'Peter' movie song 'Taye Taye' released

‘ಪೀಟರ್’ ಚಿತ್ರದ ತಾಯೆ ತಾಯೇ ಎಮೋಷನ್ ಹಾಡು ಬಿಡುಗಡೆ - CineNewsKannada.com

‘ಪೀಟರ್’ ಚಿತ್ರದ ತಾಯೆ ತಾಯೇ ಎಮೋಷನ್ ಹಾಡು ಬಿಡುಗಡೆ

ದೂರದರ್ಶನ ಸಿನಿಮಾ ಖ್ಯಾತಿಯ ನಿರ್ದೇಶಕ ಸುಕೇಶ್ ಶೆಟ್ಟಿ ಎರಡನೇ ಪ್ರಯತ್ನ ಪೀಟರ್. ಟೈಟಲ್, ಹಾಡಿನ ಮೂಲಕ ಕುತೂಹಲ ಹೆಚ್ಚಿಸಿದ್ದ ಪೀಟರ್ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಎಲ್ಲೆಡೆ ಅದ್ಬುತ ಪ್ರಶಂಸೆ ವ್ಯಕ್ತವಾಗಿದ್ದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ

ತಾಯೇ ತಾಯೇ ಹಾಡು ಐದು ಭಾಷೆಯಲ್ಲಿ ಬಿಡುಗಡೆಯಾಗಿದೆ. ತಾಯಿ ಮಗನ ಬಾಂಧವ್ಯದ ಈ ಗೀತೆಗೆ ಕನ್ನಡದಲ್ಲಿ ಸುಕೀರ್ತ್ ಶೆಟ್ಟಿ ಸಾಹಿತ್ಯ ಒದಗಿಸಿದ್ದು, ಮಲಯಾಳಂ ಹೊರತುಪಡಿಸಿ ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿತ್ವಿಕ್ ಮುರುಳಿಧರ್ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಧ್ವನಿಯಾಗಿದ್ದಾರೆ. ಹಿಂದಿ ಭಾಷೆಯಲ್ಲಿ ಕೂಡ ಈ ಹಾಡು ರಿಲೀಸ್ ಆಗಿರೋದು ವಿಶೇಷ, ಪ್ರತಿಷ್ಠಿತ ಇಷ್ಟರ್ ಮ್ಯೂಸಿಕ್ ಹಿಂದಿ ಹಾಡಿನ ರೈಟ್ಸ್ ತನ್ನದಾಗಿಸಿಕೊಂಡಿದೆ.

ಮಲಯಾಳಂನಲ್ಲಿ ರಿಲೀಸ್ ಆಗಿರುವ “ಥಾಯೇ ಥಾಯೇ” ಹಾಡನ್ನು ತುಡುರಮ್ ಖ್ಯಾತಿಯ ಗಾಯಕ ಗೋಕುಲ್ ಗೋಪಕುಮಾರ್ ಹಾಡಿದ್ದಾರೆ. ಗೀತರಚನೆಕಾರ ಸಿಜು ತುರಾವೂರ್ ಸಾಹಿತ್ಯ ಬರೆದಿದ್ದಾರೆ.

ಪೀಟರ್ ಸಿನಿಮಾದಲ್ಲಿ ರಾಜೇಶ್ ಧ್ರುವ, ಜಾನ್ವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ, ವರುಣ್ ಪಟೇಲ್, ದೀನಾ ಪೂಜಾರಿ, ಭರತ್ ತಾರಾಬಳಗದಲ್ಲಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ಚಿತ್ರ ನಿರ್ಮಿಸಿದ್ದಾರೆ.

ಚಿತ್ರ ಸಸ್ಪೆನ್ಸ್ ಡ್ರಾಮಾ ಕಥಾಹಂದರ ಹೊಂದಿದ್ದು, ಅದರಲ್ಲಿಯೂ ಮುಖ್ಯವಾಗಿ ಚೆಂಡೆ ಮೇಳದ ಕಂಟೆಂಟ್ ಚಿತ್ರದಲ್ಲಿದೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ಪೀಟರ್ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin