Review: ನಿರ್ದೇಶಕನೊಬ್ಬನ ಕಥೆ-ವ್ಯಥೆ ಅನಾವರಣ ಮಾಡುವ ಚಿತ್ರ “ ಅಂದೊಂದಿತ್ತು ಕಾಲ”
ಚಿತ್ರ : ಅಂದೊಂದಿತ್ತು ಕಾಲ
ನಿರ್ದೇಶನ: ಕೀರ್ತಿ
ತಾರಾಗಣ: ವಿನಯ್ ರಾಜ್‍ಕುಮಾರ್, ಅದಿತಿ ಪ್ರಭುದೇವ, ರವಿಚಂದ್ರನ್, ನಿಶಾ ರವಿಕೃಷ್ಣನ್,ಕಡ್ಡಿಪುಡಿ ಚಂದ್ರು, ಪ್ರೊ, ದೊಡ್ಡರಂಗೇಗೌಡ, ಅರುಣಾ ಬಾಲರಾಜ್, ಜಗ್ಗಪ್ಪ, ನಿರ್ಮಾಪಕ ಸುರೇಶ್ ಮತ್ತಿತರರು
ರೇಟಿಂಗ್ : *** 3.5/ 5
ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರು ಮತ್ತು ನಿರ್ದೇಶಕರಾಗಲು ಬರುವ ಮಂದಿ ಪಡುವ ಕಷ್ಟ ಕೋಟಲೆ ಪರಪಾಟಲುಗಳನ್ನು ತೆರೆಯ ಮೇಲೆ ತಂದಿರುವ ವಿಭಿನ್ನ ಮಾದರಿಯ ಚಿತ್ರ “ ಅಂದೊಂದಿತ್ತು ಕಾಲ”.
ನಿರ್ದೇಶಕನಾಗಲು ಬಯಸುವ ಮಹತ್ವಾಂಕ್ಷೆ ಹೊಂದಿರುವರನ್ನು ಚಿತ್ರರಂಗ ನಡೆಸಿಕೊಳ್ಳುವ ರೀತಿ,ನೀತಿ,ಕೊಡುವ ಕಷ್ಟಕೋಟಲೆ,ಎಳು, ಬೀಳು,ಅಮ್ಮ-ಮಗನ ಬಾಂಧವ್ಯ, ಜೊತೆಗೆ ಸಾಧನೆ, ಕಷ್ಟಕಾಲದಲ್ಲಿ ಕೈಹಿಡಿಯುವ ಸ್ನೇಹಿತರ ಸುತ್ತ ಚಿತ್ರವನ್ನು ನಿರ್ದೇಶಕ ಕೀರ್ತಿ ತೆರೆಗೆ ಕಟ್ಟಿಕೊಟ್ಟಿದ್ದಾರೆ.
ಚಿತ್ರರಂಗದಲ್ಲಿ ಸಾಧನೆ ಮಾಡಲು ಊರುಬಿಟ್ಟು ಬಂದ ಅನೇಕ ಪ್ರತಿಭಾನ್ವಿತ ಸಹಾಯಕ ನಿರ್ದೇಶಕರು ಮತ್ತು ನಿರ್ದೇಶಕರ ಪ್ರಯತ್ನಕ್ಕೆ ಕನ್ನಡಿ ಹಿಡಿದ್ದಾರೆ. ಇದರ ಪರಿಣಾಮ ಚಿತ್ರ ಕಡೆತನಕ ನೋಡಿಸಿಕೊಂಡು ಹೋಗುವ ಶಕ್ತಿ ಇದೆ, ಜೊತೆಗೆ ಫ್ಲಾಶ್‍ಬ್ಯಾಕ್ ಕಥನವನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
ಬಾಲ್ಯದಿಂದಲೇ ಸಿನಿಮಾ ಅಂದರೆ ಕುಮಾರ (ವಿನಯ್ ರಾಜ್ ಕುಮಾರ್) ಅವರಿಗೆ ಎಲ್ಲಿಲ್ಲದ ಪ್ರೀತಿ, ವ್ಯಾಮೋಹ,ಅದರಲ್ಲಿಯೂ ಪುಟ್ಟಣ್ಣ ಕಣಗಾಲ್ ಅಂದರೆ ಅಚ್ಚುಮೆಚ್ಚು. ಅಪ್ಪ ಟೆಂಟ್‍ನಲ್ಲಿ ಪ್ರೊಜೆಕ್ಟರ್ ಆಗಿರುವ ಹಿನ್ನೆಲೆಯಲ್ಲಿ ಸಿನಿಮಾ ನೋಡು ಬೆಳೆದವ, ದೊಡ್ಡವನಾದ ಮೇಲೆ ನಿರ್ದೇಶಕನಾಗಬೇಕು ಎನ್ನುವ ಆಸೆ ಹೆಮ್ಮೆರವಾಗಿ ಬೆಳೆಯುತ್ತದೆ.
ಈ ನಡುವೆ ಶಾಲೆಯಲ್ಲಿ ಇರುವ ವೇಳೆ ಸಾಕ್ಷಿ (ನಿಶಾ ರವಿಕೃಷ್ಣನ್) ಮೇಲೆ ಕ್ರಶ್ ಆಗುತ್ತದೆ, ಆಕೆಯ ಹಿಂದೆ ಮುಂದೆ ತಿರುಗಿದ್ದೂ ಉಂಟು, ಆಕೆ ಮುದುವೆಯಾದವಳು ಎನ್ನುವ ಸಂಗತಿ ಆಕಾಶವೇ ಕಳಚಿ ಬಿದ್ದಂತಾಗುತ್ತದೆ. ನಿರ್ದೇಶಕನಾಗಬೇಕು ಎನ್ನುವ ಹಂಬದಿಂದ ಬೆಂಗಳೂರು ಸೇರುವ ಆತನ ಆರಂಭದಲ್ಲಿ ಎದುರಿಸುವ ಸಮಸ್ಯೆಗಳು, ಸಂಕಷ್ಠಗಳು ಅವುಗಳನ್ನು ಮೆಟ್ಟಿನಿಲ್ಲುವ ರೀತಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚು ಮಾಡಿದೆ. ಈ ನಡುವೆ ವಸುಂಧರ (ಅದಿತಿ ಪ್ರಭುದೇವ) ಪರಿಚಯ.
ತಾಯಿ ಆಸೆ ಒಂದೆಡೆಯಾದರೆ, ಚಿಕ್ಕಂದಿನಿಂದಲೂ ಕಡೆ ಗುರಿ ಮತ್ತೊಂದೆಡೆ, ಈ ಪ್ರಯಾಣದಲ್ಲಿ ಜೊತೆಯಾಗುವ ಸ್ನೇಹಿತರು, ಪ್ರೀತಿಸಿದ ಹುಡುಗಿ ಇಲ್ಲದರ ನಡುವೆ ನಿರ್ದೇಶಕನಾಗುತ್ತಾನೆ ಇಲ್ಲ ಮುಂದೇನು ಎನ್ನುವುದನ್ನು ಚಿತ್ರದ ಕಥನ ಕುತೂಹಲ ಅದನ್ನು ಸಿನಿಮಾದಲ್ಲಿ ನೋಡಬೇಕು.
ನಿರ್ದೇಶಕ ಕೀರ್ತಿ ಚಿತ್ರರಂಗದ ನೈಜ ಸಮಸ್ಯೆಯನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ ಜೊತೆಗೆ ಪ್ರೀತಿ,ಸ್ನೇಹ ಎಲ್ಲವೂ ಒಟ್ಟುಗೂಡಿ ಚಿತ್ರವನ್ನು ಕುತೂಹಲಕಾರಿಯಾಗಿಸಿದೆ.
ನಟ ವಿನಯ್ ರಾಜ್ ಕುಮಾರ್ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಜೊತೆಗೆ ಇದುವರೆಗಿನ ಪಾತ್ರಗಳಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ನಟಿ ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್, ರವಿಚಂದ್ರನ್,ನಿಶಾ ರವಿಕೃಷ್ಣನ್, ಕಡ್ಡಿಪುಡಿ ಚಂದ್ರು, ಪ್ರೊ, ದೊಡ್ಡ ರಂಗೇಗೌಡ, ಅರುಣಾ ಬಾಲರಾಜ್, ಜಗ್ಗಪ್ಪ, ನಿರ್ಮಾಪಕ ಸುರೇಶ್ ಮತ್ತಿತತರು ಚಿತ್ರದಲ್ಲಿದ್ದಾರೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

