Review: A cute love story of two girls love OTP

Review: ಇಬ್ಬರ ಹುಡುಗಿಯರ ಮುದ್ದಿನ ಹುಡುನ ಪ್ರೇಮ ಕಹಾನಿ ಲವ್ ಒಟಿಪಿ - CineNewsKannada.com

Review: ಇಬ್ಬರ ಹುಡುಗಿಯರ ಮುದ್ದಿನ ಹುಡುನ ಪ್ರೇಮ ಕಹಾನಿ ಲವ್ ಒಟಿಪಿ

ಚಿತ್ರ: ಲವ್ ಒಟಿಪಿ
ನಿರ್ದೇಶನ: ಅನೀಶ್ ತೇಜೇಶ್ವರ್
ತಾರಾಗಣ: ಅನೀಶ್ ತೇಜೇಶ್ವರ್, ಸ್ವರೂಪಿಣಿ, ಜಾನ್ವಿಕಾ ಕಲಾಕೇರಿ, ರಾಜೀವ್ ಕನಕಾಲ, ಪ್ರಮೋದಿನಿ, ರಘುಭಟ್, ಸ್ವಾತಿ, ತುಳಸಿ, ನಾಟ್ಯರಂಗ ಮತ್ತಿತರರು
ರೇಟಿಂಗ್ :*** 3.5/5

ಪ್ರೀತಿ,ಪ್ರೇಮದ ಅನೇಕ ಕಥೆಗಳು ಆಗಾಗ ತೆರೆಗೆ ಬರುತ್ತಿವೆ, ಆದರೂ ಅದರೊಳಗೊಂದು ವಿಭಿನ್ನತೆ ಮತ್ತು ವಿಶೇಷತೆಗಳನ್ನು ಮುಂದಿಟ್ಟುಕೊಂಡೇ ನಿರ್ದೇಶಕರು ಕಾಲಕಾಲಕ್ಕೆ ಚಿತ್ರವನ್ನು ಹೊಸತನದಲ್ಲಿ ಪ್ರೇಕ್ಷಕರ ಮುಂದೆ ಇಡುತ್ತಿದ್ದಾರೆ, ಅಂತಹ ಚಿತ್ರಗಳ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆ “ಲವ್ ಒಟಿಪಿ”

ಪ್ರೀತಿ ಎಂದರೆ ಒತ್ತಡ, ತಾವು ಪ್ರೀತಿ ಮಾಡಿದ ಹುಡುಗ, ಹುಡುಗಿಯನ್ನು ಬೇರೆ ಯಾರೂ ಕಣ್ಣೆತ್ತಿ ನೋಡಬಾರದು ಅವರು ತಮಗೆ ಮೀಸಲು ಎನ್ನುವ ಪೊಸೆಸೀವ್‍ನೆಸ್, ಹೇಳಿದ ಸಮಯಕ್ಕೆ ಹಾಜರಾಗದಿದ್ದರೆ ಮತ್ತದೇ ಕಿರಿಕ್, ಜಗಳ, ಅರೆ ಕ್ಷಣವೇ ಪ್ರೀತಿ,ಪ್ರೇಮ ಮೋಹ, ಕಾಮ, ಹೀಗೆ..

ನಿರ್ದೇಶಕ ಅನೀಶ್ ತೇಜೇಶ್ವರ್ ಇಂತಹುದೇ ವಿಷಯಗಳನ್ನು ಮುಂದಿಟ್ಟುಕೊಂಡು ಲವ್ ಒಟಿಪಿಯನ್ನು ಹೊಸತನದಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಅದರಲ್ಲಿ ಅವರು ಯಶಸ್ಸು ಕಂಡಿದ್ದಾರೆ ಕೂಡ. ಈ ಮೂಲಕ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೆ ಪೂರಕವಾಗಿ ಆಯ್ಕೆ ಮಾಡಿಕೊಂಡ ಕಥೆ, ಕಲಾವಿದರು ಕೂಡ ಸಾಥ್ ನೀಡಿದ್ದಾರೆ.

ಕ್ರಿಕೆಟರ್ ಆಗಬೇಕು ಎನ್ನುವ ಕನಸು ಕಂಡ ಅಕ್ಷಯ್ ( ಅನೀಶ್ ತೇಜೇಶ್ವರ್)ಗೆ ಕಾಲೇಜು ಹುಡುಗಿ ಸನಾ (ಸ್ವರೂಪಿಣಿ) ಪ್ರೀತಿಸುತ್ತಾಳೆ ಅದು ಎಷ್ಟೆಂದರೆ ಯಾರಿಗೂ ಡೋಂಟ್ ಕೇರ್ ಮಾಡದ ಹುಡುಗಿ, ತಾನು ಅಂದುಕೊಂಡದ್ದು ಆಗಬೇಕು ಅಷ್ಟೆ. ಈಕೆಯ ಪ್ರೀತಿ ಅಕ್ಷಯ್‍ಗೆ ಕಿರಿಕಿರಿ ಉಂಟುಮಾಡುತ್ತದೆ, 5 ವರ್ಷ ಪ್ರೀತಿಯಲ್ಲಿದ್ದರೂ ಆತನಿಗೆ ಕಾಮ ಬಿಟ್ಟು ಬೇರೇನೇ ಆಕೆಯ ಮೇಲೆ ಕಾಣದು. ಇಂತಹ ನಡುವೆ ಫಿಸಿಯೋ ನಕ್ಷತ ( ಜಾನ್ವಿಕಾ ಕಲಾಕೇರಿ) ಕಂಡು ಆಕೆಯ ಮೇಲೆ ಅಕ್ಷಯ್ ಮೋಹಕ್ಕೊಳಗಾಗುತ್ತಾನೆ

ಈಗಾಗಲೇ 5 ವರ್ಷದಿಂದ ಮತ್ತೊಂದು ಹುಡುಗಿಯ ಜೊತೆಗೆ ಪ್ರೀತಿಯಲ್ಲಿರುವ ಅಕ್ಷಯ್, ಇನ್ನೊಬ್ಬ ಹುಡುಗಿಯನ್ನೂ ಪ್ರೀತಿಸುತ್ತಾನೆ, ಇದು ನಕ್ಷತ್ರಕ್ಕೆ ಗೊತ್ತಾಗಿಬಿಡುತ್ತದೆ.ಇಬ್ಬರು ಹುಡುಗಿಯರನ್ನು ಪ್ರೀತಿಸು ಆತನ ಕಷ್ಟ, ಕೋಟಲೆ, ಅದರಿಂದ ಎದುರಸುವ ಸಮಸ್ಯೆ ಇದರಿಂದ ಪಾರಾಗುತ್ತಾನಾ, ಇತ್ತ ಸನಾ ಪ್ರೀತಿಸಿದ ಹುಡುಗನನ್ನು ಪಡೆಯಲು ಏನೆಲ್ಲಾ ಮಾಡ್ತಾಳೆ, ಅಕ್ಷಯ್ ಯಾರ ಪಾಲಾಗುತ್ತಾನೆ, ಕ್ರಿಕೆಟರ್ ಆಗುವ ಕನಸು ನನಸಾಗುತ್ತಾ ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.

ನಿರ್ದೇಶಕ ಅನೀಶ್ ತೇಜೆಶ್ವರ್, ನಟನೆ ಮತ್ತು ನಿರ್ದೇಶನದಲ್ಲಿ ತಾವು ಅಂದುಕೊಂಡದ್ದನ್ನು ತೆರೆಯ ಮೇಲೆ ತರುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ನಟನೆಯಲ್ಲಿಯೂ ಒಂದು ಕೈ ಮುಂದೆ. ನಟನೆ ಮತ್ತು ನಿರ್ದೇಶನ ಎರಡೂ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಪ್ರೇಕ್ಷಕರಿಗೆ ಉತ್ತಮ ಚಿತ್ರ ನೀಡುವ ಪ್ರಯತ್ನ ಮಾಡಿದ್ದಾರೆ.

ನಾಯಕಿಯರ ಪೈಕಿ ಸ್ವರೂಪಿಣಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಈ ಚಿತ್ರದ ಮೂಲಕ ಒಂದಷ್ಟು ಅವಕಾಶಗಳು ಹುಡುಕಿಕೊಂಡು ಬರಲಿವೆ ಅಷ್ಟರ ಮಟ್ಟಿಗೆ ಮೈಚಳಿ ಬಿಟ್ಟು ನಟಿಸಿದ್ದಾರೆ.

ಮತ್ತೊಬ್ಬ ನಟಿ ಜಾನ್ವಿಕಾ ಮುಗ್ದತೆಯಿಂದೇ ಗಮನ ಸೆಳೆದಿದ್ದಾರೆ. ಪಾತ್ರದ ಮೂಲಕ ಹೆಚ್ಚು ಇಷ್ಟವಾಗುತ್ತಾರೆ. ಇನ್ನುಳಿದಂತೆ ಪ್ರಮೋದಿನಿ, ಕೃಷ್ಣಭಟ್, ತುಳಿಸಿ, ನಾಟ್ಯರಂಗ ಸೇರಿದಂತೆ ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.

ಕನ್ನಡದಲ್ಲಿ ರಾಜೀವ್ ಕನಕಾಲ ಮಾಡಿರುವ ಇನ್ಸ್ ಪೆಕ್ಟರ್ ಪಾತ್ರಕ್ಕೆ ರಂಗಾಯಣ ರಘು ಅಥವಾ ಅಚ್ಯುತ್ ಕುಮಾರ್ ಅವರನ್ನು ಹಾಕಿಕೊಂಡಿದ್ದರೆ ಚಿತ್ರಕ್ಕೆ ಮತ್ತಷ್ಟು ಪೂರಕವಗುತ್ತಿತ್ತು. ಹಾಗಂತ ಚಿತ್ರ ಪ್ರೇಕ್ಷಕರ ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin