ಬಿಗ್ ಬಾಸ್ ಮನೆಯಿಂದ ” ದಾಸರಹಳ್ಳಿ”ಗೆ ಬಂದ ನಟ ಧರ್ಮ ಕೀರ್ತಿರಾಜ್
ಈ ಬಾರಿಯ ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ನಟ ಧರ್ಮಕೀರ್ತಿರಾಜ್, ಅಲ್ಲಿಂದ ಹೊರ ಬರುತ್ತಿದ್ದಂತೆ ” ದಾಸರಹಳ್ಳಿ”ಗೆ ಬಂದಿದ್ದಾರೆ. ಚಾಕಲೇಟ್ ಹೀರೋ ಎನ್ನುವ ಖ್ಯಾತಿ ಪಡೆದಿರುವ ಧರ್ಮ ಕೈಯಲ್ಲಿ ದೊಣ್ಣೆ ಹಿಡಿದು ರಗಡ್ ಲುಕ್‍ನಲ್ಲಿ ಕಿಚ್ಚು ಹಚ್ಚಿದ್ದಾರೆ.
ಅಂದಹಾಗೆ ಧರ್ಮಕೀರ್ತಿರಾಜ್ ನಟನೆಯ ಹೊಸ ಚಿತ್ರ “ದಾಸರಹಳ್ಳಿ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮಾಸ್‍ಪ್ರಿಯರಿಗೆ ಹೇಳಿ ಮಾಡಿಸಿದ ಅಂಶಗಳು ಚಿತ್ರದಲ್ಲಿವೆ.
ಪಿ.ಉಮೇಶ ನಿರ್ಮಾಣದ ಎಂ. ಆರ್. ಶ್ರೀನಿವಾಸ್ ನಿರ್ದೇಶನದ “ದಾಸರಹಳ್ಳಿ” ಚಿತ್ರದ ಟ್ರೈಲರ್‍ನಲ್ಲಿ ನಟ ಧರ್ಮ ಕಾಣಿಸಿಕೊಂಡಿರುವ ಲುಕ್‍ಗೆ ಅಭಿಮಾನಿಗಳು ಫಿಧಾ ಆಗಿದ್ದಾರೆ
ಈ ವೇಳೆ ಮಾತನಾಡಿದ ನಿರ್ದೇಶಕ ಎಂ. ಆರ್. ಶ್ರೀನಿವಾಸ್, ‘ತಾಯಿ ಸಪೋರ್ಟ್ ಇದ್ದರೂ ತಂದೆ ಸಪೋರ್ಟ್ ಇಲ್ಲದೆ ಹೋದರೆ ಮಕ್ಕಳು ಏನಾಗುತ್ತವೆ ಎಂಬ ಸ್ಪಷ್ಟ ಸಂದೇಶವನ್ನು ಹೇಳಲಾಗಿದೆ. ಮಕ್ಕಳು ಫೀಸ್ ಕಟ್ಟುವುದಕ್ಕೂ ಆಗದೆ ಕಳ್ಳತನಕ್ಕೆ ಇಳಿಯುವುದು ಸೇರಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆಗ ನಾಯಕ ನಟ ದಾಸರಹಳ್ಳಿಯನ್ನ ಹೇಗೆ ಮೆಟ್ರೋ ರೇಂಜಿಗೆ ತೆಗೆದುಕೊಂಡು ಹೋಗ್ತಾನೆ ಅನ್ನೋದು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದೆ ಎಂದರು
ಕಷ್ಟಪಟ್ಟು ಸಿನಿಮಾಮಾಡಿದ್ದೀವಿ.ದೊಡ್ಡ ಕಲಾವಿದರು ಸಿನಿಮಾದಲ್ಲಿದ್ದಾರೆ. ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್ ನಟನೆ ಮಾಡಿ, ಕೆಲಸವನ್ನು ಮಾಡಿದ್ದಾರೆ. ಸಿನಿಮಾ ಗೆಲ್ಲಿಸಬೇಕು. ನಮಗೆ ಬೆನ್ನೆಲುಬಾಗಿ ಉಮೇಶ್ ಜೊತೆಗೆ ನಿಂತಿದ್ದಾರೆ’ ಎಂದು ಹೇಳಿದರು
ಹಿರಿಯ ನಟ ಉಮೇಶ್ ಮಾತನಾಡಿ, ‘ಸಿನಿಮಾ ತಂಡದವರು ಹೆಮ್ಮೆಯ ಕೆಲಸ ಮಾಡಿದ್ದಾರೆ. ಅನ್ನ ಹಾಕೋನು ರೈತ.. ದೇಶ ಕಾಯೋನು ಯೋಧ. ಇವತ್ತು ಅವರನ್ನು ವೇದಿಕೆ ಮೇಲೆ ಕರೆಸಿರುವುದು ತುಂಬಾ ಖುಷಿ ಇದೆ. ಪಿ.ಉಮೇಶ್ ಹಾಗೂ ನಿರ್ದೇಶಕರ ಒಳ್ಳೆ ಸಿನಿಮಾ ಮಾಡಿದ್ದಾರೆ.ಕಷ್ಟ ಪಟ್ಟು ಎಲ್ಲಾ ಕಲಾವಿದರನ್ನು ಸೇರಿಸಿದ್ದಾರೆ. ಹಳೆಯ ಗೆಳೆಯರೆಲ್ಲಾ ಒಂದೇ ಸಿನಿಮಾದಲ್ಲಿ ಸಿಕ್ಕಿದ್ದಾರೆ. ನಿರ್ಮಾಪಕ, ನಿರ್ದೇಶಕ, ತಾಂತ್ರಿಕ ವರ್ಗ ಇದ್ದರೆ ಮಾತ್ರ ಒಬ್ಬ ಕಲಾವಿದ. ಅವರೆಲ್ಲಾ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ನೀವೆಲ್ಲ ಥಿಯೇಟರ್ ಗೆ ಹೋಗಿ ನೋಡಿದರೆ ಖಂಡಿತ ಸಿನಿನಾ ಇಷ್ಟವಾಗುತ್ತೆ’ ಎಂದಿದ್ದಾರೆ.
ನಟ ಧರ್ಮ ಕೀರ್ತಿರಾಜ್ ಮಾತನಾಡಿ, ‘ಉಮೇಶ್ , ಮೊದಲಿನಿಂದ ಪರಿಚಯ ಸಿನಿಮಾ ಮಾಡ್ತಾ ಇದ್ದೀನಿ ಮುಖ್ಯ ಪಾತ್ರದಲ್ಲಿ ಇರಬೇಕು ಅಂದ್ರು. ಖುಷಿಯಿಂದ ಒಪ್ಪಿಕೊಂಡೆ. ಈ ಸಿನಿಮಾದಲ್ಲಿ ಒಂದೊಳ್ಳೆ ಮೆಸೇಜ್ ಇದೆ. ಕುಡಿತದಿಂದ ಏನಾಗುತ್ತೆ ಎಂಬುದೇ ಕಥೆ. ನಾಲ್ಕು ಕಥೆ ಬರುತ್ತೆ ಸಿನಿಮಾದಲ್ಲಿ. ಒಂದೊಂದು ನೋಡುಗರನ್ನು ಕಾಡುತ್ತದೆ. ಹಾಡುಗಳು ಮಾತ್ರ ತುಂಬಾ ಚೆನ್ನಾಗಿ ಬಂದಿದೆ. ಸಿನಿಮಾವನ್ನು ಫೆಬ್ರವರಿ ರಿಲೀಸ್ ಗೆ ಪ್ಲ್ಯಾನ್ ಮಾಡ್ತಾ ಇದಾರೆ. ಎಲ್ಲರು ಸಿನಿಮಾವನ್ನು ಚಿತ್ರಮಂದಿರಲ್ಲಿ ನೋಡಿ’ ಎಂದರು
ನಟಿ ನೇಹಾ ಮಾತನಾಡಿ, ಹೊಸ ಹುಡುಗಿ ಆಗಿದ್ದರೂ ಕೂಡ ತುಂಬಾ ಎಲ್ಲರೂ ಬೆಂಬಲ ನೀಡಿದ್ದಾರೆ. ದಾಸರಹಳ್ಳಿ ಎಂದಾಕ್ಷಣ ಒಂದು ಕ್ಯೂರಿಯಾಸಿಟಿ ಇದೆ.ಯಾಕಂದ್ರೆ ಅದೊಂದು ಏರಿಯಾ ಇರುವ ಕಾರಣ ಎಲ್ಲರಿಗೂ ಕುತೂಹಲ. ನನಗೂ ಈ ಕುತೂಹಲ ಇದೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎಂದು ಹೇಳಿದರು.
ವೈಷ್ಣವಿ ವಸುಂಧರೆ ಕ್ರಿಯೇಷನ್ಸ್ ಬ್ಯಾನರ್‍ನಡಿ ಪಿ. ಉಮೇಶ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಧರ್ಮ ಕೀರ್ತಿರಾಜ್, ನೇಹಾ, ಉಮೇಶ್ ರಾಜ್, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಜಾಗ್ವಾರ್ ಸಣ್ಣಪ್ಪ ,ಎಂ ಎಸ್ ಉಮೇಶ್, ಹೊನ್ನವಳ್ಳಿ ಕೃಷ್ಣ, ಬಿರಾದರ್, ಬೆಂಗಳೂರು ನಾಗೇಶ್, ಶಿವಕುಮಾರ್ ಆರಾಧ್ಯ, ಮಿಮಿಕ್ರಿ ಗೋಪಿ, ಮಜಾ ಟಾಕೀಸ್ ಪವನ್, ಪದ್ಮಾವಸಂತಿ, ರೇಖಾ ದಾಸ್, ಸಿತಾರ, ಕವನ, ಮೈಸೂರು ಮಂಜುಳಾ, ಪ್ರೇಮ ಗೌಡ , ವಿಕ್ಟರಿ ವಾಸು, ಕಿಲ್ಲರ್ ವೆಂಕಟೇಶ್,ಅರಸಿಕೆರೆ ರಾಜು ಸೇರಿದಂತೆ 150ಕ್ಕೂ ಹೆಚ್ಚು ಹಿರಿಯ ಕಲಾವಿದರು ಇದ್ದಾರೆ.
ಮುಂದಿನ ವರ್ಷ ಅಫೆಬ್ರವರಿಯಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.