Song release from the movie Soori Anna: Release next month

ಸೂರಿ ಅಣ್ಣ ಚಿತ್ರದ ಹಾಡು ಬಿಡುಗಡೆ : ಮುಂದಿನ ತಿಂಗಳು ಬಿಡುಗಡೆ - CineNewsKannada.com

ಸೂರಿ ಅಣ್ಣ ಚಿತ್ರದ ಹಾಡು ಬಿಡುಗಡೆ : ಮುಂದಿನ ತಿಂಗಳು ಬಿಡುಗಡೆ

ಮಾರಿಗುಡ್ಡದ ಗಡ್ಡಧಾರಿಗಳು ಎಂಬ ಚಿತ್ರ ನಿರ್ಮಾಣ ಮಾಡಿದ್ದ ಸಲಗ ಖ್ಯಾತಿಯ ಸೂರಿ ಅಣ್ಣ (ದಿನೇಶ್) ಇದೀಗ ಮತ್ತೊಂದು ಚಿತ್ರbನಿರ್ಮಾಣ ಮಾಡಿದ್ದಾರೆ. ಚಿತ್ರದ ಹೆಸರೂ ಸಹ ಸೂರಿ ಅಣ್ಣ. ನಾಯಕನಾಗಿ ನಟಿಸುವ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ.

ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಹಾಡು ಬಿಡುಗಡೆ ಇತ್ತು. ” ನೀ ನನ್ನ ದೇವತೆ” ಎಂಬ ಸುಂದರ ಸಾಹಿತ್ಯ ಒಳಗೊಂಡ ಗೀತೆಗೆ ಕೆ.ಎಂ.ಇಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. ವೇಲುಲಹರಿ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ.

ನಾಯಕ,‌ಕಮ್‌ ನಿರ್ಮಾಪಕ ದಿನೇಶ್ (ಸೂರಿ ಅಣ್ಣ) ಮಾತನಾಡಿ ಜೂನಿಯರ್ ಆರ್ಟಿಸ್ಟ್ ಆಗಿ ರಾಣಾ, ದೇವ್ರು, ದ್ರೋಣ, ಕೋಟಿಗೊಬ್ಬ-3, ಚಕ್ರವರ್ತಿ ಚಿತ್ರಗಳಲ್ಲಿ ನಟಿಸಿದೆ. ಈಗಾಗಲೇ ಚಿತ್ರದ ಟೀಸರ್, ಮಾದಪ್ಪ ಹಾಡು ಚೆನ್ನಾಗಿ ಹೋಗ್ತಾ ಇದೆ. ಇದೀಗ ನೀನನ್ನ ದೇವತೆ ಲವ್ ಸಾಂಗ್ ರಿಲೀಸ್ ಮಾಡಿದ್ದೇವೆ. ಈ ಸಿಮಾಗಾಗಿ ಸಿಕ್ಸ್ ಪ್ಯಾಕ್ ಮಾಡಿರುವ ಸೂರಿ ಅಣ್ಣ ಕಾರ್ಯಕ್ರಮ ದ ಕೊನೆಯಲ್ಲಿ ತಮ್ಮ ಸಿಕ್ಸ್ ಪ್ಯಾಕ್ ತೋರಿಸಿದರು, ಕಾಕ್ರೋಚ್ ಸುಧಿ, ಜಾಕ್ ಜಾಲಿ, ಪ್ರಸಾದ್ ,(ಜಿಮ್ ಟ್ರೈನರ್)ಮೇನ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ ಎಂದರು.

ಒಬ್ಬ ಅಮಾಯಕ ತನ್ನ ಇಡೀ ಫ್ಯಾಮಿಲಿ ಕಳೆದುಕೊಂಡಾಗ ಆತ ಯಾವ ಮಟ್ಟಕ್ಜೆ ಹೋಗ್ತಾನೆ ಅಂತ ಈ ಚಿತ್ರದಲ್ಲಿ ಹೇಳಿದ್ದೇವೆ. 5 ನಿಮಿಷದ ಸುಖಕ್ಕೋಸ್ಕರ ಏನೆಲ್ಲ ಮಾಡ್ತಾರೆ ದುಡುಕಬೇಡಿ, ಯಾರಿಗೂ ತಿರುಗಿ ಬೀಳಬೇಡಿ.ನಮ್ಮನ್ನೇ ನಂಬಿಕೊಂಡು ಕುಟುಂಬ ಇರುತ್ತದೆ ಎಂದು ಹೇಳಿದ್ದೇವೆ. ನಾಯಕಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರ ಸೆನ್ಸಾರ್ ಆಗಿದೆ. ರಿಯಲ್ ಭೂಗತ ದೊರೆಗಳ ಮೂಲಕ ನಮ್ಮ ಚಿತ್ರದಲ್ಲಿ ಸಂದೇಶ ಹೇಳಿಸಿದ್ದೇನೆ. ಎಲ್ಲರೂ ಮೆಸೇಜ್ ಕೊಟ್ಟಿದ್ದಾರೆ ಎಂದು ಹೇಳಿದರು

ಚಿತ್ರದಲ್ಲಿ ಭೂಗತ ಜಗತ್ತಿನ ಗ್ಯಾಂಗ್ ಸ್ಟಾರ್ ಗಳು ಅಭಿನಯಿಸಿರುವುದು ವಿಶೇಷ ಎಂದು ತಿಳಿಸಿದರು

ಲಹರಿ ವೇಲು ಮಾತನಾಡಿ ವಿಷೇಶಚೇತನ ಮಕ್ಕಳು ಇವತ್ತು ಸಾಂಗ್ ರಿಲೀಸ್ ಮಾಡಿದ್ದಾರೆ.ಕೆ.ಎಂ.ಇಂದ್ರ ಅದ್ಭುತವಾಗಿ ಮ್ಯೂಸಿಕ್ ಮಾಡಿದ್ದಾರೆ ಎಂದರು.

ಕಾಕ್ರೋಚ್ ಸುಧಿ ಮಾತನಾಡಿ ಚಿತ್ರಕ್ಕಾಗಿ ಸೂರಿ ತುಂಬಾ ಕಷ್ಟಪಟ್ಟಿದ್ದಾರೆ.ಸಲಗ ಚಿತ್ರದಿಂದ ನಮ್ಮಿಬ್ಬರ ಸ್ನೇಹ ಬೆಳೆದಿದೆ.ಇದರಲ್ಲಿ ಜಪಾನ್ ಎಂಬ ಪಾತ್ರ ಮಾಡಿದ್ದೇನೆ ಎಂದರು.

ನಾಯಕಿ ಸಂಭ್ರಮಶ್ರೀ, ಜಾಕ್ ಜಾಲಿ, ಹಿನ್ನೆಲೆ ಸಂಗೀತ ನೀಡಿದ ಶ್ರೀಧರ್ ಕಶ್ಯಪ್, ಎಡಿಟರ್ ವಿಶ್ವ ಎಲ್ಕರೂ ಸೂರಿ ಅಣ್ಣಾ ಚಿತ್ರದ ಕುರಿತಂತೆ ಮಾತನಾಡಿದರು. ಜನವರಿ 24 ರಂದು ಸೂರಿ ಅಣ್ಣ ಹುಟ್ಟುಹಬ್ಬದಂದ್ದು ಬಿಡುಗಡೆ ಮಾಡಲಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin