Movie Review : Kambli Hula a mirror for Malenaadu Culture
ಮಲೆನಾಡಿನ ಪರಿಸರದ ಹಲವು ಮುಖಗಳ ಅನಾವರಣ

ಚಿತ್ರ; ಕಂಬ್ಲಿ ಹುಳ
ನಿರ್ದೇಶನ : ನವನ್ ಶ್ರೀನಿವಾಸ್
ತಾರಾಗಣ : ಅಂಜನ್ ನಾಗೇಂದ್ರ , ಅಶ್ವಿತಾ. ಆರ್. ಹೆಗ್ಡೆ , ರೋಹಿತ್ ಕುಮಾರ್, ಸಂಪತ್ ಶೆಟ್ಟಿ , ದೀಪಕ್ ರೈ , ಸಂಧ್ಯಾ ಮತ್ತಿತರರು
ರೇಟಿಂಗ್ : * * * * 4 / 5
ಮಲೆನಾಡಿನ ಪರಿಸರ, ಬದುಕು, ಬವಣೆ, ಸ್ನೇಹ,ಪ್ರೀತಿ ವನ್ಯ ಸಂಪತ್ತು,,ಕಪ್ಪೆಗಳ ಮಾರಾಟದ ಜಾಲದ ಕರಾಳ ಮುಖ ಸೇರಿದಂತೆ ವಿವಿಧ ವಿಷಗಳನ್ನು ಮನಮುಟ್ಟುವಂತೆ ತೆರೆಯ ಮೇಲೆ ಕಟ್ಟಿಕೊಟ್ಟಿರುವ ಚಿತ್ರ ” ಕಂಬ್ಲಿ ಹುಳ”.
ಗೆಳಯರ ಬಳಗ, ಓಡಾಡಿದ ಪರಿಸರ,ಪಶ್ಚಿಮ ಘಟ್ಟ ಪ್ರದೇಶಲ್ಲಿ ನಡೆಯುವ ಕರಾಳ ಮುಖ ಸೇರಿದಂತೆ ಕೆಲವೊಂದು ಸೂಕ್ಷ್ಮ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ನವನ್ ಶ್ರೀನಿವಾಸ್