Review: ನಿರ್ದಯಿಯಾಗಿ ಕೊಲೆ ಮಾಡುವನೇ ಕೊಲೆಯಾಗುವ ಕೌತುಕ ಕಥನದ ಸುತ್ತ “ರಿಪ್ಪನ್ ಸ್ವಾಮಿ”
ಚಿತ್ರ: ರಿಪ್ಪನ್ ಸ್ವಾಮಿ
ನಿರ್ದೇಶನ : ಕಿಶೋರ್ ಮೂಡುಬಿದರೆ
ತಾರಾಗಣ: ವಿಜಯ್ ರಾಘವೇಂದ್ರ, ಅಶ್ವಿನಿ ಚಂದ್ರಶೇಖರ್, ಕೃಷ್ಣ ಮೂರ್ತಿ ಕವತಾರ್ ಯಮುನಾ ಶ್ರೀನಿಧಿ, ಪ್ರಕಾಶ್ ತುಮಿನಾಡು, ಮತ್ತಿತರರು
ರೇಟಿಂಗ್: *** 3.5 / 5
ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಅಕ್ಷರಷಃ ಬದಲಾಗಿದ್ದಾರೆ.ಈಗಾಗಲೇ ತಾವೊಬ್ಬ ಪ್ರತಿಭಾನ್ವಿತ ನಟ ಎನ್ನುವುದನ್ನು ಸಾಬೀತುಪಡಿಸಿದ್ದು ಇದೀಗ ಎಂತಹುದೇ ಪಾತ್ರ ಸಿಕ್ಕರೂ ಮಾಡಬಲ್ಲೆ ಎನ್ನುವುದನ್ನು “ರಿಪ್ಪನ್ ಸ್ವಾಮಿ” ಚಿತ್ರದ ಮೂಲಕ ಸಾಬೀತುಪಡಿಸಿದ್ದಾರೆ.
ನಟ ವಿಜಯ್ ರಾಘವೇಂದ್ರ ಇದುವರೆಗಿನ ಚಿತ್ರ ಜೀವನದ ಚಿತ್ರಗಳು ಒಂದೆಡೆಯಾದರೆ ‘ರಿಪ್ಪನ್ಸ್ವಾಮಿ’ ಮತ್ತೊಂದು ತೂಕ. ಚಿತ್ರದಲ್ಲಿ ಹಾವ-ಭಾವ, ಕಣ್ಣ ಸನ್ನೆ, ಮುಖಭಾವದಲ್ಲಿ ಭಾವಾಭಿನಯ ವ್ಯಕ್ತಪಡಿಸಿದ್ದಾರೆ. ತಾವೊಬ್ಬ ಅಪರೂಪದ ನಟ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಪಡಿಸಿದ್ದಾರೆ. ಅದಕ್ಕೆ ತಕ್ಕಂತೆ ಪಾತ್ರಗಳು, ಅವರೊಳಗಿನ ಕಲಾವಿದನನ್ನು ಹೊರತರುವ ನಿರ್ದೇಶಕರು ಸಿಗಬೇಕಾಗಿದೆ., ಅಂತಹ ಮತ್ತೊಂದು ಚಿತ್ರ ಇದು
ಮಲೆನಾಡಿನ ಎಸ್ಟೇಟ್ನ ಮಾಲೀಕ ರಿಪ್ಪನ್ ಸ್ವಾಮಿ (ವಿಜಯ್ ರಾಘವೇಂದ್ರ) ತನ್ನ ಎಸ್ಟೇಟ್ನಲ್ಲಿ ಕೆಲಸ ಮಾಡುವ ಮಂದಿಯನ್ನು ಪ್ರೀತಿಯಿಂದ ನೋಡಿಕೊಂಡವ. ಯಾರಿಗೆ ಏನೇ ಆದರೂ ಅವರ ಕಷ್ಠಕ್ಕೆ ನಿಲ್ಲವ ವ್ಯಕ್ತಿ ಇಂತಹ ವ್ಯಕ್ತಿ ಒಂದು ಸಮಯದಲ್ಲಿ ತನ್ನ ಜೊತೆ ಇರುವ ಮಂದಿಯ ವಿರುದ್ದ ತಿರುಗಿ ಬೀಳ್ತಾನೆ. ಸ್ವಾಮಿಯ ಹಿಂದೆ ರಿಪ್ಪನ್ ಸೇರಿಕೊಳ್ಳಲು ರೋಚಕ ಇತಿಹಾಸವೂ ಉಂಟು.
ಇತ್ತ ವೈದ್ಯಕೀಯ ಶಿಬಿರಕ್ಕೆ ಬಂದ ಹುಡುಗಿ ಮಂಗಳ (ಅಶ್ವಿನಿ ಚಂದ್ರಶೇಖರ್) ಮೇಲೆ ಮೊದಲ ನೋಟದಲ್ಲಿ ಪ್ರೀತಿ,ಆಕೆಯನ್ನು ಮದುವೆಯಾಗುತ್ತಾನೆ, ಅಲ್ಲಿಂದ ಕಥೆ ಮತ್ತೊಂದು ಮಗ್ಗಲು ಪಡೆದುಕೊಳ್ಳುತ್ತದೆ, ಹಂದಿ ಸಾಕಾಣೆ ಮಾಡುವ ಸ್ವಾಮಿ ಆರ್ಡರ್ ಪಡೆದು ಹಂದಿ ಮಾಂಸ ನೀಡುತ್ತಾನೆ, ಜೊತೆಗೆ ಹಸಿ ಹಂದಿಮಾಂಸ ತಿನ್ನುವ ವ್ಯಕ್ತಿತ್ವದವ.
ಮಲೆನಾಡಿನ ನಿತ್ಯಹರಿದ್ವರ್ಣದ ಕಾಡುಗಳ ಮಧ್ಯೆ ಬದುಕು ಸಾಗಿಸುವ ಮಂದಿಯ ಕಥನದ ಜೊತೆಗೆ ನಿರ್ಧಯಿಯಾಗಿ ಹತ್ಯೆ ಮಾಡುವವನೇ ಹತ್ಯೆಯಾಗುವ ರೋಚಕ ಮತ್ತು ಕುತೂಹಲದ ಕಥನ ಒಳಗೊಂಡಿರುವ ಚಿತ್ರ “ರಿಪ್ಪನ್ ಸ್ವಾಮಿ”. ಅದು ಏನು,ಯಾರು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ನಿರ್ದೇಶಕ ಕಿಶೋರ್ ಮೂಡಿಬಿದರೆ ವಿಭಿನ್ನ ಪ್ರಯತ್ನ ಮಾಡಿದ್ದಾರೆ.ರೋಚಕ ಕಥನವನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.ಕಡೆ ತನಕ ಕುತೂಹಲ ಕಾಯ್ದುಕೊಳ್ಳುವ ಮೂಲಕ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಿದ್ದಾರೆ.
ನಟ ವಿಜಯ್ ರಾಘವೇಂದ್ರ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಅವರ ನಟನೆ, ಹಾವ ಭಾವ ಗಮನ ಸೆಳೆದಿದೆ, ಕೆಲವು ಕಡೆ ಕಣ್ಣಲ್ಲಿ ನಟಿಸಿದ್ದಾರೆ.
ಮುಗ್ದತೆಯಿಂದಲೇ ಗಮನ ಸೆಳೆಯುವ ಅಶ್ವಿನಿ ಚಂದ್ರಶೇಖರ್ ನಿರೀಕ್ಷೆ ಮಾಡದ ರೀತಿ ಮೂಡಿಬಂದಿದೆ, ಈ ಮೂಲಕ ಕನ್ನಡಕ್ಕೆ ಮತ್ತೊಬ್ಬ ಪ್ರತಿಭಾನ್ವಿತ ನಟಿ ಸಿಕ್ಕಂತಾಗಿದೆ, ಯಮುನಾ ಶ್ರೀನಿಧಿ,ಪ್ರಕಾಶ್ ತುಮಿನಾಡು ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ
ರಿಪ್ಪನ್ ಸ್ವಾಮಿ, ಕನ್ನಡದಲ್ಲಿ ಇತ್ತೀಚೆಗೆ ಬಂದ ವಿಭಿನ್ನ ಬಗೆಯ ಚಿತ್ರ, ಅದನ್ನು ತೆರೆಯ ಮೇಲೆ ನೋಡಿದರೆ ಚೆನ್ನ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

