Young actors Dharma Keerthiraj, Tilak, Sonu Gowda in Kannada film 'Tenant'

ಕನ್ನಡದಲ್ಲಿ ‘ಟೆನೆಂಟ್’ ಚಿತ್ರದಲ್ಲಿ ಯುವ ನಟರಾದ ಧರ್ಮ ಕೀರ್ತಿರಾಜ್, ತಿಲಕ್, ಸೋನು ಗೌಡ - CineNewsKannada.com

ಕನ್ನಡದಲ್ಲಿ ‘ಟೆನೆಂಟ್’ ಚಿತ್ರದಲ್ಲಿ ಯುವ ನಟರಾದ ಧರ್ಮ ಕೀರ್ತಿರಾಜ್, ತಿಲಕ್, ಸೋನು ಗೌಡ

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಅದರ ಭಾಗವಾಗಿ ಮೂಡಿ ಬರ್ತಿರುವ ಸಿನಿಮಾ ಟೆನೆಂಟ್..ಟೆನೆಂಟ್ ಎಂದರೆ ಬಾಡಿಗೆದಾರ..ಯುವ ಪ್ರತಿಭೆ ಶ್ರೀಧರ್ ಶಾಸ್ತ್ರೀ ನಿರ್ದೇಶನ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ.

ವಿಎಫ್ ಎಕ್ಸ್ ನಲ್ಲಿ 4 ವರ್ಷದ ಅನುಭವವಿರುವ ಶ್ರೀಧರ್ ಮೊದಲ ಪ್ರಯತ್ನ ಟೆನೆಂಟ್. ಒಂದಷ್ಟು ಕಿರುಚಿತ್ರ ನಿರ್ದೇಶಿಸಿರುವ ಅವರೀಗ ನಿರ್ದೇಶಕರಾಗಿ ಸ್ಯಾಂಡಲ್‍ವುಡ್‍ಗೆ ಹೆಜ್ಜೆ ಇಡುತ್ತಿದ್ದಾರೆ. ಶ್ರೀಧರ್ ಹೊಸ ಪ್ರಯತ್ನಕ್ಕೆ ಪ್ರತಿಭಾನ್ವಿತ ತಾರಾಬಳಗ ಸಾಥ್ ಕೊಟ್ಟಿದೆ. ಧರ್ಮ ಕೀರ್ತಿರಾಜ್, ತಿಲಕ್ ರಾಜ್, ಸೋನು ಗೌಡ, ರಾಕೇಶ್ ಮಯ್ಯ ಹಾಗೂ ಉಗ್ರಂ ಮಂಜು ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ ಶ್ರೀಧರ್ ಶಾಸ್ತ್ರೀ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಬೆಂಗಳೂರಿನ ಮನೆಯೊಂದರಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಮಾಸ್ಟರ್ ಚಾಯ್ಸ್ ಕ್ರಿಯೇಷನ್ ನಡಿ ನಾಗರಾಜ್ ಟಿ ಟೆನೆಂಟ್ ಸಿನಿಮಾ ನಿರ್ಮಿಸುತ್ತಿದ್ದು, ಪೃಥ್ವಿರಾಜ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.

ಗಿರೀಶ್ ಹೋತೂರ್ ಸಂಗೀತ, ಉಜ್ವಲ್ ಚಂದ್ರ ಸಂಕಲನ, ಮನೋಹರ್ ಜೋಷಿ ಛಾಯಾಗ್ರಹಣ ಚಿತ್ರಕ್ಕಿದೆ. ಶ್ರೀಧರ್ ಶಾಸ್ತ್ರಿ, ಪ್ರವೀಣ್ ಪ್ರಕಾಶ್, ಪ್ರದೀಪ್ ಚಂದ್ರ, ಪ್ರಸನ್ನ ಭಟ್, ಪುರಷೋತ್ತಮ್ ಎ, ರಾಘವೇಂದ್ರ ಸಿ.ಪಿ, ಕಾರ್ತಿಕ್ ಎಸ್.ಎಸ್ ಸಂಭಾಷಣೆ ಬರೆದಿದ್ದು, ಐಶ್ವರ್ಯ ರಂಗರಾಜನ್, ಅನಿರುದ್ಧ ಶಾಸ್ತ್ರಿ, ಗಿರೀಶ್ ಹೋತೂರ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸದ್ಯ ಫಸ್ಟ್ ಲುಕ್ ರಿಲೀಸ್ ಮಾಡಿರುವ ಚಿತ್ರತಂಡ ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin