” ಔಟ್ ಆಫ್ ಸಿಲಬಸ್ ” ಚಿತ್ರದ ಟ್ರೈಲರ್ ಬಿಡುಗಡೆ
ಕನ್ನಡದಲ್ಲಿ ಇತ್ತೀಚಿಗೆ ಹೊಸ ಹೊಸ ಕಂಟೆಂಟ್ ಜೊತೆಗೆ ವಿಭಿನ್ನ ಶೀರ್ಷಿಕೆ ಸಿನಿಮಾಗಳು ತೆರೆಗೆ ಬರುತ್ತಿವೆ.ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ ” ಔಟ್ ಆಫ್ ಸಿಲಬಸ್”.
ವಿಜಯಕಲಾ ಸುಧಾಕರ್,ತನುಷ್ ಎಸ್ ವಿ,ದೇಸಾಯಿ ಗೌಡ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರದಲ್ಲಿ ಪ್ರದೀಪ್ ದೊಡ್ಡಯ್ಯ ನಟಿಸಿ ನಿರ್ದೇಶನ ಮಾಡಿರುವ ಚಿತ್ರ ಡಿಸೆಂಬರ್ 27ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.
ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡಿಗಡೆಯಾಗಿದ್ದು ಚಿತ್ರದಲ್ಲಿನ ಕಥಾ ವಸ್ತು ಕುತೂಹಲ ಕೆರಳಿಸಿದೆ.ಯುವ ಜನತೆಯನ್ನು ಕೇಂದ್ರವಾಗಿಟ್ಟು,ಭರ್ಜರಿ ಮನೋರಂಜನೆ ಕೊಡುವ ಎಲ್ಲ ಅಂಶಗಳನ್ನು ಒಳಗೊಂಡಿದೆ
ನಾಯಕ ಪ್ರದೀಪ್ ದೊಡ್ಡಯ್ಯ ಜೊತೆಗೆ,ನಾಯಕಿಯಾಗಿಹೃತಿಕಾ ಶ್ರೀನಿವಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಯೋಗರಾಜ್ ಭಟ್, ರಾಮಕೃಷ್ಣ,ಚಿತ್ಕಲ ಬಿರಾದಾರ್ ಮಂಜು ಪಾವಗಡ, ಮಹಾಂತೇಶ್ ಹಿರೇಮಠ್ ಮತ್ತಿತರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ತಾಂತ್ರಿಕ ವಿಭಾಗದಲ್ಲಿ, ದೇವ ವಡ್ಡೆ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನವಿದೆ.
ಮೋಟಿವೇಷನ್ ಸ್ಪೀಕರ್ ಆಗಿ ಹಲವಾರು ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳ ಜೊತೆಗೆ ಜಾಹೀರಾತು ಸಂಸ್ಥೆ ಮೂಲಕ ಕನ್ನಡ ಚಿತ್ರೋದ್ಯಮದ ಜೊತೆ ನಿರಂತರವಾದ ಸಂಪರ್ಕ ಹೊಂದಿರುವ, ಪ್ರದೀಪ್ ದೊಡ್ಡಯ್ಯ ಕನ್ನಡದ ಬಹಳಷ್ಟು ಖ್ಯಾತ ನಿರ್ದೇಶಕರುಗಳ ಜೊತೆಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.