ಸೆನ್ಸಾರ್ ನಲ್ಲಿ ಪಾಸ್ ಆದ ಟೈಗರ್ ನಾಗ್ ನಿರ್ಮಾಣದ ” ಅಡವಿ಼” ಚಿತ್ರಕ್ಕೆ ಯ/ಎ ಪ್ರಮಾಣಪತ್ರ
ಸಬ್ ಟೈಟಲ್ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನ ವೈಭವಿಕರಿಸಿದ್ದೀರಿ ಎನ್ನುವ ವಿಷಯಕ್ಕೆ ಖ್ಯಾತೆ ತೆಗಿದು ಕೊನೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸೆನ್ಸರ್ ಪ್ರಾದೇಶಿಕ ಅಧಿಕಾರಿ ಪ್ರಶಾಂತ್ ಅವರನ್ನು ನಿರ್ಮಾಪಕ ನಿರ್ದೇಶಕ ಟೈಗರ್ ನಾಗ್ ದೂರಿನ ಮೇರೆಗೆ ಲಂಚ ಪಡೆಯುವ ವೇಳೆ ರೆಡ್ ಎಂಡ್ ಆಗಿ ಸಿಬಿಐ ಅಧಿಕಾರಿಗಳು ಬಂಧಿಸಿ ಜೈಲಿಗೆ ಬಿಟ್ಟಿದ್ದ ಪ್ರಕರಣ ಕನ್ನಡ ಚಿತ್ರರಂಗವಲ್ಲದೆ ಭಾರತ ಚಿತ್ರರಂಗದಲ್ಲೇ ಸದ್ದು ಮಾಡಿತ್ತು .
ಹೊಸಬರ ಚಿತ್ರಕ್ಕೆ ಸೆನ್ಸರ್ ಅಧಿಕಾರಿಗಳು ನೀಡುತ್ತಿದ್ದ ಕಿರುಕಳಕ್ಕೆ ಈ ಪ್ರಕರಣ ಒಂದಷ್ಟು ನಾಂದಿ ಆಡಿ ಸುಗಮ ದಾರಿಗೆ ಅವಕಾಶ ಕಲ್ಪಿಸಿತ್ತು, ಸಣ್ಣಪುಟ್ಟ ಸಮಸ್ಯೆಗಳಿಗೆ ನಿರ್ಮಾಪಕರನ್ನ ಕಿತ್ತು ತಿನ್ನುತ್ತಿದ್ದ ಸೆನ್ಸರ್ ಅಧಿಕಾರಿಗಳು ಈ ಪ್ರಕರಣದ ನಂತರ ಒಂದಷ್ಟು ಹೊಸ ನಿರ್ಮಾಪಕರಿಗೆ ನಿಟ್ಟುಸಿರು ಬಿಟ್ಟಂತಾಗಿದೆ .
ಇದೀಗ ಸಂವಿಧಾನ ಸಿನಿ ಕಂಬೈನ್ಸ್ ನಿರ್ಮಾಣದ ಅಡವಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಇ ಮೇಲ್ ಮೂಲಕ ಯು/ ಎ ಸರ್ಟಿಫಿಕೇಟ್ ನೀಡಿದೆ.
ಕಾಡಿನ ಸಂರಕ್ಷಣೆ, ಡಾ ಬಿ ಆರ್ ಅಂಬೇಡ್ಕರ್ ಸಂವಿಧಾನದ ಅರಿವು, ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಹಾಗೂ ಕಾಡಿನ ಮೂಲ ನಿವಾಸಿಗಳ ಬದುಕು ಮತ್ತು ಸಂಘರ್ಷದ ಕಥೆಯನ್ನು ಸವಿಸ್ತಾರವಾಗಿ ಚಿತ್ರದ ಮೂಲಕ ಹೇಳುವ ಪ್ರಯತ್ನ ಅವರದಾಗಿದೆ
ಅರಣ್ಯವೇ ಸರ್ವಸ್ವ ಎಂದು ನಂಬಿರುವ ಕಾಡಿನ ಮೂಲ ನಿವಾಸಿಗಳ ಜೀವನ. ತಮ್ಮ ಸ್ವಚ್ಛಂದ ಬದುಕಿಗಾಗಿ ಹೋರಾಟದ ಕಥೆ ಹೇಳುವುದೇ ತಪ್ಪಾ ಎಂದು ಚಿತ್ರದ ನಿರ್ದೇಶಕ ನಿರ್ಮಾಪಕ ಟೈಗರ್ ನಾಗ್ ಕಿಡಿಕಾರಿದರು, ಚಿತ್ರರಂಗದ ಹಲವು ಹಿರಿಯರು, ಹಾಗೂ ಸ್ನೇಹಿತರು ಪ್ರಗತಿಪರರು ದಲಿತ ಪರ ಸಂಘಟನೆ ಕನ್ನಡ ಪರ ಸಂಘಟನೆಗಳು ಮುಖಂಡರು ಕೂಡ ಬೆಂಬಲ ಸೂಚಿಸುತ್ತಿದ್ದಾರೆ ಹಿರಿಯರು ನೀಡಿದ ಸಲಹೆಗೆ ನಾನು ಬದ್ಧನಾಗಿ ಮುಂದಿನ ಕಾನೂನು ಹೋರಾಟ ಮಾಡುವೆ ಎಂದರು,