿ ನಿರ್ದೇಶಕ ಡಾ.ಸೂರಿ ಸೇರಿದಂತೆ ಇಡೀ ತಂಡ ಮೆಚ್ಚುಗೆಯ ಮಾತನಾಡಿತು. ಇದು ಒಬ್ಬರ ತಂತ್ರಜ್ಞನಿಗೆ ಸಿಕ್ಕ ನಿಜವಾದ ಗೆಲುವು.