Review: ಮರ್ಡರ್ ಮಿಸ್ಟ್ರಿಯ ರೋಚಕ ಕಥನದ ಚಿತ್ರ “ಉಸಿರು”
ಚಿತ್ರ : ಉಸಿರು
ನಿರ್ದೇಶಕ: ಪಣೆಮ್ ಪ್ರಭಾಕರ್
ತಾರಾಗಣ: ತಿಲಕ್ ಶೇಖರ್, ಪ್ರಿಯಾ ಹೆಗಡೆ, ಬಾಲ ರಾಜವಾಡಿ, ರಘು ರಮಣಕೊಪ್ಪ,ಅಪೂರ್ವ ನಾಗರಾಜ್, ಅರುಣ್ ಕುಮಾರ್, ರಘು ಪಾಂಡೇಶ್ವರ್, ಚಿಲ್ಲರ್ ಮಂಜು ಇನ್ನೂ ಹಲವರು
ರೇಟಿಂಗ್ : *** 3.5/5
ಕನ್ನಡದಲ್ಲಿ ಇತ್ತೀಚೆಗೆ ವಿಭಿನ್ನ ಬಗೆಯ ಮತ್ತು ಹೊಸತನದ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಪ್ರೇಕ್ಷಕನ ಉಸಿರು ಅರಿತ ಚಿತ್ರ ನಿರ್ದೇಶಕ ಗೆಲುವು ಸಾಧಿಸುತ್ತಾರೆ, ಅಂತಹುದೇ ಮತ್ತೊಂದು ಪ್ರಯತ್ನ “ಉಸಿರು” ಚಿತ್ರ ಈ ವಾರ ತೆರೆಗೆ ಬಂದಿದೆ.
ಕುತೂಹಲಭರಿತ ಕಥೆಯನ್ನು ಮುಂದಿಟ್ಟುಕೊಂಡು ಅದನ್ನು ಪ್ರೇಕ್ಷಕ ಚಿತ್ರಮಂದಿರದ ಸೀಟಿನ ತುದಿಯ ಮೇಲೆ ಕುಳಿತು ಮುಂದೇನು ಎನ್ನುವ ಕುತೂಹಲ ಕೆರಳಿಸುತ್ತಾ ಸಿನಿಮಾ ಮಾಡುವುದು ಒಂದು ಕಲೆಗಾರಿಕೆ. ಅಂತಹ ಕರಗತ ಮಾಡಿಕೊಂಡ ಮಂದಿ ಗೆಲುವಿನ ನಗೆ ಬೀರುತ್ತಾರೆ, ಈ ನಿಟ್ಟಿನಲ್ಲಿ ಮತ್ತೊಂದು ಚಿತ್ರ ಇದು.
ಮೂರು ವಿಭಿನ್ನ ಜೋಡಿಗಳು, ಅವರ ಆಲೋಚನೆ, ಅನುಮಾನ, ದ್ವೇಷ, ಸೇಡು, ಸಿಟ್ಟು ಸೆಡವು, ಮುಗ್ದರ ಸಾವು, ಕಳ್ಳ ಪೋಲೀಸ್ ಆಟ ಸೇರಿದಂತೆ ರೋಚಕ ಕಥನ ಒಳಗೊಂಡಿರುವ ಚಿತ್ರವನ್ನು ನಿರ್ದೇಶಕ ಪಣೆಮ್ ಪ್ರಭಾಕರ್ ತೆರೆಗೆ ಕಟ್ಟಿಕೊಟ್ಟಿದ್ದಾರೆ.
ಇನ್ಸೆಕ್ಟರ್ ರಾಜೀವ್ (ತಿಲಕ್) ಪತ್ನಿ ಐಶು (ಪ್ರಿಯ ಹೆಗಡೆ) ಜೊತೆ ಮಡಿಕೇರಿಯ ಕಾಡಿನ ಪ್ರದೇಶಕ್ಕೆ ಎಂಟ್ರಿಕೊಡುತ್ತಾನೆ, ಅಲ್ಲಿ ನಡೆಯುವ ಅಪರಾಧ ಚಟುವಟಿಕೆ, ಅದಕ್ಕೆ ಪರೋಕ್ಷ ಬೆಂಬಲ, ಕಂಡು ಕಾಣದಂತೆ ಇರುವ ಮಂದಿ, ಇಂತಹುದರಲ್ಲಿ ಪೊಲೀಸ್ ಇನ್ಸ್ ಪೆಕ್ಟರ್, ಆತನಿಗೆ ಪೇದೆ ನಾರಾಯಣ (ರಘು ರಾಮನಕೊಪ್ಪ) ಜೊತೆಯಾಗುತ್ತಾನೆ. ಮತ್ತೊಂದೆಡೆ ಬಾಲ್ಯದಲ್ಲಿ ಯಾವುದೇ ಕೊರತೆ ಇಲ್ಲದೆ ಬೆಳದ ರಾಕೆಟ್ ಹಾಗೂ ಸೈಮನ್ ಆಟೋಟ ಮಿತಿ ಮೀರಿರುತ್ತದೆ
ಗರ್ಭಿಣಿಯರ ಕೊಲೆಬೆಚ್ಚಿ ಬೀಳಿಸುತ್ತದೆ. ಇನ್ಸ್ ಪೆಕ್ಟೆರ್ ಪತ್ನಿಯೂ ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಾಗುತ್ತದೆ. ಅದಕ್ಕೆ ಕಾರಣ ಸರಣಿ ಗರ್ಭಿಣಿಯ ಕೊಲೆ.ಅದನ್ನು ಬೇಧಿಸಲು ಹೊರಟಾಗಾ ಕುತೂಹಲಗಳ ಎಳೆ ಒಂದೊಂದೇ ಬಿಚ್ಚಿಕೊಳ್ಳುತ್ತದೆ. ಅದು ಏನು, ಸರಣಿ ಕೊಲೆಗಳ ಹಿಂದಿರುವವರು ಯಾರು ಎನ್ನುವುದು ಕುತೂಹಲಕಾರಿ,ಅದನ್ನು ಚಿತ್ರದಲ್ಲಿ ನೀಡಿದರೆ ಅದರ ಮಜ,
ನಿರ್ದೇಶಕ ಪಣೆಮ್ ಪ್ರಭಾಕರ್ ಕುತೂಹಲಕಾರಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ, ಇನ್ನಷ್ಟು ಚಿತ್ರಕಥೆಯ ಮೇಲೆ ಬಿಗಿ ಹಿಡಿತ ಇದ್ದರೆ ಉತ್ತಮ ಚಿತ್ರ ನೀಡಬಹುದಿತ್ತು. ಜೊತೆಗೆತಾಯಿ ಮಗನ ಬಾಂಧವ್ಯ, ಗೆಳೆತನ, ಪ್ರೀತಿ, ದ್ವೇಷದ ಸುಳಿಯ ಜೊತೆಗೆ ಮುಂದಿನ ಅಧ್ಯಾಯಕ್ಕೂ ಕಥೆ ಸಾಗುವಂತೆ ಮಾಡಿದ್ದಾರೆ
ನಟ ತಿಲಕ್ ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ಪ್ರಿಯಾಹೆಗಡೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಯುವನಟ ಅರುಣ್ ಕುಮಾರ್ ಬಾಲರಾಜವಾಡಿ, ರಾಘು ರಮಣಕೊಪ್ಪ. ಚಿಲ್ಲರ್ ಮಂಜು ಸೇರಿದಂತೆ ಹಲವು ಕಲಾವಿದರು ತಮಗೆ ಸಿಕ್ಕ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿರುವುದು ಕುತೂಹಲಕಾರಿ,

