“ಬರ್ಗೆಟ್ ಬಸ್ಯಾ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಹಿರಿಯ ನಟಿ ಪ್ರೇಮ
ಕಾಮಿಡಿ ಕಥಾ ಹಂದರ ಹೊಂದಿರುವ ” ಬರ್ಗೆಟ್ ಬಸ್ಯಾ”. ಚಿತ್ರ ಮುಂದಿನ ತಿಂಗಳು ತೆರೆಗೆ ಬರಲು ಸಜ್ಜಾಗಿದೆ. ಇದಕ್ಕೂ ಮುನ್ನ. ಹಿರಿಯ ನಟಿ ಪ್ರೇಮಾ ಚತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು

ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ ಹರೀಶ್ ,ಹಾಸ್ಯ ಕಲಾವಿದ ಗಿಲ್ಲಿ ನಟ ಸೇರಿದಂತೆ ಮತ್ತಿತರರು ಈ ವೇಳೆ ಉಪಸ್ಥಿತರಿದ್ದು ಚಿತ್ರಕ್ಕೆ ಮತ್ತು ತಂಡಕ್ಕೆ ಶುಭಕೋರಿದರು.
ನಟ ಧೃವ ಸರ್ಜಾ, ನಿರ್ದೇಶಕರಾದ ಆರ್. ಚಂದ್ರು, ಶಶಾಂಕ್, ರಮೇಶ್ ಇಂದಿರಾ, ಆಯೋಗ್ಯ ಮಹೇಶ್, ಡ್ರಾಗನ್ ಮಂಜು, ಯುವ ನಟ ಅಕ್ಷಿತ್ ಮತ್ತಿತರರು ಚಿತ್ರದ ಟ್ರೈಲರ್ ಮತ್ತು ಟೀಸರ್ ವೀಕ್ಷಿಸಿ ಮಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಹಿರಿಯ ನಟಿ ಪ್ರೇಮಾ ಮಾತನಾಡಿ, ಬರ್ಗೆಟ್ ಬಸ್ಯಾ ಚಿತ್ರದಲ್ಲಿ ತೋರಿಸಿರುವ ವಿಷಯವನ್ನು ಬಹಳ ಹಿಂದೆಯೇ ನಟ,ನಿರ್ದೇಶಕ ಉಪೇಂದ್ರ ತೋರಿಸಿದ್ದಾರೆ. ಟ್ರೈಲರ್ ನೋಡುತ್ತಿದ್ದರೆ ಕಾಶಿನಾಥ್ ಅವರ ಚಿತ್ರಗಳು ನೆನಪಿಗೆ ಬರುತ್ತಿದೆ. ಟ್ರೈಲರ್ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೇನೆ. ಮೊದಲ ದಿನ ಮೊದಲ ಶೋ ಚಿತ್ರ ನೋಡಬೇಕು ಎನ್ನುವ ಕುತೂಹಲ ಹೆಚ್ಚಿಸಿದೆ. ಸಿನಿಮಾ ನೋಡುತ್ತೇನೆ. ನಿರ್ದೇಶಕ , ನಟ ರಿಷ್ ಹಿರೇಮಠ್ ಸಹಜ ಅಭಿನಯದಿಂದ ಗಮನ ಸೆಳೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಯಕ ಕಮ್ ನಿರ್ದೇಶಕ ರಿಷ್ ಹಿರೇಮಠ್ , ಹಿರಿಯ ನಟಿ ಪ್ರೇಮಾ ಅವರ ಯಜಮಾನ ಚಿತ್ರವನ್ನು ಮೊದಲ ಬಾರಿಗೆ ಚಿತ್ರಮಂದಿರದಲ್ಲಿ ನೋಡಿದ್ದೆ ಈಗ ಮೊದಲ ಚಿತ್ರದ ಟ್ರೈಲರ್ ಅನ್ನು ಅವರೇ ಬಿಡುಗಡೆ ಮಾಡಿ ಮಾಡಿದ್ದಾರೆ. ನಾಯಕನಾಗಲು ಭಾ.ಮ ಹರೀಶ್ ಕಾರಣ. ಕಾಶೀನಾಥ್ ಮಾದರಿಯ ಚಿತ್ರ ನೀನೇ ಮಾಡು ಎಂದು ಹುರಿದುಂಬಿಸಿದರು. ಹೀಗಾಗಿ ಚಿತ್ರ ತಯಾರಾಗಿದೆ ಎಂದರು.
ಬರ್ಗೆಟ್ ಬಸ್ಯಾ ಚಿತ್ರದಲ್ಲಿ 50 ರಿಂದ 55 ರಿಂದ ಹುಡುಗಿಯರು ನಟಿಸಿದ್ದಾರೆ. ಎಲ್ಲರೂ ಒಂದೊಂದು ಸನ್ನಿವೇಶದಲ್ಲಿ ಬಂದು ಹೋಗುತ್ತಾರೆ. ನಾಯಕನಾಬೇಕು ಅಂದುಕೊಂಡಿರಲ್ಲ, ಪ್ರೀತಿಸಿದ ಹುಡುಗಿ ಕೈ ಕೊಟ್ಟ ಹಿನ್ನೆಲೆಯಲ್ಲಿ ಆಕೆಯ ತನ್ನ ಮೇಲಿನ ಪ್ರೀತಿಯಿಂದ ಸಾಧನೆ ಮಾಡಬೇಕು ಎಂದು ಹೇಳಿದಳು, ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಜೀವನಕಗಕಾಗಿ ಫೋಟೋಗ್ರಾಫರ್, ಹಮಾಲಿ ಕೆಲಸ ಮಾಡಿದ್ದೇನೆ. ಆರಂಭವಾಗಿದೆ. ಚಿತ್ರವನ್ನು ಪ್ರೀತಿಸಿದ ಹುಡುಗಿಗೆ ಸಮರ್ಪಣೆ ಮಾಡುವುದಾಗಿ ಹೇಳಿದರು.
ಕಿರುಚಿತ್ರದ ಮೂಲಕ ಸಿನಿಮಾ ಆರಂಭ, ಬಿ.ಎನ್ ಸ್ವಾಮಿ ಅವರ ಬಳಿ ಕಥೆ ಬರಿತಿದ್ದೆ. ಹುಡುಗಿಗಾಗಿ ಸಿನಿಮಾ ಮಾಡಿದ್ದೇನೆ. ಸುಮಾರು 40 ದಿನಗಳ ಕಾಲ ಬೆಂಗಳೂರು, ಸಕಲೇಶಪುರ, ತೀರ್ಥಹಳ್ಳಿ ಸುತ್ತ ಮುತ್ರ ಚಿತ್ರೀಕರಣ ಮಾಡಲಾಗಿದೆ ಎಂದರು

ನಿರ್ಮಾಪಕ ನಾಗಾರ್ಜುನ ರೆಡ್ಡಿ ಮಾತನಾಡಿ, ಟ್ರೈಲರ್ ಅನ್ನು ಹಿರಿಯ ನಟಿ ಹಾರೈಸಿರುವುದು ಖುಷಿಕೊಟ್ಡಿದೆ ಎಂದರೆ ಸಹ ನಿರ್ಮಾಪಕ ಮಲ್ಲಿಕಾರ್ಜುನ ಎಲ್ಲರ ಸಹಕಾರಲಿ ಎಂದು ಕೇಳಿಕೊಂಡರು.
ಗಿಲ್ಲಿ ನಟ ಮಾತನಾಡಿ, ನಾನೂ ಹೊಸಬ ,ಹೊಸಬರನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶ ತಂಡಕ್ಕೆ ಒಳ್ಳೆಯದಾಗಲಿ ಎಂದರು.
ಅದ್ದೂರಿ ಬಸವ, ಮಾತನಾಡಿ ನಟಿಯರಾದ ಪೂಜಾ, ಕಾವ್ಯ ಮತ್ತು ಅದ್ವಿಕಾ ಛಾಯಾಗ್ರಾಹಕ ಶ್ಯಾಮ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

