ಚಿರತೆ ವೇಗ ಮೀರಿಸಿ ಖಡಕ್ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ನಟನೆಯ “ಮಾರ್ಕ್”
“ಫಸ್ಟ್ ಟೈಮ್ ನನ್ನ ಇಷ್ಟು ಕ್ಲೋಸ್ ಅಪ್‍ನಲ್ಲಿ ನೋಡ್ತಾ ಇದ್ದೀಯಾ ಸ್ಟೀಫನ್… ಚೆನ್ನಾಗಿದ್ದೀನಾ.. ಬಂದೆ ಅಂದ್ಕೋ…
“ಹದ್ದು ಹಾರಿಕೊಂಡು ಬರೋಕೆ ಲೇಟಾಗಬಹುದು.. ಚಿರತೆ ಓಡಿಕೊಂಡು ಬರೋಕೆ ಲೇಟ್ ಆಗ್‍ಬಹುದು ಇದು ಮಾರ್ಕ್…”

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರ “ಮಾರ್ಕ್’ ಚಿತ್ರದ ಖಡಕ್ ಮತ್ತು ಫವರ್‍ಫುಲ್ ಸಂಭಾಷಣೆ ಅಭಿಮಾನಿಗಳಲ್ಲಿ ರೋಮಾಂಚನಗೊಳಿಸಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚು ಮಾಡಿದೆ.
“ಮ್ಯಾಕ್ಸ್ ” ಚಿತ್ರದ ಭರ್ಜರಿ ಯಶಸ್ಸಿನ ನಂತರ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಅಜಯ್ ಮಾರ್ಕೇಂಢಯ ” ಮಾರ್ಕ್” ಡಿಸೆಂಬರ್ 25 ರಂದು ಬಹುಭಾಷೆಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಗೆ ಹಬ್ಬದ ಊಟ ಬಡಿಸಲು ಸಜ್ಜಾಗಿದೆ. ಅಂದಹಾಗೆ ಮಾರ್ಕ್ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ

ನಟ ಕಿಚ್ಚ ಸುದೀಪ್ ಮಾತನಾಡಿ, ವಿಜಯ್ ಹಾಗೂ ಚಂದ್ರು ಮಲಗಿಕೊಳ್ಳದೇ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ನನ್ನ ಮಾತಿಗೆ ಧೃಡವಾಗಿ ನಿಂತಿದ್ದು ನನ್ನ ಇಡೀ ತಂಡ. ಟೆಕ್ನಿಕಲ್ ಟೀಂ ಹಾಗೂ ಇಡೀ ಕಲಾವಿದರು. ಡಿಸೆಂಬರ್ ನಲ್ಲಿ ಬರ್ತಿರುವ ಸೂಪರ್ ಸ್ಟಾರ್ಸ್ ಸಿನಿಮಾಗಳಿಗೆ ಉತ್ತರಿಸಿದ ಕಿಚ್ಚ, ದೀಪಾವಳಿ ಬಂದರೆ ಕರ್ನಾಟಕದಲ್ಲಿ ಎಲ್ಲರ ಮನೆಯಲ್ಲಿಯೂ ಹಬ್ಬ. ಯಾವತ್ತು ತರಕಾರಿ, ಅಡುಗೆ ಕಮ್ಮಿಯಾಗಿಲ್ಲ. ಇನ್ನೂ ಸೀಟ್ ಗಳು ಹೇಗೆ ಕಡಿಮೆಯಾಗುತ್ತವೆ. ಜನ ಬರದೇ ಇರ್ತಾರಾ., ಶೂಟಿಂಗ್ ಜರ್ನಿ ಬಗ್ಗೆ ಮಾತನಾಡಿದ ಅವರು, ನಾಲ್ಕು ತಿಂಗಳು ಐದು ದಿನ ಶೂಟಿಂಗ್ ನಡೆಸಲಾಗಿದೆ. 80 ಲೋಕೇಷನ್, 15-20 ಸೆಟ್ ಹಾಕಿದ್ದೇವೆ ಎಂದು ಮಾಹಿತಿ ನೀಡಿದರು.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ಇಡೀ ಚಿತ್ರರಂಗ ಇವತ್ತು ಇಲ್ಲಿದೆ. ಈ ರೀತಿ ಕಾರ್ಯಕ್ರಮ ತಿಂಗಳಲ್ಲಿ ಮೂರ್ನಾಲ್ಕು ನಡೆಯುತ್ತಿವೆ. ಮಾರ್ಕ್ ಟ್ರೇಲರ್, ಸಾಂಗ್ ನೋಡಿದಮೇಲೆ ಎದುಸಿರು ತೆಗೆದುಕೊಂಡೆ. ಸುದೀಪ್ ಅವರು ಸೆಟ್ ನಲ್ಲಿ ಎಲ್ಲರ ಗಮನಸೆಳೆದು, ಖುಷಿಯಾಗಿ ಇಡುತ್ತಾರೆ. ನಿರ್ದೇಶಕರದ್ದು ಎರಡನೇ ಚಿತ್ರ ಚೆನ್ನಾಗಿ ಮಾಡಿದ್ದಾರೆ. ಸತ್ಯ ಜ್ಯೋತಿ ತಮಿಳುನಾಡಿನಲ್ಲಿ ದೊಡ್ಡ ಬ್ಯಾನರ್. ಅವರು ಸುದೀಪ್ ಅವರ ಜೊತೆ ಚಿತ್ರ ಮಾಡಿರುವುದು ಖುಷಿ. ಚಿತ್ರದಲ್ಲಿ ಮಾಡಿದ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ ಎಂದರು.

ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಾನವ ಕಳ್ಳ ಸಾಗಾಣಿಕೆ ಕಥೆ ಚಿತ್ರದಲ್ಲಿರೋದು ಟ್ರೈಲರ್ ನೋಡಿದರೆ ಅರ್ಥವಾಗುತ್ತಿದೆ. ಇದರ ಜೊತೆಗೆ ಪೆÇಲಿಟಿಕಲ್ ಅಂಶಗಳನ್ನು ಸೇರಿಸಿ ಟ್ರೇಲರ್ ಕಟ್ ಮಾಡಲಾಗಿದೆ.
ಯೋಗಿಬಾಬು, ನವೀನ್ ಚಂದ್ರ, ಗುರು ಸೋಮಸುಂದರಂ ಮತ್ತು ರೋಶಿನಿ ಪ್ರಕಾಶ್ ತಾರಾಗಣದಲ್ಲಿದ್ದಾರೆ.ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.. ಸುದೀಪ್ ಕೂಡ ಕೈ ಜೋಡಿಸಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ.

ಮಾರ್ಕ್ ಚಿತ್ರದ ಮೂಲಕ ಕಿಚ್ಚ ಸುದೀಪ್ ಅಪತ್ನಿ ಪ್ರಿಯಾ ಸುದೀಪ್ ವಿತರಣೆ ಮಾಡಲಿದ್ದಾರೆ. ಮೂಲಕ ನಿರ್ಮಾಣದ ಜೊತೆ ವಿತರಣೆಗೂ ಪ್ರಿಯಾ ಕಾಲಿಟ್ಟದ್ದಾರೆ. ಕೆ ಆರ್ ಜೆ ಜೊತೆಗೂಡಿ ಪ್ರಿಯಾ ಸುದೀಪ್ ಅವರು, ಸುಪ್ರಿಯಾನ್ವಿ ಸ್ಟುಡಿಯೋ ಮೂಲಕ ಮಾರ್ಕ್ ವಿತರಣೆ ಮಾಡಲಿದ್ದಾರೆ.


