ಅಪ್ಪಾಜಿ ಕೂಡ ಗುಮ್ಮಡಿ ನರಸಯ್ಯನಂತೆಯೇ ಜನರ ಸೇವೆ – ನಟ ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನಟಿಸುತ್ತಿರುವ ಮೊದಲ ತೆಲುಗು ಸಿನಿಮಾ “ಗುಮ್ಮಡಿ ನರಸಯ್ಯ” ಚಿತ್ರಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. 5 ಬಾರಿ ಶಾಸಕರಾಗಿ ಆಯ್ಕೆಯಾಗಿ ಸರಳ ಜೀವನ ನಡೆಸಿದ ಆಂಧ್ರದ ಮಾಜಿ ಶಾಸಕ ಗುಮ್ಮಡಿ ನರಸಯ್ಯ ಜೀವನಾಧಾರಿತ ಸಿನಿಮಾ ಇದಾಗಿದೆ. ತೆಲಂಗಾಣದ ಪಾಲ್ವಂಚದಲ್ಲಿ ಮಹೂರ್ತ ನಡೆದಿದೆ
ಗುಮ್ಮಡಿ ನರಸಯ್ಯ ಸಿನಿಮಾದ ಮುಹೂರ್ತದಲ್ಲಿ ಪಾತ್ರವರ್ಗದ ಜೊತೆಗೆ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಕವಿತಾ, ಮಲ್ಲು ಭಟ್ಟಿ ವಿಕ್ರಮಾರ್ಕ ಪತ್ನಿ ನಂದಿನಿ ಮಲ್ಲು ಮತ್ತು ಇತರ ಹಲವಾರು ರಾಜಕೀಯ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗೀತಾ ಶಿವರಾಜ್ ಕುಮಾರ್ ಚಿತ್ರಕ್ಕೆ ಕ್ಲಾಪ್ ಮಾಡಿದರು, ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಮಲ್ಲು ಭಟ್ಟಿ ವಿಕ್ರಮಾರ್ಕ ಅವರ ಪತ್ನಿ ನಂದಿನಿ ಸ್ಕ್ರಿಪ್ಟ್ ನಿರ್ದೇಶಕರಿಗೆ ಹಸ್ತಾಂತರಿಸಿದರು.
ನಟ ಶಿವಣ್ಣ ಮಾತನಾಡಿ, ಉದಾತ್ತ ಮನುಷ್ಯನ ಚಿತ್ರದಲ್ಲಿ ನಟಿಸಲು ಸಂತೋಷ ಮತ್ತು ಹೆಮ್ಮೆಪಡುತ್ತೇನೆ. ಅವಕಾಶಕ್ಕಾಗಿ ಪರಮೇಶ್ವರ್ ಮತ್ತು ಎನ್. ಸುರೇಶ್ ರೆಡ್ಡಿ ನನ್ನ ಧನ್ಯವಾದಗಳು. ತಂದೆ ಕೂಡ ಗುಮ್ಮಡಿ ನರಸಯ್ಯನಂತೆಯೇ ಜನರ ಸೇವೆ ಸಲ್ಲಿಸಿದ್ದಾರೆ. ಯಾವಾಗಲೂ `ನಿಮಗಾಗಿ ಬದುಕಬೇಡಿ, ಇತರರಿಗಾಗಿ ಬದುಕಿ’ ಎಂದು ಹೇಳುತ್ತಿದ್ದರು. ಇತ್ತೀಚೆಗೆ ಗುಮ್ಮಡಿ ನರಸಯ್ಯ ಅವರ ಮನೆಗೆ ಭೇಟಿ ನೀಡಿದಾಗ, ನನ್ನ ತಂದೆಯ ಬಳಿಗೆ ಹಿಂತಿರುಗಿದಂತೆ ಭಾಸವಾಯಿತು. ಚಿತ್ರದಲ್ಲಿ ಅವರ ಪಾತ್ರದಲ್ಲಿ ನಾನು ನಟಿಸುತ್ತಿರುವುದು ಆಶೀರ್ವಾದ. ಈ ಚಿತ್ರಕ್ಕಾಗಿ ತೆಲುಗು ಕಲಿಯುತ್ತಿದ್ದೇನೆ ಮತ್ತು ನನಗಾಗಿ ಡಬ್ಬಿಂಗ್ ಮಾಡುತ್ತೇನೆ. ನಿಮ್ಮ ಆಶೀರ್ವಾದ ನನಗೆ ಸಿಗಲಿ ಎಂದು ನಾನು ಭಾವಿಸುತ್ತೇನೆ. ಈ ಚಿತ್ರವು ಎಲ್ಲಾ ರಾಜಕೀಯ ನಾಯಕರಿಗೆ ಸ್ಫೂರ್ತಿಯಾಗಲಿದೆ” ಎಂದರು.

ಗುಮ್ಮಡಿ ನರಸಯ್ಯ ಮಾತನಾಡಿ, `ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಮತ್ತು ಆ ಬದಲಾವಣೆ ನಮ್ಮೊಳಗೇ ಆರಂಭವಾಗಬೇಕು ಒಬ್ಬರನ್ನೊಬ್ಬರು ಮೋಸಗೊಳಿಸುವುದನ್ನು ಕೊನೆಗಾಣಿಸಬೇಕು ಎನ್ನುವುದು ನನ್ನ ಏಕೈಕ ಆಸೆ. ನಾನು ಎಲ್ಲರಂತೆ ಸಾಮಾನ್ಯ ವ್ಯಕ್ತಿ. ನನ್ನನ್ನು ವೈಭವೀಕರಿಸುವ ಬದಲು, ಚಿತ್ರ ನನ್ನ ನಂಬಿಕೆಗಳನ್ನು ತಿಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಪರಮೇಶ್ವರ್ ಬಾಲ್ಯದಿಂದ ಇಲ್ಲಿಯವರೆಗೆ ಜೀವನವನ್ನು ಅಧ್ಯಯನ ಮಾಡಿ ಚಿತ್ರವನ್ನು ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ನನ್ನನ್ನು ಚಿತ್ರಿಸುತ್ತಿರುವುದು ಸಂತೋಷವಾಗಿದೆ. ಈ ಚಿತ್ರ ಬಿಡುಗಡೆಯಾದ ನಂತರ ಸಮಾಜ ಮತ್ತು ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿ ಎಂದು ಆಶಿಸುತ್ತೇನೆ” ಎಂದು ಹೇಳಿದರು
ನಿರ್ದೇಶಕ ಪರಮೇಶ್ವರ್ ಹಿವ್ರಾಳೆ ಅವರು ಗುಮ್ಮಡಿ ನರಸಯ್ಯ ಅವರ ಜೀವನಗಾಥೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎನ್. ಸುರೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿದ್ದ ಫಸ್ಟ್ ಲುಕ್ ನಲ್ಲಿ ಶಿವಣ್ಣನ ವಿಶೇಷವಾಗಿ ಕಾಣಿಸಿಕೊಂಡಿದ್ದರು. ಧೋತಿ ಉಟ್ಟು. ಶರ್ಟ್ ಹಾಕಿದ್ದಾರೆ. ಹೆಗಲ ಮೇಲೆ ಒಂದು ಕೆಂಪು ಬಣ್ಣದ ಶಾಲು ಇದೆ. ಓಡಾಡೋಕೆ ಒಂದು ಸೈಕಲ್ ಇದೆ. ಇದು ಈ ಚಿತ್ರದ ಫಸ್ಟ್ ಲುಕ್ ಪೆÇೀಸ್ಟರ್ ಗಮನ ಸೆಳೆದಿದೆ.

