The trailer of the movie "Shalivahana Shake" with different story line is released

ವಿಭಿನ್ನ ಕಥಾಹಂದರದ “ಶಾಲಿವಾಹನ ಶಕೆ” ಚಿತ್ರದ ಟ್ರೈಲರ್ ಬಿಡುಗಡೆ - CineNewsKannada.com

ವಿಭಿನ್ನ ಕಥಾಹಂದರದ “ಶಾಲಿವಾಹನ ಶಕೆ” ಚಿತ್ರದ ಟ್ರೈಲರ್ ಬಿಡುಗಡೆ

‘ಶಾಲಿವಾಹನ ಶಕೆ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಈ ಮೂಲಕ ವಿಭಿನ್ನವಾದ ಕಾನ್ಸೆಪ್ಟ್ ನೊಂದಿಗೆ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಗಿರೀಶ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಮಿಂಚಿದ್ದಾರೆ. ಗಿರೀಶ್‍ಗೆ ಜೋಡಿಯಾಗಿ ಕಿರುತೆರೆಯ ಖ್ಯಾತ ನಟಿ ಸುಪ್ರೀತಾ ಸತ್ಯನಾರಾಯಣ್ ಬಣ್ಣ ಹಚ್ಚಿದ್ದಾರೆ.

ಟೈಟಲ್ ಮೂಲಕವೇ ಕುತೂಹಲ ಹೆಚ್ಚಿಸಿದ್ದ ‘ಶಾಲಿವಾಹನ ಶಕೆ’ ಇದೀಗ ಟ್ರೈಲರ್ ಬಿಡುಡಗೆಯಾಗಿದೆ. ಒಂದು ಕಥೆ ಹೇಳ್ಲಾ, ವಾವ್ ಸಿನಿಮಾ ಮೂಲಕ ಖ್ಯಾತಿಗಳಿಸಿದ್ದ ನಿರ್ದೇಶಕ ಗಿರೀಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಗಿರೀಶ್ ಕಥೆಗೆ ಬಂಡವಾಳ ಹೂಡುವ ಮೂಲಕ ಜೀವ ತುಂಬಿದೆ ಸೈಡ್ ವಿಂಗ್ಸ್ ಸಿನಿಮಾಸ್ ನಿರ್ಮಾಣ ಸಂಸ್ಥೆ.

ಟ್ರೈಲರ್ ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ ಮತ್ತು ನಾಯಕ ಗಿರೀಶ್, ‘ಶಾಲಿವಾಹನ ಅಂದ್ರೆ ಸಿನಿಮಾದಲ್ಲಿ ಒಂದು ಹಳ್ಳಿಯ ಹೆಸರು. ಪೌರಾಣಿಕ ಹಿನ್ನಲೆ ಕೂಡ ಇದೆ. ಟ್ರೈಲರ್ ನಲ್ಲಿ ಕಾಣಿಸುವ ಶಂಖ ಪ್ರಮುಖ ಪಾತ್ರ ವಹಿಸುತ್ತದೆ. ಸಾಕಷ್ಟು ಟೈಮ್ ಲೂಪ್ ಸಿನಿಮಾಗಳು ಬಂದಿವೆ. ಆದರೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನ. ಟೈಮ್ ಲೂಪ್ ಕಥೆಯನ್ನು ಪೌರಾಣಿಕ ಹಿನ್ನೆಲೆಯಲ್ಲಿ ಹಾಗೂ ಹಳ್ಳಿ ಸೊಗಡೆನೊಂದಿಗೆ ಹೇಳಿದ್ದೇವೆ’ ಎಂದರು.

ನಾಯಕಿ ಸುಪ್ರೀತಾ ಸತ್ಯನಾರಾಯಣ್ ಮಾತನಾಡಿ, ‘ಇದೊಂದು ಮಾಮೂಲಿ ಕಥೆಯಲ್ಲ ಒಂದು ವಿಭಿನ್ನವಾದ ಸಿನಿಮಾ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಳ್ಳಿ ಸೊಗಡನ್ನು ಇಟ್ಟುಕೊಂಡು ಮಾಡಿರುವ ಟೈಮ್ ಲೂಪ್ ಸಿನಿಮಾ. ಒಂದು ವೇಳೆ ಲೈಫಲ್ಲಿ ನಡೆದ ಘಟನೆಯನ್ನು ಸರಿಪಡಿಸಿಕೊಳ್ಳಲು ಉತ್ತಮ ಚಾನ್ಸ್ ಸಿಕ್ಕರೆ ಏನು ಮಾಡಬಹುದು ಎನ್ನುವುದನ್ನು ಈ ಸಿನಿಮಾದಲ್ಲಿ ಹೇಳಿದ್ದೀವಿ’ ಎಂದು ಹೇಳಿದರು

ಖ್ಯಾತ ಕಲಾವಿದ ಸುಂದರ್ ವೀಣಾ ಮಾತನಾಡಿ, ‘ ಈ ಚಿತ್ರದಲ್ಲಿ ಮುಸ್ಲಿಮ್ ದರ್ವೇಸಿ ಭೂಬಯ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಥೆ ತುಂಬಾ ಚೆನ್ನಾಗಿದೆ. ಪ್ರಮುಖವಾಗಿ ಒಂದು ರಂಗತಂಡ ಆಗಿದ್ದರಿಂದ ತುಂಬಾ ಖುಷಿಯಾಯಿತು’ ಎಂದರು.

ನಿರ್ಮಾಪಕ ಶೈಲೇಶ್ ಕುಮಾರ್ ಮಾತನಾಡಿ, ‘ಇದೇ ಕಾಲಘಟ್ಟದಲ್ಲಿ ನಡೆಯುವ ಕಥೆ. ನಾಲ್ಕರಿಂದ ಐದು ದಿನದಲ್ಲಿ ನಡೆಯುವ ಕಥೆ ಶಾಲಿವಾಹನ ಶಕೆ’ ಎಂದರು.

ಸಿನಿಮಾವನ್ನು 15 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರೀಯರಾಗಿರುವ ‘ಸೈಡ್ ವಿಂಗ್’ ಹೆಸರಿನಲ್ಲಿ ತಮ್ಮದೆ ತಂಡ ಕಟ್ಟಿಕೊಂಡು ನಾಟಕ ಪ್ರದರ್ಶನ ಮಾಡುತ್ತಿರುವ ಶೈಲೇಶ್ ಕುಮಾರ್ ಮೊದಲ ಬಾರಿಗೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಸಿನಿಮಾವನ್ನು ಬಹುತೇಕ ಕುಣಿಗಲ್ ಸುತ್ತಮತ್ತ ಚಿತ್ರೀಕರಣ ಮಾಡಲಾಗಿದೆ. ಇದುವರೆಗೂ ಬಂದಿರುವ ಬಹುತೇಕ ಟೈಮ್ ಥ್ರಿಲ್ಲರ್ ಸಿನಿಮಾಗಳು ಟೆಕ್ನಾಲಜಿಯನ್ನು ಆಧರಿಸಿ ಇರುವ ಸಿನಿಮಾವಾಗಿರುತ್ತಿತ್ತು. ಆದರೆ ಇದು ಒಂದು ಹಳ್ಳಿ ಸೊಗಡಿನಲ್ಲಿ ದೇಸಿ ಕ್ಯಾರೆಕ್ಟರ್ ಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾವಾಗಿದೆ.

ಈ ಸಿನಿಮಾದಲ್ಲಿ ಗಿರೀಶ್ ಹಾಗೂ ನಟಿ ಸುಪ್ರೀತಾ ಜೊತೆಗೆ ಚಿಲ್ಲರ್ ಮಂಜು, ಸುಂದರ್ ವೀಣಾ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಅರುಣ್ ಸುರೇಶ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಹರಿ ಅಜಯ್ ಮತ್ತು ಕಾರ್ತಿಕ್ ಭೂಪತಿ ಎನ್ನುವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಶಾಲಿವಾಹನ ಶಕೆ ಇದೇ ತಿಂಗಳು 13ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿಕೊಳ್ಳುತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin