ಹಾಡು ಬರೆದವರು, ಸಂಗೀತ ನಿರ್ದೇಶಕರ ಹೆಸರು ಹೇಳದಿದ್ದರೆ ಕೇಸ್ ಹಾಕ್ತೇವೆ : ಡಾ. ನಾಗೇಂದ್ರ ಪ್ರಸಾದ್

ಯಾವುದೇ ಎಫ್.ಎಂ ಅಥವಾ ಮಾದ್ಯಮಗಳು ಹಾಡು ಪ್ರಸಾರ ಮಾಡುವಾಗ ಕಡ್ಡಾಯವಾಗಿ ಹಾಡು ಬರೆದವರು, ಸಂಗೀತ ನೀಡಿದವರ ಹೆಸರು ಹೇಳಲೇಬೇಕು. ಇದು ಮನವಿ ಅಲ್ಲ ಆಗ್ರಹ. ಹಾಗೊಂದು ವೇಳೆ ಅವರು ಹೇಳದಿದ್ದರೆ ಕೇಸು ಹಾಕುತ್ತೇವೆ ಎಂದರು ಹಿರಿಯ ಚಿತ್ರ ಸಾಹಿತಿ ಡಾ. ನಾಗೇಂದ್ರ ಪ್ರಸಾದ್.
ಕಳೆದ 22 ವರ್ಷಗಳಲ್ಲಿ 3 ಸಾವಿರಕ್ಕೂ ಅಧಿಕ ಹಾಡು ಬರೆದಿದ್ದೇನೆ. ಹಾಡು ಪ್ರಸಾರದ ವೇಳೆ ಬರೆದವರು ಮತ್ತು ಕಂಪೆÇೀಸ್ ಮಾಡಿದವರ ಹೆಸರು ಹೇಳುವುದು ಕಡ್ಡಾಯ. ಇಲ್ಲದಿದ್ದರೆ ಕೇಸು ಹಾಕುವ ಅಧಿಕಾರವನ್ನು ಸರ್ಕಾರವೇ ಕೊಟ್ಟಿದೆ. ಅದರಂತೆ ಕೇಸು ಹಾಕ್ತೇವೆ ಎಂದರು
ಅವರು ಹಾಗೆ ಹೇಳಲು ಕಾರಣವೂ ಇತ್ತು. ಡಾ. ನಾಗೇಂದ್ರ ಪ್ರಸಾದ್ ಬರೆದಿರುವ ” ಕೃಷ್ಣಂ ಪ್ರಣಯ ಸಖಿ ” ಚಿತ್ರದ ದ್ವಾಪರ ಚಿತ್ರದ ಹಾಡು ಸೂಪರ್ ಡೂಪರ್ ಹಿಟ್ ಆಗಿದೆ. ಈ ಹಾಡು ಎಲ್ಲಾ ಎಂ.ಎಫ್‍ಗಳನ್ನು ಮೂಡಿ ಬರುತ್ತಿದೆ. ನಾನು ಕೇಳಿದ ಮೂರು ಎಂ.ಎಫ್ ಗಳಲ್ಲಿ ಎಲ್ಲಿಯೂ ಕೂಡ ಹಾಡು ಬರೆದಿರುವ ನನ್ನ ಹೆಸರು ಮತ್ತು ಸಂಗೀತ ನೀಡಿದ. ಅರ್ಜುನ್ ಜನ್ಯ ಹೆಸರೇಳಲಿಲ್ಲ. ಇದು ನಿಜಕ್ಕೂ ಬೇಸರ ತರಿಸಿತು ಎಂದು ಹೇಳಿದರು.
ತೆರೆಯ ಮೇಲೆ ಕಾಣಿಸಿಕೊಳ್ಳುವ ನಾಯಕ, ನಾಯಕಿ, ಹಾಡುಗಾರರ ಹೆಸರು ಹೇಳ್ತಾರೆ. ಆದರೆ ತೆರೆಯ ಹಿಂದೆ ಕೆಲಸ ಮಾಡಿದ ಗೀತ ಸಾಹಿತಿ, ಮತ್ತು ಸಂಗೀತ ನಿರ್ದೇಶಕರೂ ಅಷ್ಟೇ ಮುಖ. ಹೀಗಾಗಿ ಅವರ ಹೆಸರು ಹೇಳುವುದು ಅಷ್ಟೇ ಮುಖ್ಯ ಎಂದು ಹೇಳಿದರು
ನಾನಾಗಲಿ, ಜಯಂತ್ ಕಾಯ್ಕಿಣಿ, ಕವಿರಾಜು ಅಥವಾ ಹೊಸ ಗೀತ ರಚನೆಕಾರರು ಯಾರೇ ಹಾಡು ಬರೆದಿದ್ದರೂ ಹಾಡು ಬರೆದವರು ಅವರ ಹೆಸರನ್ನು ಹೇಳಬೇಕು.ಇಲ್ಲದಿದ್ದರೆ ಕೇಸು ಹಾಕುತ್ತೇವೆ ಎಂದರು
ಬರೆದಿಟ್ಟುಕೊಳ್ಳಿ ಸೂಪರ್ ಡೂಪರ್ ಹಿಟ್ ಆಗುತ್ತೆ:
ದ್ವಾಪರ ಹಾಡು ಸೂಪರ್ ಡೂಪರ್ ಹಿಟ್ ಆಗಿದೆ. “ಕೃಷ್ಣಂ ಪ್ರಯಣ ಸಖಿ” ಚಿತ್ರ ಕೂಡ ಹಿಟ್ ಆಗುತ್ತದೆ ಬರೆದಿಟ್ಟುಕೊಳ್ಳಿ ಎಂದು ಭವಿಷ್ಯ ನುಡಿದರು ಹಿರಿಯ ಸಾಹಿತಿ, ಚಿತ್ರ ನಿರ್ದೇಶಕರೂ ಆಗರುವ ಡಾ. ನಾಗೇಂದ್ರ ಪ್ರಸಾದ್ ಅವರು.
ಕನ್ನಡ ಮಂತ್ರ ಹಾಲಿ ಹಾಡು ಬರೆಯಲು ಆರಂಭಿಸುತ್ತೇನೆ. ದ್ವಾಪರ ಹಾಡನ್ನು ಇಷ್ಟು ದೊಡ್ಡ ಹಿಟ್ ಮಾಡಿದ ಕನ್ನಡಿಗರಿಗೆ ಎಲ್ಲರಿಗೆ ಸಾಷ್ಟಾಂಗ ನಮಸ್ಕಾರ. ಚಿತ್ರದ ಎಲ್ಲಾ ಹಾಡುಗಳು ಯಶಸ್ಸು ಕಂಡಿವೆ. ಇದರ ಶ್ರೇಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೂ ಸೇರಬೇಕು. ಅರ್ಜುನ್ ಜನ್ಯಾ ಮ್ಯಾಜಿಕಲ್ ಕಂಪೋಸರ್ ಎಂದು ಈಗಾಗಲೇ ಸಾಬೀತು ಮಾಡಿದ್ದಾರೆ. ಚಿತ್ರ ಆಗಸ್ಟ್ 15ಕ್ಕೆ ತೆರೆಗೆ ಬರುತ್ತಿದೆ. ಚಿತ್ರ ಸೂಪರ್ ಡೂಪರ್ ಹಿಟ್ ಆಗುತ್ತೆ ಬರೆದಿಟ್ಟುಕೊಳ್ಳಿ ಎಂದರು.
ಮುಂಗಾರು ಮಳೆ ಚಿತ್ರ ಬಿಡುಗಡೆ ವೇಳೆ ನಟ ಗಣೇಶ್ ಮತ್ತು ನಾನು ಕಾರ್ಯಕ್ರಮಕ್ಕೆ ಸಂಜೆ ಹೋಗುತ್ತಿದ್ದ ವೇಳೆ “ಅನಿಸುತ್ತಿದೆ ಯಾಕೋ ಇಂದು” ಹಾಡು ಕೇಳಿ ಚಿತ್ರ ಹಿಟ್ ಆಗುತ್ತೆ ಎಂದು ಹೇಳಿದ್ದೆ. ಅದರಂತೆ ಚಿತ್ರ ಹಿಟ್ ಆಯ್ತು. ಇದೀಗ ಕೃಷ್ಣಂ ಪ್ರಯಣ ಸಖಿ. ಚಿತ್ರದಲ್ಲಿ 8 ನಾಯಕಿಯರು ಇದ್ದಾರೆ ಒಬ್ಬರಿಗಿಂತ ಒಬ್ಬರು ಸುಂದರವಾಗಿದ್ದಾರೆ. ಚಿತ್ರ ಕನ್ನಡದಲ್ಲಿ ಬಹುದೊಡ್ಡ ಯಶಸ್ಸು ಕಾಣುತ್ತದೆ ಎಂದು ಅವರು ವಿಶ್ವಾಸ ಹೊರಹಾಕಿದರು.
ಹಿರಿಯ ನಟ ಶಶಿಕುಮಾರ್ ಮಾತನಾಡಿ, ತೆರೆಯ ಮೇಲೆ ಕಾಣಿಸಿಕೊಳ್ಳುವ ಶ್ರಮದಂತೆ ತೆರೆಯ ಹಿಂದೆ ಕೆಲಸ ಮಾಡುವ ಮಂದಿಯ ಶ್ರಮ ಇರುತ್ತದೆ. ಡಾ, ನಾಗೇಂದ್ರ ಪ್ರಸಾದ್ ಅವರು ಹೇಳಿದಂತೆ ಗೀತ ಸಾಹಿತಿ, ಸಂಗೀತ ನೀಡಿದವರ ಹೆಸರು ಹೇಳಿ ಎಂದು ಅವರು ಮನವಿ ಮಾಡಿಕೊಂಡರು.
ನಾಗೇಂದ್ರ ಪ್ರಸಾದ್ ಲವ್ವಬಲ್. ಅವರು ಆ ರೀತಿ ಹೇಳ್ತಾರೆ ಅಷ್ಟೇ, ಗೀತ ಸಾಹಿತಿಗಳು ಮತ್ತು ಸಂಗೀತ ನಿರ್ದೇಶಕರ ಹೆಸರು ಹೇಳಿ ಎಂದರು

ಇನ್ನೂ ಕೃಷ್ಣಂ ಪ್ರಯಣ ಸಖಿ ಚಿತ್ರದಲ್ಲಿ ಮೊದಲ ಬಾರಿಗೆ ಗಣೇಶ್ ಜೊತೆ ನಟಿಸಿದ್ದೇನೆ, ವಿಭಿನ್ನವಾದ ಪಾತ್ರ. ಯಾರೂ ಬೇಕಾದರೂ ಮಾಡಬಹುದಿತ್ತು, ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು.