Review; An entertaining family story "Jumbo Circus"

Review ; ಮನರಂಜನೆಯ ಹೂರಣದ ಕೌಟಂಬಿಕ ಕಥನ ” ಜಂಬೋ ಸರ್ಕಸ್ - CineNewsKannada.com

Review ; ಮನರಂಜನೆಯ ಹೂರಣದ ಕೌಟಂಬಿಕ ಕಥನ ” ಜಂಬೋ ಸರ್ಕಸ್

ಚಿತ್ರ : ಜಂಬೋ ಸರ್ಕಸ್
ನಿರ್ದೇಶನ: ಎಂ.ಡಿ ಶ್ರೀಧರ್
ತಾರಾಗಣ: ಪ್ರವೀಣ್ ತೇಜ್, ಅಂಜಲಿ ಅನೀಶ್, ಅಚ್ಚುತ್ ಕುಮಾರ್ , ರವಿಶಂಕರ್ ಗೌಡ, ಲಕ್ಷ್ಮಿ ಸಿದ್ದಯ್ಯ, ಸ್ವಾತಿ, ಆಶಾ ಲತಾ , ಅವಿನಾಶ್ , ನಯನಾ, ಜಗ್ಗಪ್ಪ ಮತ್ತಿತರರು
ರೇಟಿಂಗ್ : *** 3.5 / 5

ಉಸಿರು ಬಿಟ್ಟರೂ ದುಶ್ಮನಿ ಬಿಡಲ್ಲ ನಾನು ನಿಮ್ಮ‌ ಮಗಳಮ್ಮ..”..ಎಂದು ಆಕೆ‌ ಹೇಳ್ತಾಳೆ..
ಇದೊಂದು ಕಡೆ ನಾವ್ಯಾಕಮ್ಮ ಅವಳಿಗೆ ಹೆದರಬೇಕು..ಎಂದು ಈತ ‌ ಹೇಳ್ತಾನೆ..

ನಾಯಕ – ನಾಯಕಿ ಇಬ್ಬರು ತಮ್ಮ ತಾಯಂದಿರಿಗೆ ತಮ್ಮ‌- ತಮ್ಮ‌ ವಿರೋದಿಗಳ ಬಗ್ಗೆ ಹೇಳಿ, ಸೋಲೋ‌ ಮಾತೇ ಇಲ್ಲ ಎಂದು ಶಪಥ ಮಾಡ್ತಾರೆ..

ಇಬ್ಬರ ಹಾವು- ಮುಂಗುಸಿ ರೀತಿಯ ಪ್ರೀತಿಯ ಕಚ್ಚಾಟ ಎನ್ನುವುದನ್ನು ಮತ್ತೆ ಹೇಳಬೇಕಾಗಿಲ್ಲ ಜೊತೆಗೆ ಎರಡು ಕುಟುಂಬಗಳ‌ ಕಥನವೂ ಕೂಡ. ಹುಟ್ಟುವಾಗಲೇ ಎರಡು ಕುಟುಂಬಗಳ‌ ನಡುವೆ ಮಕ್ಕಳು ಅದಲು – ಬದಲಾದ ಘಟನೆ ಕೂಡ. ಎರಡು ಕುಟುಂಬಗಳ ಕತೆಯನ್ನು ಕೌಟಂಬಿಕ ಚೌಕಟ್ಟಿನಲ್ಲಿ ಮನರಂಜನೆಯ ಹೂರಣ ಹದಗೊಳಿಸಿ ತೆರೆಗೆ ಕಟ್ಟಿಕೊಟ್ಡಿರುವ ಚಿತ್ರ ” ಜಂಬೋ ಸರ್ಕಸ್”.

ಅನುಭವಿ ನಿರ್ದೇಶಕ ಎಂ.ಡಿ ಶ್ರೀಧರ್ ಕುಟುಂಬ, ಪ್ರೀತಿ, ಪ್ರೇಮ, ಯಾರಿಗೇನು ನಾವು ಕಡಿಮೆ ಇಲ್ಲ ಎನ್ನುವ ವಿಷಯಗಳನ್ನು ಮುಂದಿಟ್ಡುಕೊಂಡು ಸಿನಿಮಾವನ್ನು ಪ್ರೇಕ್ಷಕರ ಮುಂದೆ ಇಟ್ಡಿದ್ದಾರೆ.

ಲವಲವಿಕೆಯ ನಿರೂಪಣೆ, ನವಿರಾದ ಪ್ರೇಮಕಥೆ ಪ್ರೇಕ್ಷಕರನ್ನು ಕಾಡುತ್ತದೆ ಜೊತೆಗೆ ಇಷ್ಟವಾಗುತ್ತದೆಯೋ ಕೂಡ‌.ಕಥೆಗೆ ಪೂರಕವಾಗಿ ಕಲಾವಿದರು ಸಿಕ್ಕಿರುವುದು ಚಿತ್ರಕ್ಕೆ ಪೂರಕವಾಗಿದೆ.

ಆಕಾಶ್ ( ಪ್ರವೀಣ್ ತೇಜಾ) ಮತ್ತು ಅಂಕಿತಾ ( ಅಂಜಲಿ ಅನೀಶ್) ಒಂದೇ ಕಾಲೇಜಿನಲ್ಲಿ ಓದುತ್ತಿರವರು. ಜೊತೆಗೆ ಎದುರು ಬದುರು ಮನೆಯವರು. ಎರಡೂ ಕುಟುಂಬಗಳು ಆಪ್ತ. ಅಮ್ಮಂದಿರ ಹಾವು -ಮುಂಗುಸಿ ಜಗಳ ಬಿಟ್ಡರೆ ಅಪ್ಪಂದಿರು ಆಪ್ತ ಸ್ನೇಹಿತರು.‌‌ಮಕ್ಕಳು ಹುಟ್ಟುವಾಗಲೇ ತಮ್ಮ ಮಕ್ಕಳಿಗೆ ಮದುವೆ ನಿಶ್ಚಯ ಮಾಡಿದವರು.

ಅಕಾಶ್ ಕಂಡರೆ ಅಂಕಿತಾ ಗೆ ಆಗಿ ಬರುವುದಿಲ್ಲ.. ಅಂಕಿತಾ ಕಂಡರೆ ಆಕಾಶ್ ಆಗಲ್ಲ. ಇಬ್ಬರು ಅಪ್ಪಂದಿರು ತಮ್ಮ‌ ಮಕ್ಕಳನ್ನು‌ ಒಂದು ಗೂಡಿಸಲು ನಾಟಕ ಆಡ್ತಾರೆ. ಒಂದು ವಾರದ ಮಟ್ಟಿಗೆ ಮಕ್ಕಳು ಅದಲು ಬಲಾಗಿ ತಮ್ಮ‌ ವಿರೋದಿಗಳ ಮನೆ ಸೇರ್ತಾರೆ. ಈ ನಡುವೆ ಹೋದ ಮನೆಯಲ್ಲಿ ಹೇಗೆ ಇರ್ತಾರೆ ಅವರ ಮನ ಗೆಲ್ತಾರಾ ಎನ್ನುವುದು ಚಿತ್ರದ ಕಥನ ಕುತೂಹಲ ಅದನ್ನು ಚಿತ್ರದಲ್ಲಿ ನೋಡಿದರೆ ಅದರ ಮಜಾನೇ ಬೇರೆ.

ನಿರ್ದೇಶಕ ಎಂ.ಡಿ ಶ್ರೀಧರ್, ಮನರಂಜನೆಗೆ ಒತ್ತು ನೀಡಿ ಮನೆ ಮಂದಿಯೆಲ್ಲಾ ನೋಡಬಹುದಾದ ಮುದ್ದಾದ ಹಾಗು ಕೌಟುಂಬಿಕ ಚಿತ್ರವನ್ನು ತೆರೆಗೆ ಕಟ್ಡಿಕೊಟ್ಟಿದ್ದಾರೆ.

ನಾಯಕ ಪ್ರವೀಣ್ ತೇಜಾ, ಸುದ್ರೂಪಿ ನಟ ಜೊತೆಗೆ ಪ್ರತಿಭಾನ್ವಿತ. ‌ಒಳ್ಳೆಯ ಅವಕಾಶ ಮತ್ತು ಬ್ರೇಕ್ ಗಾಗಿ ಕಾಯುತ್ತಿದ್ದಾರೆ.ಎಂತಹ ಪಾತ್ರ ಕೊಟ್ಟರೂ ಮಾಡಬಲ್ಲ ಸಾಮರ್ಥ್ಯವಿರುವ ನಟ ಎನ್ನುವುದು ಪ್ರತಿ ಬಾರಿಯೂ ಸಾಬೀತು ಪಡಿಸುತ್ತಿದ್ದಾರೆ.

ನಾಯಕಿ ಅಂಜಲಿ ಅನೀಶ್ ಕೂಡ ಚಿತ್ರದಿಂದ ಚಿತ್ರಕ್ಕೆ ಪಕ್ವ ಕಲಾವಿದೆಯಾಗಬಲ್ಲೆ ಎನ್ನುವುದು ನಿರೂಪಿಸುತ್ತಿದ್ದಾರೆ.

ಹಿರಿಯ ಕಲಾವಿದೆಯರಾದ ಸ್ವಾತಿ ಮತ್ತು ಲಕ್ಷ್ಮಿ ಸಿದ್ದಯ್ಯ ಅವರಿಗೆ ಜಂಬೋ ಸರ್ಕಸ್ ದೊಡ್ಡ ಅವಕಾಶ ನೀಡಿದೆ. ಸಾಮಾನ್ಯವಾಗಿ ಸಿನಿಮಾದಲ್ಲಿ ಕಿರುತೆರೆ ನಟಿಯರು ಕೆಲ ಸೀನ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇಲ್ಲಿ ಇಬ್ಬರಿಗೂ ಉತ್ತಮ‌ ಪಾತ್ರ ಸಿಕ್ಕಿದೆ. ಜೊತೆಗೆ ಅಭಿನಯಕ್ಕೂ ಹೆಚ್ಚಿನ ಅವಕಾಶವಿದೆ ಅದನ್ನು ಇಬ್ಬರೂ ಸದುಪಯೋಗಪಡಿಸಿಕೊಂಡಿದ್ದಾರೆ.

ಇನ್ನುಳಿದಂತೆ ಹಿರಿಯ ಕಲಾವಿದರಾದ ಅಚ್ಚುತ್ ಕುಮಾರ್, ರವಿಶಂಕರ್ ಗೌಡ, ಅವಿನಾಶ್, ಆಶಾಲತಾ ಪಾತ್ರಕ್ಕೆ ಜೀವತುಂಬಿದ್ದಾರೆ. ಹಿರಿಯ ಕಲಾವಿದರ ಮದ್ಯೆ ನಾನೇನು ಕಡಿಮೆ‌ ಎಂದು ನಯನಾ ಮತ್ತು ಜಗ್ಗಪ್ಪ ಸಿಕ್ಕ ಅವಕಾಶ ಬಳಸಿಕೊಂಡಿದ್ದಾರೆ.

ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಯಾವುದೆ ಮುಜುಗರವಿಲ್ಲದೆ ಮನೆ‌ಮಂದಿಯೆಲ್ಲಾ ನೋಡಬಹುದಾದ ಕೌಟಂಬಿಕ‌ ಕಥನ ” ಜಂಬೋ ಸರ್ಕಸ್ “.


Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin