Telugu actor Vijay Devarakonda introduced 'The Girlfriend'

‘ದಿ ಗರ್ಲ್ ಫ್ರೆಂಡ್’ ಪರಿಚಯಿಸಿದ ತೆಲುಗು ನಟ ವಿಜಯ್ ದೇವರಕೊಂಡ - CineNewsKannada.com

‘ದಿ ಗರ್ಲ್ ಫ್ರೆಂಡ್’ ಪರಿಚಯಿಸಿದ ತೆಲುಗು ನಟ ವಿಜಯ್ ದೇವರಕೊಂಡ

“ಪುಷ್ಪ-2” ಸಿನಿಮಾ ಗೆಲುವಿನ ಖುಷಿಯಲ್ಲಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹೊಸ ರೂಪದೊಂದಿಗೆ ಪ್ರೇಕ್ಷಕರ ಎದುರು ಬಂದಿದ್ದಾರೆ. ಪುಷ್ಪರಾಜ್‍ನ ಮಡದಿ ಶ್ರೀವಲ್ಲಿಯಾಗಿ ಸಿನಿರಸಿಕರನ್ನು ರಂಜಿಸಿರುವ ರಶ್ಮಿಕಾ ಈಗ ಪ್ರೇಮಕಥೆ ಒಪ್ಪಿಸೋದಿಕ್ಕೆ ಸಜ್ಜಾಗಿದ್ದಾರೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟನೆಯ “ದಿ ಗರ್ಲ್ ಫ್ರೆಂಡ್” ಸಿನಿಮಾದ ಟೀಸರ್ ಬಿಡುಗಡೆಯಾಗಿದೆ

ಟಾಲಿವುಡ್ ರೌಡಿಭಾಯ್ ವಿಜಯ್ ದೇವರಕೊಂಡ “ದಿ ಗರ್ಲ್ ಫ್ರೆಂಡ್” ಚಿತ್ರದ ಟೀಸರ್ ಪರಿಚಯಿಸಿ ಟೀಸರ್ ಗೆ ಧ್ವನಿಯಾಗಿದ್ದಾರೆ. ದಿ ಗರ್ಲ್ ಫ್ರೆಂಡ್ ಹಾಗೂ ರಶ್ಮಿಕಾ ಬಗ್ಗೆ ಮನದ ಮಾತು ಹಂಚಿಕೊಂಡಿದ್ದಾರೆ. ‘ದಿ ಗರ್ಲ್ ಫ್ರೆಂಡ್ ಟೀಸರ್ ಲ್ಲಿ ಪ್ರತಿ ದೃಶ್ಯವೂ ಆಕರ್ಷಕವಾಗಿದೆ ಸಿನಿಮಾವನ್ನು ವೀಕ್ಷಿಸಲು ಕಾತರರಾಗಿದ್ದೇನೆ. 8 ವರ್ಷಗಳ ಹಿಂದೆ ರಶ್ಮಿಕಾ ಅವರನ್ನು ಸೆಟ್ ನಲ್ಲಿ ಭೇಟಿಯಾಗಿದ್ದೆ. ಆ ನಂತರ ಅವರು ಸಾಕಷ್ಟು ಸಕ್ಸಸ್ ನೋಡಿದ್ದಾರೆ. ಆದರೂ ಅವರು ವಿನಮ್ರವಾಗಿದ್ದಾರೆ. ರಾಹುಲ್, ಸುಂದರ ಪ್ರೇಮ ಕಥೆಯೊಂದಿಗೆ ಪ್ರೇಕ್ಷಕರ ಹೃದಯ ಸ್ಪರ್ಶಿಸಲಿದ್ದಾರೆ ಎಂದು ಭಾವಿಸಿದ್ದೇನೆ. ಇಡೀ ದಿ ಗರ್ಲ್ ಫ್ರೆಂಡ್ ತಂಡಕ್ಕೆ ಒಳ್ಳೆಯದಾಗಲಿ’ ಎಂದಿದ್ದಾರೆ.

ದೀ ಗರ್ಲ್ ಫ್ರೆಂಡ್ ನಿನಿಮಾವನ್ನು ರಾಹುಲ್ ರವೀಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರಾವ್ ರಮೇಶ್, ರೋಹಿಣಿ ಸೇರಿದಂತೆ ಮತ್ತಿತರ ಕಲಾವಿದರು ಸಿನಿಮಾದಲ್ಲಿದ್ದಾರೆ.

ಪ್ರೇಮಕಥೆ ಜೊತೆಗೆ ಭಾವಾನಾತ್ಮಕ ಅಂಶಗಳನ್ನು ಸೇರಿಸಿ “ದಿ ಗರ್ಲ್ ಫ್ರೆಂಡ್” ಟೀಸರ್ ಕಟ್ ಮಾಡಲಾಗಿದೆ. ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಚಿತ್ರ ಪ್ರಸ್ತುಪಡಿಸುತ್ತಿದ್ದು, ಗೀತಾ ಆಟ್ರ್ಸ್, ಮಾಸ್ ಮೂವಿ ಮೇಕರ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‍ಟೈನ್‍ಮೆಂಟ್ ಬ್ಯಾನರ್ ನಡಿಯಲ್ಲಿ ಧೀರಜ್ ಮೊಗಿಲಿನೇನಿ ಮತ್ತು ವಿದ್ಯಾ ಕೊಪ್ಪಿನೀಡಿ ನಿರ್ಮಿಸಿದ್ದಾರೆ. ಹೇಶಾಮ್ ಅಬ್ದುಲ್ ವಹಾಬ್ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin