“ಬರ್ಗೆಟ್ ಬಸ್ಯಾ” ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ
“ಬರ್ಗೆಟ್ ಬಸ್ಯಾ” ಎನ್ನುವ ವಿಭಿನ್ನ ಶೀರ್ಷಿಕೆ ಇಟ್ಟುಕೊಂಡಿರುವ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದ್ದು ಎಲ್ಲಾ ಅಂದುಕೊಂಡಂತೆ ಅದರೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ಕಚೇರಿಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುವ ಬರ್ಗೆಟ್ ಬಸ್ಯಾ, ಕಂಡ ಕಂಡ ಹುಡುಗಿಯರನ್ನೆಲ್ಲ ಪ್ರೀತಿಸಬೇಕೆಂದು ಹಠ ಹಿಡಿಯುತ್ತಾನೆ. ಹುಡುಗಿಯಗೆ ಪ್ರಿಯಕರನಿದ್ದರು ಸಹ ನನ್ನನ್ನು ಪ್ರೀತಿಸುವಂತೆ ಕೇಳುತ್ತಾನೇ. ಸರಿಸುಮಾರು 55 ಜನ ಹುಡುಗಿಯರು ಇವನ ಜೀವನದಲ್ಲಿ ಹಾದು ಹೋಗುತ್ತಾರೆ.
ಇದರ ಹಿಂದೆ ಏನನ್ನೂ ಹೇಳೋಕೆ ಹೊರಟಿದ್ದಾನೆ ಎಂಬುದಕ್ಕೆ ನೀವು ಈ ಸಿನಿಮಾವನ್ನು ನೋಡಬೇಕಾಗುತ್ತೆ. ಜನವರಿ 9ಕ್ಕೆ ಚಿತ್ರದ ಟೀಸರ್ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಹಾಗೂ ಚಿತ್ರವನ್ನು ಫೆಬ್ರವರಿ ಅಲ್ಲಿ ರಿಲೀಸ್ ಮಾಡಲು ಸಿದ್ಧತೆಗಳು ನಡೆಯುತ್ತಿದೆ ಎಂದು ನಿರ್ದೇಶಕ ರೀಶ್ ಹಿರೇಮಠ್ ಹೇಳಿದ್ದಾರೆ
ಚಿತ್ರಕ್ಕೆ ನಾಗಾರ್ಜುನ ರೆಡ್ಡಿ ಬಂಡವಾಳ ಹಾಕಿದ್ದು ತಾರಾಗಣದಲ್ಲಿ ರೀಶ್ ಹಿರೇಮಠ್. ಸಂಗೀತ ಎನ್ ಸ್ವಾಮಿ ಮತ್ತಿತತರಿದ್ದಾರೆ .ಸಿದ್ದಾರ್ಥ ಕಾಮತ್ ಸಂಗೀತಮ ಶ್ಯಾಮ್ ಸಾಲ್ವಿನ್ ಛಾಯಾಗ್ರಹಣ, ಸಿದ್ದು ದಳವಾಯಿ ಸಂಕಲವಿದೆ.