Review: A social concern film that raises awareness about the problem of vitiligo, “Bilichukki Hallihakki”

Review: ತೊನ್ನು ಸಮಸ್ಯೆ ಕುರಿತು ಜಾಗೃತಿ ಮೂಡಿಸುವ ಸಾಮಾಜಿಕ ಕಳಕಳಿಯ ಚಿತ್ರ “ಬಿಳಿಚುಕ್ಕಿ ಹಳ್ಳಿಹಕ್ಕಿ” - CineNewsKannada.com

Review: ತೊನ್ನು ಸಮಸ್ಯೆ ಕುರಿತು ಜಾಗೃತಿ ಮೂಡಿಸುವ ಸಾಮಾಜಿಕ ಕಳಕಳಿಯ ಚಿತ್ರ “ಬಿಳಿಚುಕ್ಕಿ ಹಳ್ಳಿಹಕ್ಕಿ”

ಚಿತ್ರ: ಬಿಳಿಚುಕ್ಕಿ ಹಳ್ಳಿಹಕ್ಕಿ
ನಿರ್ದೇಶನ : ಮಹೇಶ್ ಗೌಡ
ತಾರಾಗಣ: ಮಹೇಶ್ ಗೌಡ, ಕಾಜಲ್ ಕುಂದರ್, ಲಕ್ಷ್ಮಿ ಸಿದ್ದಯ್ಯ, ರವಿ ಭಟ್, ವೀಣಾ ಸುಂದರ್, ಜಹಂಗೀರ್ ಮತ್ತಿತರರು
ರೇಟಿಂಗ್: *** 3.5/5

“ ಯಾಕೋ ಮಗ ಸ್ಕೂಲ್‍ಗೆ ಹೋಗೋಲ್ವೇನೋ…
ಇಲ್ಲಮ್ಮ ನನ್ನ ಪಕ್ಕ ಕೂರುವ ಹುಡುಗರೆಲ್ಲಾ ಬಿಳಿ ಚುಕ್ಕಿ ಬಿಳಿ ಚುಕ್ಕಿ ಅಂತ ಅಣಗಿಸುತ್ತಾರೆ..
ಮತ್ತೊಂದು ಸನ್ನಿವೇಶದಲ್ಲಿ ಈಗಿನ ಕಾಲದಲ್ಲಿ ಎಲ್ಲಾ ಸರಿ ಇರುವವರಿಗೆ ಹೆಣ್ಣು ಸಿಗಲ್ಲ, ನನಗೆ ಯಾರು ಕೊಡ್ತಾರೆ..
ನೀನು ರಾಜಕುಮಾರ ಥರ ಇದೀಯ ಮಗ.. ಮದುವೆ ವಯಸ್ಸು ಮೀರ್ತಾ ಇದೆ,
ಅಮ್ಮ ಮಗನ ಸಂಭಾಷಣೆ ಮತ್ತೊಂದೆಡೆ..

“ನೀವು ನೋಡಿದ್ರೆ ಸುಂದರವಾಗಿದ್ದೀರಾ ನನ್ನಂಥವನ್ನು ಯಾಕೆ ಒಪ್ಪಿಕೊಂಡ್ರಿ..”
ಮೈನಲ್ಲಿ ಆಗಿರೋ ಗಾಯಕ್ಕೂ ಮನಸ್ಸಿನಲ್ಲಿ ಆಗಿರೋ ಗಾಯಕ್ಕೂ ವ್ಯತ್ಯಾಸವೇ ಕಾಣಲಿಲ್ಲ, ಇಬ್ಬರೂ ಸೇರಿ ಪರಿಹಾರ ಹುಡುಕೋಣ ಅಂತ, ಆ ಕಡೆಯಿಂದ ಆಕೆ ಹೇಳ್ತಾಳೆ. ಇದು ಗಂಡ-ಹೆಂಡತಿಯ ನಡುವೆ ನಡೆಯುವ ಮಾತುಕತೆ.

ತೊನ್ನಿನ ಸಮಸ್ಯೆಯಿಂದ ಬಳಲುವ ಹುಡುಗನ ತಾಯಿ ತನ್ನ ಮಗನ ಬಗ್ಗೆ ಇರುವ ಕಾಳಜಿ, ಬೆಳೆದುನಿಂತ ಮಗನಿಗೆ ಮದುವೆ ಮಾಡಬೇಕು ಎನ್ನುವ ಹಂಬಲ, ಹಪಹಪಿ.
ವಯಸ್ಸು ದಾಟಿದರೂ ಮದುವೆಯಾಗದ ಹುಡುಗಿ, ಚಿಕ್ಕಂದಿನಲ್ಲಿ ಆದ ಕಹಿಘಟನೆ ಪುರುಷರ ಬಗ್ಗೆ ಅಹಸನೆ ಮೂಡಿವಂತೆ ಮಾಡಿಸಿದ್ದು ಇನ್ನೊಂದೆಡೆಯೂ ಹೆಂಡತಿ ತನ್ನ ಗಂಡನಿಗೆ ಹೇಳುವ ಮಾತು..

ನಿರ್ದೇಶಕ ಮಹೇಶ್ ಗೌಡ ಸಾಮಾಜಿಕ ಕಳಕಳಿ ಇರುವ ಮತ್ತು ತೊನ್ನಿನ ಬಗ್ಗೆ ಜಾಗೃತಿ ಮೂಡಿಸುವ “ಬಿಳಿ ಚುಕ್ಕಿ ಹಳ್ಳಿಹಕ್ಕಿ” ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ, ಆ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಸ್ವತಃ ತೊನ್ನಿನ ಸಮಸ್ಯೆಯಿಂದ ಬಳಲುತ್ತಿರುವ ನಾಯಕ, ನಿರ್ದೇಶಕ ಮಹೇಶ್ ಗೌಡ ಚಿತ್ರರಂಗದಲ್ಲಿ ಅಪರೂಪ ಎನ್ನುವ ಕಥಾ ವಸ್ತುವನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ನಟಿಸಿರುವ ಕಲಾವಿದರು ಪ್ರಶಸ್ತಿ ಸಿಗಲು ಅರ್ಹ ಅಭಿನಯ ನೀಡುವ ಮೂಲಕ‌ ಪ್ರೇಕ್ಷಕರ ಮನ ಗೆದ್ದಿದ್ದಾರೆ

ಚಿತ್ರದಲ್ಲಿ ಅಮ್ಮ ಮಗನ ಪ್ರೀತಿ, ಮಮಕಾರವಿದೆ, ಜೊತೆಗೆ ತನ್ನ ಮಗ ಎಲ್ಲರಂತೆ ಇರಬೇಕು ಎನ್ನುವ ತಾಯಿಯ ಕಕ್ಕುಲಾತಿ, ಸೋದರ ಮಾವ- ಬಾಮೈನದ ಸ್ನೇಹ, ಪ್ರೀತಿಯೂ ಇದೆ,ಇನ್ನೊಂದೆಡೆ ಅಪ್ಪ- ಮಗಳ ಬಾಂಧವ್ಯ, ತನ್ನ ಮಗಳು ರೋಗಿಷ್ಠನ್ನು ಮದುವೆಯಾಗಿ ಸಮಸ್ಯೆ ಎದುರಿಸಿಯಾಳು ಎನ್ನುವ ಅತಿಯಾದ ಪ್ರೀತಿಯೂ ಇದೆ, ಜೊತೆಗೆ ತೊನ್ನು ರೋಗ ಅಂಟು ಸಮಸ್ಯೆಯಲ್ಲ, ಒಬ್ಬರಿಂದ ಮತ್ತೊಬ್ಬರಿಗೆ ಬರುವ ಕಾಯಿಲೆಯಲ್ಲ. ಈ ಬಗ್ಗೆ ಜನರಲ್ಲಿ ಗೊಂದಲ ಬೇಡ ಎನ್ನುವ ಅರಿವು ಮೂಡಿಸುವ ಉದ್ದೇಶವೂ ಇದೆ.

ಶಿವ (ಮಹೇಶ್ ಗೌಡ)ನಿಗೆ ಚಿಕ್ಕಂದಿನಿಂದಲೇ ಬಿಳಿಚುಕ್ಕಿ ತೊನ್ನು ಸಮಸ್ಯೆ ಇರುತ್ತದೆ, ಇದರಿಂದ ನೆರೆ ಹೊರೆಯವರಿಂದ ಸ್ನೇಹಿತರಿಂದ ಅವಮಾನಕ್ಕೆ ಒಳಗಾದವ, ಒಂದು ರೀತಿ ನೋವು ಅವಮಾನ ಆತನಿಗೆ ಮಾಮೂಲು, ಇದೇ ಕಾರಣಕ್ಕೂ ಯಾವ ಹುಡುಗಿಯೂ ಈತನ್ನು ಒಪ್ಪಿಕೊಂಡಿರುವುದಿಲ್ಲ. ವಯಸ್ಸು ಮೀರಿದೂ ಮದುವೆಯಾಗದ ಕವಿತಾ ( ಕಾಜಲ್ ಕುಂದರ್) ಬಂದ ಹುಡುಗರನ್ನೆಲ್ಲಾ ತಿರಸ್ಕರಿಸುತ್ತಾಳೆ, ತೊನ್ನು ಸಮಸ್ಯೆ ಇರುವ ಹುಡುಗ ನೋಡಲು ಬಂದಾಕ್ಷಣ ಹಿಂದೂ ಮುಂದು ನೋಡದೆ ಆತನನ್ನು ಮದುವೆಯಾಗಲು ಒಪ್ಪಿಕೊಂಡು ಬಿಡ್ತಾಳೆ..

ಇದು ಹುಡುಗಿಯ ಅಮ್ಮನಿಗೆ ಇಷ್ಟವಿಲ್ಲ, ಅಪ್ಪ ಮಗಳಿಗೆ ಬೆಂಬಲವಾಗಿ ನಿಲ್ತಾರೆ,ಹಾಗೋ ಹೀಗೋ ಶಿವ- ಕವಿತಾ ಮದುವೆ ಆಗುತ್ತೆ. ಎಲ್ಲವೂ ಸಲೀಲು ಎನ್ನುವಾಗ ಹುಡುಗಿನ ಅಮ್ಮ ಹೇಗಾದರೂ ಮಾಡಿ ಮದುವೆ ಮುರಿದು ಮಗಳಿಗೆ ಮತ್ತೊಂದು ಮದುವೆ ಮಾಡಬೇಕು ಕನವರಿಸುತ್ತಾಳೆ,ಅದಕ್ಕಾಗಿ ಶ್ರಮ ಪಡ್ತಾಳೆ ಕೂಡ. ಇಲ್ಲ ಸಲ್ಲದ ವಿಷಯವನ್ನು ಶಿವನ ಕಿವಿಗೂ ಬೀಳುವಂತೆ ಮಾಡ್ತಾಳೆ. ತೊನ್ನಿನ‌ ಬಗ್ಗೆ ಇರುವ ಅಸಹನೆ ವ್ಯಕ್ತಪಡಿಸುವ ಪಾತ್ರ.ಇದರಿಂದ ಶಿವ- ಕವಿತಾ ನಡುವೆ ಕಂದಕ ಉಂಟಾಗುತ್ತದೆ, ಮುಂದೇನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ.

ನಿರ್ದೇಶಕ ಮಹೇಶ್ ಗೌಡ, ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ, ನಟನಾಗಿಯೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕೆಲವು ಸನ್ನಿವೇಶಗಳು ಮನಮಿಡಿಯುವಂತೆ ಮಾಡಿದೆ, ನಾಯಕಿ ಕಾಜಲ್ ಕುಂದರ್ ಸಹಜಾಭಿನಯದಿಂದ ಗಮನ ಸೆಳೆದಿದ್ಧಾರೆ.

ಇನ್ನೂ ಅಮ್ಮನ ಪಾತ್ರದಲ್ಲಿ ಲಕ್ಷ್ಮಿ ಸಿದ್ದಯ್ಯ, ಅತ್ತೆ ಪಾತ್ರದಲ್ಲಿ ವೀಣಾ ಸುಂದರ್, ಮಾವನಾಗಿ ರವಿ ಭಟ್, ಸೋದರ ಮಾವನಾಗಿ ಜಹಂಗೀರ್ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ., ಎಲ್ಲಿಯೂ ನಾಟಕೀಯತೆ ಅನ್ನಿಸದೆ ಸಹಜ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಜೊತೆಗೆ ಅವರಿಗೆ ಉತ್ತಮ ಪಾತ್ರಗಳು ಸಿಕ್ಕಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.

ನಿರ್ದೇಶಕ ಮಹೇಶ್ ಗೌಡ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲರ್ದದಲ್ಲಿ ಕೆಲವೊಂದು ಸನ್ನಿವೇಶಗಳಿಗೆ ಕತ್ತರಿ ಪ್ರಯೋಗ ಮಾಡಿದ್ದರೆ ಇನ್ನಷ್ಟು ಉತ್ತಮ ಚಿತ್ರ ನೀಡಬಹುದಿತ್ತು. ಆಗಿ ಹೋಯ್ತು ಮುವ್ವತ್ತು ಹಾಡು ಗಮನ ಸೆಳೆಯುತ್ತದೆ.

ಸಾಮಾಜಿಕ ಕಳಕಳಿಯ ಚಿತ್ರವನ್ನು ನೋಡಲು ಅಡ್ಡಿಯಲ್ಲ,ಇಂತಹ ಪ್ರಯತ್ನಗಳಿಗೆ ಪ್ರೋತ್ಸಾಹ ಅಗತ್ಯವೂ ಕೂಡ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin