ಕೊಲೆಯ ಸುತ್ತ ಕುತೂಹಲದ ಕೌತುಕ
ಚಿತ್ರ: ಸದ್ದು ವಿಚಾರಣೆ ನಡೆಯುತ್ತಿದೆ
ನಿರ್ದೇಶನ: ಭಾಸ್ಕರ್ ಆರ್ ನೀನಾಸಂ
ತಾರಾಗಣ: ರಾಕೇಶ್ ಮಯ್ಯ, ಪಾವನಾ ಗೌಡ, ಮಧುನಂದನ್,ಅಚ್ಯುತ್ ಕುಮಾರ್, ಜಹಂಗೀರ್, ರಾಘು ಶಿವಮೊಗ್ಗ, ಕೃಷ್ಣ ಹೆಬ್ಬಾಳೆ ಮತ್ತಿತರರು
ರೇಟಿಂಗ್: * 3/5
ಅಂತರ್ಜಾತಿ ವಿವಾಹ, ನವವಿವಾಹಿತರ ಹತ್ಯೆ, ಆಸ್ತಿಯ ವ್ಯಾಮೋಹ, ಹೊಸ ಶೈಲಿಯ ನಿರೂಪಣೆ ಹೊಂದಿರುವ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ “ ಸದ್ದು ವಿಚಾರಣೆ ನಡೆಯುತ್ತಿದೆ.”
ನಟನಾಗಿ ಗುರುತಿಸಿಕೊಂಡಿರುವ ಭಾಸ್ಕರ್ ನೀನಾಸಂ, ಕೊಲೆಯ ಸುತ್ತಾ ಕುತೂಹಲದ ಕೌತುಕದ ಕತೆ ಹೊಂದಿರುವ ವಿಭಿನ್ನ ನಿರೂಪಣೆ ಇರುವ ಚಿತ್ರವನ್ನು ನೈಜತೆಗೆ ಹತ್ತಿರವಾಗಿ ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಹಿರಿಮಗಳ ಒತ್ತಾಸೆಗೆ ಕಟ್ಟುಬಿದ್ದ ತಂದೆ ತಾಯಿ ಎರಡನೇ ಮಗಳು ಜನನಿಯನ್ನು ( ಪಾವನಾ ಗೌಡ) ಅಳಿಯನ ತಮ್ಮನಿಗೆ ಮದುವೆ ಮಾಡಿಕೊಡಲು ಮುಂದಾಗುತ್ತಾರೆ. ಜನನಿಗೋ ಇದು ಇಷ್ಟವಿಲ್ಲ. ಒಲ್ಲದ ಮದುವೆಯನ್ನು ಮುಂದೂಡುವ ಸಲುವಾಗಿ ನಾನಾ ಉಪಾಯ ಮಾಡುತ್ತಾಳೆ. ಕೆಲಸ ಸಿಕ್ಕ ಬಳಿಕವೂ ಭಾವನ ತಮ್ಮ ಹರೀಶ ( ರಾಘು ಶಿವಮೊಗ್ಗ) ನನ್ನು ಮದುವೆಯಾಗಲು ನಿರಾಕರಿಸುತ್ತಾಳೆ