ಸ್ವಾತಂತ್ರ್ಯ ದಿನದಂದು “ಕೃಷ್ಣಂ ಪ್ರಯಣ ಸಖಿ” ಚಿತ್ರ ಬಿಡುಗಡೆಗೆ ಸಜ್ಜು - CineNewsKannada.com

ಸ್ವಾತಂತ್ರ್ಯ ದಿನದಂದು “ಕೃಷ್ಣಂ ಪ್ರಯಣ ಸಖಿ” ಚಿತ್ರ ಬಿಡುಗಡೆಗೆ ಸಜ್ಜು

ಗೋಲ್ಡನ್‍ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಕೃಷ್ಣಂ ಪ್ರಯಣ ಸಖಿ” ಚಿತ್ರ ಸ್ವಾತಂತ್ರೋತ್ಸವ ದಿನದಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಬಿಡುಗಡೆ ಪೂರ್ವ ಕಾರ್ಯಕ್ರಮ ಮತ್ತಷ್ಟು ಕಳೆ ತಂದಿದ್ದು ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚು ಮಾಡಿದೆ.

ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಹಾಡುಗಳ ಪ್ರದರ್ಶನ ಮತ್ತು ಚಿತ್ರಕ್ಕಾಗಿ ಕೆಲಸ ಮಾಡಿದ ಕಲಾವಿದರು ಮತ್ತು ತಂತ್ರಜ್ಞರಿಂದ ಮಾತನಾಡಿಸುವ ಮೂಲಕ ಚಿತ್ರದ ಬಗೆಗಿನ ಕುತೂಹಲ ದುಪ್ಪಟ್ಟು ಮಾಡಿದೆ.

ಚಿನ್ನಮ್ಮ ಚಿನ್ನಮ್ಮ, ದ್ವಾಪರ, ಹೇ.. ಗಗನ, ಮೈ ಮ್ಯಾರೇಜ್ ಈಸ್ ಫಿಕ್ಸ್ ಸೇರಿದಂತೆ ಚಿತ್ರದ ಬಹುತೇಕ ಹಾಡುಗಳು ಹಿಟ್ ಆಗಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳನಗ ತುದಿಗಾಲ ಮೇಲೆ ನಿಲ್ಲಿಸುವಂತೆ ಮಾಡಿದೆ.

ನಟ ಗಣೇಶ್ ಮಾತನಾಡಿ ಚಿತ್ರದ ಎಲ್ಲಾ ಹಾಡು ಹಿಟ್ ಆಗಿವೆ. ಚಿತ್ರವನ್ನು ಹಬ್ಬದ ರೀತಿ ಆಚರಿಸುತ್ತೇವೆ ಎಂದು ಅಭಿಮಾನಿಗಳು ಹೇಳುತ್ತಿದ್ದರು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಜಾತ್ರೆ ಮಾಡಿ ಎಂದು ಅನುಮತಿ ನೀಡಿದರು.

ನಟಿ ಮಾಳವಿಕ ನಾಯರ್ ಮಾತನಾಡಿ, ಕನ್ನಡದಲ್ಲಿ ಮೊದಲ ಚಿತ್ರ, ಕನ್ನಡ ಕಲಿಯುತ್ತಿದ್ದೇನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರಕ್ಕೆ ಎಲ್ಲರ ಸಹಕಾರ ಬೆಂಬಲ ಇರಲಿ ಎಂದು ಕೇಳಿಕೊಂಡರು

ಮತ್ತೊಬ್ಬ ನಟಿ ಶರಣ್ಯ ಶೆಟ್ಟಿ ಮಾತನಾಡಿ, ಜಾನು ಎನ್ನುವ ಪಾತ್ರ ಮಾಡಿದ್ದೇನೆ. ತ್ರಿಶೂಲ್ ಎಂಟರ್‍ಪ್ರೈಸಸ್ ಅವರು ಕೇಳುವುದಕ್ಕೂ ಮುನ್ನ ಕೊಡ್ತಾ ಇದ್ದರು.ಗಣೇಶ್ ಸಾರ್ ಅಭಿಮಾನಿ, ಅವರ ಜೊತೆ ನಟಿಸಿದ್ದು ಖುಷಿ ಕೊಟ್ಡಿದೆ ಹಾಡಿಗೆ ಅಷ್ಟೇ ಬೆಂಬಲ ಇರುತ್ತದೆ ಎಂದರು

ನಿರ್ದೇಶಕ ಶ್ರೀನಿವಾಸ ರಾಜು ಮಾತನಾಡಿ, ಚಿತ್ರಮಂದಿರಕ್ಕೆ ಬನ್ನಿ, ಆರಂಭದಿಂದ ಹಾಡಿನಿಂದ ಹಿಟ್ ಆಗಿದೆ. ಸಿನಿಮಾ ಬೆಂಬಲಿಸಿ ಎಂದು ಕೇಳಿಕೊಂಡರು

ಹಿರಿಯ ಕಲಾವಿದ ರಂಗಾಯಣ ರಘು ಮಾತನಾಡಿ, ಕೊರೋನಾ ಆದ ಮೇಲೆ ಉಸಿರೇ ಹೋಗಿ ಬಿಟ್ಟಿತು ಅಂದುಕೊಂಡಿದ್ದೆ. ದ್ವಾಪರ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆಸಿದೆ. ಶ್ರೀನಿವಾಸ್ ರಾಜು ಪಚ್ಕ ಪಚ್ಕ ಅಂತ ಅಂತ ಕೊಚ್ಚುವ ಸಿನಿಮಾ ಮಾಡಿದ್ದವರು, ಗಣೇಶ್ ಮೆಲೋಡಿ ಸಿನಿಮಾ ಮಾಡಿದರು. ಇಂತಹ ಇಬ್ಬರು ಸೇರಿ ವಿಭಿನ್ನ ಚಿತ್ರ ಕೊಟ್ಟಿದ್ದಾರೆ. ದ್ವಾಪರ ಹಾಡು ಬೆಳಗಿನ ಜಾನ 5 ಗಂಟೆಗೆ ಎದ್ದು ಕೇಳ್ತೇನೆ ಚಿತ್ರದಲ್ಲಿ 8 ಮಂದಿ ನಾಯಕಿರು ಇದ್ದಾರೆ ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು

ನಟ ಗಣೇಶ್‍ಗೆ ಎರಡನೇ ದೊಡ್ಡಪ್ಪ ಆಗಿದ್ದೇನೆ. ಚೆಲ್ಲಾಟದಿಂದ ನಮ್ಮ ಜರ್ನಿ ಶುರು. ಇದುರೆಗೂ 30 ಸಿನಿಮಾ ಮಾಡಿದ್ದೇವೆ. ಯಾವುದೇ ಪಾತ್ರ ಇದ್ದರೆ ನನಗೆ ಹಾಕಿ ಅಂತಾನೆ, ಜೊತೆಗೆ ನಿರ್ದೇಶಕ ಶ್ರೀನಿವಾಸ ರಾಜ್ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ಮೊಬೈಲ್ ಬಿಟ್ಟು ಚಿತ್ರಮಂದಿರಕ್ಕೆ ಬನ್ನಿ ಚಿತ್ರ ನೋಡಿ, ನಿರ್ಮಾಪಕ ಪ್ರಶಾಂತ್ , ಕೀನ್ಯಾದಲ್ಲಿ ದುಡಿದ ದುಡ್ಡು ತಂದು ಇಲ್ಲಿ ಹಾಕಿದ್ದಾರೆ. ಚಿತ್ರ ಯಶಸ್ಸು ಗಳಿಸಿದರೆ ಇಂತಹ ಹತ್ತಾರು ಸಿನಿಮಾ ಮಾಡ್ತಾರೆ ಎಂದರು.

ಚಿತ್ರದಲ್ಲಿ ನಟಿಸಿರುವ ಕಲಾವಿದ ಗಿರೀಶ್ ಶಿವಣ್ಣ ಮಾತನಾಡಿ, ಯಾವ ಕ್ಷಣದಲ್ಲಿ ಗಣೇಶ್ ಸಾರ್‍ಗೆ ಗಣಿ ಅಂತ ಹೆಸರಿಟ್ಟರೋ ಬಗೆದಷ್ಟು ಚಿನ್ನವೇ. ಗಣೇಶ್ ಸಾರ್ ಜೊತೆ ಸಿನಿಮಾ ಅಂದರೆ ಕಣ್ಣುಮಚ್ಚಿಕೊಂಡು ಪಾತ್ರ ಮಾಡಲು ಒಪ್ಪಿಕೊಳ್ಳುತ್ತೇನೆ. ಅವರ ಜೊತೆ ನಮಗೂ ತುಸು ಚಿನ್ನ ಸಿಗಲಿ ಎಂದರು.

ನಿರ್ಮಾಪಕ ಪ್ರಶಾಂತ್ ಜಿ ರುದ್ದಪ್ಪ, ಮೊದಲ ಸಿನಿಮಾ, ಹಾಡು ಚೆನ್ನಾಗಿ ಮೂಡಿ ಬಂದಿವೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ನೋಡಬೇಕು. ,ಒಂದಕ್ಕಿಂತ ಒಂದು ಹಾಡು ಚೆನ್ನಾಗಿ ಮೂಡಿ ಬಂದಿದೆ.ಚಿತ್ರ ನೋಡಿ ಹರಿಸಿ ನಿರ್ಮಾಣ ತಂಡದಿಂದ ಎಲ್ಲಾ ಸೌಲಭ್ಯ ನೀಡಿದ್ದೇವೆ. ಎಲ್ಲರಿಗೂ ತೊಂದರೆ ಆಗಿದ್ದರೆ ಕ್ಷಮೆ ಇರಲಿ ಎಂದರು.

ಹಿರಿಯ ಚಿತ್ರ ಸಾಹಿತಿ ಡಾ. ವಿ ನಾಗೇಂದ್ರ ಪ್ರಸಾದ್ ಮಾತನಾಡಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಕೃಷ್ಣಂ ಪ್ರಯಣ ಸಖಿ ಹಿಟ್ ಆಗುತ್ತದೆ ಬರೆದಿಟ್ಟುಕೊಳ್ಳಿ ಎಂದು ಹೇಳಿದರು.

ಚಿತ್ರದಲ್ಲಿ ನಟಿಸಿರುವ ಚಂದನ ಗೌಡ, ಜಗ್ಗಪ್ಪ, ಯಶಿಕಾ, ಗಾಯಕ ಜಸ್ ಕರಣ್ ಸಿಂಗ್ ಸೇರಿದಂತೆ ಅನೇಕರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin