Trailer of the movie “Theertharupa Babatravare” released

“ತೀರ್ಥರೂಪ ತಂದೆಯವರಿಗೆ” ಚಿತ್ರದ ಟ್ರೈಲರ್ ಬಿಡುಗಡೆ - CineNewsKannada.com

“ತೀರ್ಥರೂಪ ತಂದೆಯವರಿಗೆ” ಚಿತ್ರದ ಟ್ರೈಲರ್ ಬಿಡುಗಡೆ

“ಹೊಂದಿಸಿ ಬರೆಯಿರಿ” ಸಿನಿಮಾ ಮೂಲಕ ಬದುಕನ್ನು ಬಂದಂತೆ ಸ್ವೀಕರಿಸಿ ಎಂಬ ಸಂದೇಶ ಕೊಟ್ಟಿರುವ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಬದುಕಿನಲ್ಲಾದ ಚಿಕ್ಕ ತಪ್ಪು ಕುಟುಂಬವನ್ನು ಎಷ್ಟು ದೂರು ಮಾಡುತ್ತದೆ. ಅಒಂದಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಆಶಯದ ಜೊತೆಗೆ ತಂದೆ ತಾಯಿ ಮೌಲ್ಯಗಳನ್ನು ಸಾರುವ ಕಂಟೆಂಟ್ ನೊಂದಿಗೆ ಬಂದಿದ್ದಾರೆ. ಈ ಕಥೆಗೆ ಚಿತ್ರಕ್ಕೆ “ತೀರ್ಥರೂಪ ತಂದೆಯವರಿಗೆ” ಎನ್ನುವ ಶೀರ್ಷಿಕೆ ಇಟ್ಟಿದ್ದಾರೆ

ಬಹಳ ವರ್ಷದ ನಂತರ ಹಿರಿಯ ನಟಿ ಸಿತಾರಾ ಮರಳಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಈ ವೇಳೆ ಮಾತನಾಡಿದ ಅವರು ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಕೊಟ್ಟಿದ್ದಾರೆ. ನಿಮಗೆ ನನ್ನ ಪಾತ್ರ ಇಷ್ಟವಾಗುತ್ತದೆ. ಕಥೆ ಪ್ರೇಕ್ಷಕರ ಹೃದಯ ತಟ್ಟುತ್ತದೆ. ಕನ್ನಡದಲ್ಲಿ ತುಂಬಾ ದಿನಗಳ ಬಳಿಕ ಬಣ್ಣ ಹಚ್ಚಿದ್ದೇನೆ. ನಾನು ನನ್ನ ಕನಸು ಆದಮೇಲೆ ರಾಜೇಶ್ ನಟರಂಗ ಅವರ ಜೊತೆ ನಟಿಸಿದ್ದೇನೆ ಎಂದರು.

ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮಾತನಾಡಿ, ಬೇರೆ ಕಥೆಗೆ ಇಟ್ಟ ಟೈಟಲ್. ನಿಹಾರ್ ಭೇಟಿಯಾದಾಗ ಕಥೆ ಬಗ್ಗೆ ಚರ್ಚೆ ಮಾಡಿದೆವು. ಥಿಯೇಟರ್ ಗೆ ಪ್ರೇಕ್ಷಕರನ್ನು ಆಕರ್ಷಿಸಲು ಟೈಟಲ್ ಬಹಳ ಮುಖ್ಯ. ಅಲ್ಲದೇ ಜನಕ್ಕೆ ಹತ್ತಿರವಾಗಿ ಇರಬೇಕು ಹಾಗೂ ಕಥೆಗೆ ಅದು ಸೂಟ್ ಆಗುವ ರೀತಿಯೂ ಇರಬೇಕು. ಹೀಗಾಗಿ ಚಿತ್ರಕ್ಕೆ ಇದೇ ಟೈಟಲ್ ಇಟ್ಟೇವು. ತೀರ್ಥರೂಪ ತಂದೆಯವರಿಗೆ ತುಂಬಾ ಒಳ್ಳೆ ಟೈಟಲ್ ಎಂದು ಎಲ್ಲರೂ ಹೇಳಿದರು. ಚಿತ್ರದ ಪ್ರಮುಖ ಪಾತ್ರಧಾರಿ ಹುಡುಕಾಟದಲ್ಲಿ ಕೊನೆಗೆ ಏನೂ ಸಿಗಲಿದೆ ಎನ್ನುವುದು ಚಿತ್ರದ ಆಶಯ. ಈ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಎಲ್ಲಾ ಪಾತ್ರಗಳು ಸಹಜವಾಗಿ, ಉತ್ತಮವಾಗಿ ಮೂಡಿಬಂದಿದೆ ಎನಿಸುತ್ತದೆ ಎಂದರು.

ನಟ ನಿಹಾರ್ ಮುಖೇಶ್ ಮಾತನಾಡಿ ಮೈಸೂರು ಹುಡ್ಗ. ಸೀರಿಯಲ್ ಮೂಲಕ ಜರ್ನಿ ಶುರುವಾಯ್ತು. ಹೊಂದಿಸಿ ಬರೆಯಿರಿ ಚಿತ್ರ ನೋಡಿದ ಮೇಲೆ ನಿರ್ದೇಶಕ ಜಗನ್ನಾಥ ಅವರ ಜೊತೆ ಕೆಲಸ ಮಾಡಬೇಕು ಎಂದುಕೊಂಡೆ. ಅದು ನನಸಾಗಿದೆ. ಪೃಥ್ವಿ ಎಂಬ ಪಾತ್ರ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು

ಚಿತ್ರದಲ್ಲಿ ನಾಯಕ ನಿಹಾರ್ ಮುಕೇಶ್‍ಗೆ ನಾಯಕಿಯಾಗಿ ರಚನಾ ಇಂದರ್ ನಟಿಸಿದ್ದಾರೆ. ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂಡೆ ಸೇರಿದಂತೆ ಅನುಭವಿ ತಾರಾಬಳಗ ಚಿತ್ರದಲ್ಲಿದೆ. ರಾಮೇನಹಳ್ಳಿ ಜಗನ್ನಾಥ್ ಕಥೆ ಬರೆದಿದ್ದಾರೆ. ಹೊಂದಿಸಿ ಬರೆಯಿರಿ' ಚಿತ್ರ ನಿರ್ಮಾಣ ಮಾಡಿದ್ದಸಂಡೇ ಸಿನಿಮಾಸ್’ ಚಿತ್ರ ಪ್ರಸ್ತುತಪಡಿಸುತ್ತಿದೆ. ರವಿಚಂದ್ರ ಎ.ಜೆ `ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರು

‘ತೀರ್ಥರೂಪ ತಂದೆಯವರಿಗೆ’ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಚಿತ್ರೀಕರಣಗೊಂಡಿದೆ. ಮೊದಲು ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ಆ ಬಳಿಕ ತೆಲುಗು ಆವೃತ್ತಿಯು ‘ಪ್ರಿಯಮೈನ್ ನಾನಾಕು’ ಎಂಬ ಶೀರ್ಷಿಕೆಯೊಂದಿಗೆ ರಿಲೀಸ್ ಆಗಲಿದೆ. ಚಿತ್ರಕ್ಕೆ ದೀಪಕ್ ಯರಗೇರಾ ಅವರ ಛಾಯಾಗ್ರಹಣ, ಜೋ ಕಾಸ್ಟ್ ಸಂಗೀತ ಸಂಯೋಜನೆ ಮತ್ತು ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ.

ಜನವರಿ 1ರಂದು ಚಿತ್ರ ಬಿಡುಗಡೆ

ತೀರ್ಥರೂಪ ತಂದೆಯವರಿಗೆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜನವರಿ 1ರಂದು ಸಿನಿಮಾ ಚಿತ್ರಮಂದಿರಗಳಿಗೆ ತರಲು ಚಿತ್ರತಂಡ ಸಜ್ಜಾಗಿದೆ. ಇಡೀ ಕುಟುಂಬ ಕುಳಿತು ನೋಡುವ ಕಾಡುವ ಕಥೆಯನ್ನು ರಾಮೇನಹಳ್ಳಿ ಜಗನ್ನಾಥ್ ತೀರ್ಥರೂಪ ತಂದೆಯವರಿಗೆ ಚಿತ್ರದ ಮೂಲಕ ಹೇಳಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin