ರೋಮಾಂಟಿಕ್, ಕಾಮಿಡಿ ಚಿತ್ರಗಳಲ್ಲಿ ನಟಿಸಲು ಹೆಚ್ಚು ಅಸಕ್ತಿ: ನಟ ವಿನಯ್ ರಾಜ್ ಕುಮಾರ್
ವಯಕ್ತಿಕವಾಗಿ ರೋಮಾಂಟಿಕ್ ಕಾಮಿಡಿ ಚಿತ್ರಗಲ್ಲಿ ನಟಿಸುವ ಅಸೆ. ಈ ಮಾದರಿಯ ಚಿತ್ರಗಳನ್ನು ಹೆಚ್ಚು ನೋಡುತ್ತೇನೆ ಕೂಡ. ನಾನು ಬಯಸಿದ ಕಥೆಯೇ ಸಿಕ್ಕಿದ್ದರಿಂದ
ಒಂದು ಸರಳ ಪ್ರೇಮಕಥೆ” ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ.. ಎಂದರು ನಟ ವಿನಯ್ ರಾಜ್ ಕುಮಾರ್ .
ದೊಡ್ಮನೆ ಕುಟುಂಬದ ಕುಡಿ ವಿನಯ್ ರಾಜ್‍ಕುಮಾರ್ ಅಭಿನಯದ ‘ ಒಂದು ಸರಳ ಪ್ರೇಮಕತೆ” ಚಿತ್ರ 25 ದಿನಗಳ ಪ್ರದರ್ಶನ ಕಂಡಿದೆ. ಈ ಹಿನ್ನೆಲೆಯಲ್ಲಿ ಮಾತಿಗೆ ಸಿಕ್ಕ ವಿನಯ್ ರಾಜ್ ಕುಮಾರ್, ಚಿತ್ರದ ಯಶಸ್ಸು, ಮುಂಬರುವ ಚಿತ್ರಗಳ ಬಗ್ಗೆ ಮುಕ್ತವಾಗಿ ಮಾಹಿತಿ ಹಂಚಿಕೊಂಡರು.
ಅನಂತ್ ವರ್ಸಸ್ ನುಸ್ರತ್'' ಚಿತ್ರ ಬಿಡುಗಡೆಯಾಗಿ 5 ವರ್ಷಗಳ ಬಳಿಕ
ಒಂದು ಸರಳ ಪ್ರೇಮಕಥೆ” ಚಿತ್ರ ಬಿಡುಗಡೆಯಾಗಿದ್ದು, ಚಿತ್ರ ಯಶಸ್ಸು ಕಂಡಿದೆ. ಇದು ಸಹಜವಾಗಿ ಖುಷಿ ನೀಡಿದೆ.ಚಿತ್ರ ಬಿಡುಗಡೆಯಾದ ಮೇಲೆ ಕುಟುಂಬ, ಅಭಿಮಾನಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಬಂತು,ಇದು ಮತ್ತಷ್ಟು ಖುಷಿ ಇಮ್ಮಡಿಗೊಳಿಸಿದೆ.
ಒಂದು ಸರಳ ಪ್ರೇಮಕಥೆಯ ವಿಶೇಷ ಪ್ರದರ್ಶನ ಹಾಂಕ್‍ಕಾಂಗ್‍ನಲ್ಲಿ ಅಲ್ಲಿನ ಕನ್ನಡ ಸಂಘ ಆಯೋಜಿಸಿದೆ. ಜೊತೆಗೆ ಕನ್ನಡದಲ್ಲದವರು ಸಿನಿಮಾ ನೋಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಚಿತ್ರದ ಯಶಸ್ಸಿನ ಪ್ರರ್ದನಕ್ಕೆ ತೆರಳುತ್ತಿದ್ದೇನೆ. ಇದು ಖುಷಿಗೆ , ಸಂತಸಕ್ಕೆ ಪಾರವೇ ಇಲ್ಲ ಎಂದರು
ಯಾಯಾವ ಚಿತ್ರಗಳು ಸರದಿಯಲ್ಲಿ
ಸದ್ಯ ಬಿಡುಗಡೆಯ ರೇಸ್‍ನಲ್ಲಿರುವ ಪೆಪ್ಪೆ, ಅದೊಂದಿತ್ತು ಕಾಲ'' ಮತ್ತು ಚಿತ್ರೀಕರಣದ ಹಂತದಲ್ಲಿರುವ
ಗ್ರಾಮಾಯಣ” ಚಿತ್ರಗಳ ಮೇಲೆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದ್ದು ಜವಾಬ್ದಾರಿಯನ್ನೂ ಹೆಚ್ಚಿಸಿದೆ.
ಒಂದು ಸರಳ ಪ್ರೇಮಕಥೆಯ ಗೆಲುವಿನ ಬಗ್ಗೆ ಸಂತಸ ಹೊರಹಾಕಿದರು. ಅನಂತು ವರ್ಸಸ್ ನುಸ್ರತ್ ಚಿತ್ರ ಬಿಡುಗಡೆಯಾದ ಐದು ವರ್ಷದ ಬಳಿಕ ಈ ಚಿತ್ರ ಬಿಡುಗಡೆಯಾಗಿದೆ. ಜೊತೆಗೆ ಗೆಲುವು ಸಿಕ್ಕಿದ್ದು ಖುಷಿಕೊಟ್ಟಿದೆ.
ತಮ್ಮನ ಚಿತ್ರದ ಬಗ್ಗೆ ಹೇಳಿದ್ದೇನು:
ತಮ್ಮ ಯುವರಾಜ್ ಕುಮಾರ್ ಚಿತ್ರ “ಯುವ” ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಕೆಲವು ಭಾಗಗಳನ್ನು ನೋಡಿದ್ದೇವೆ. ಕಂಡಿತಾ ಹಿಟ್ ಆಗಲಿದೆ. ಚಿತ್ರದ ಕಥೆ ಬಗ್ಗೆ ನಾವಿಬ್ಬರೂ ಮನೆಯಲ್ಲಿ ಚರ್ಚೆ ಮಾಡುತ್ತೇವೆ. ನನಗೆ ಅನ್ನಿಸಿದ್ದನ್ನು ನಾನು ಹೇಳುವೆ ಯುವಗೆ ಅನ್ನಿಸಿದನ್ನು ಆತ ಹೇಳುತ್ತಾನೆ.
ನಾವಿಬ್ಬರೂ ಜೊತೆಯಾಗಿ ನಟಿಸುವ ಅವಕಾಶ ಮತ್ತು ಒಳ್ಳೆಯ ಕಥೆ ಸಿಕ್ಕರೆ ಖಂಡಿತಾ ಮಾಡುತ್ತೇವೆ. ಅದಕ್ಕೆ ಪಾತ್ರ ಮತ್ತು ಕಥೆ ಹೊಂದಿಕೆಯಾಗಬೇಕು ಎಂದು ಹೇಳಿದರು ವಿನಯ್ ರಾಜ್ ಕುಮಾರ್.
ಅಪ್ಪ,ತಮ್ಮನ ಜೊತೆ ಚರ್ಚೆ
ಹೊಸ ಕಥೆಗಳನ್ನು ಒಪ್ಪಿಕೊಳ್ಳುವಾಗ ನನಗೆ ಇಷ್ಟವಾದರೆ ನನ್ನ ಅಪ್ತ ಸ್ನೇಹಿತರ ಜೊತೆ ಚರ್ಚೆ ಮಾಡುವೆ. ಜೊತೆಗೆ ಅಪ್ಪ, ಮತ್ತು ತಮ್ಮನಿಗೂ ಹೇಳುವೆ. ಅವರು ಕೊಟ್ಟ ಸಲಹೆಗಳನ್ನು ನಿರ್ದೇಶಕರ ಬಳಿ ಚರ್ಚೆ ಮಾಡುತ್ತೇನೆ,ಅಂತಿಮವಾಗಿ ಅದನ್ನು ತೆಗೆದುಕೊಳ್ಳುವುದು ನಿರ್ದೇಶಕರ ತೀರ್ಮಾನ ಎಂದರು
ಚಿತ್ರೀಕರಣ ಹಂತದಲ್ಲಿ ಗ್ರಾಮಾಯಣ
ಗ್ರಾಮೀಣ ಸೊಗಡನ್ನು ಹೊಂದಿರುವ “ ಗ್ರಾಮಾಯಣ” ಚಿತ್ರ ಚಿಕ್ಕಮಗಳೂರು ಬಳಿಯ ದೇವನೂರಿನಲ್ಲಿ ನಡೆದ ಘಟನೆಗಳನ್ನು ಆಧರಿಸಿ ಚಿತ್ರ ಮಾಡಲಾಗುತ್ತಿದೆ. ಇದುವರೆಗೂ ಶೇಕಡಾ 50ರಿಂದ 60 ರಷ್ಟು ಚಿತ್ರೀಕರಣ ಮುಗಿದಿದೆ. ವಿವಿಧ ಕಾರಣದಿಂದ ಚಿತ್ರ ತಡವಾಯಿತು. ಇದೀಗ ಹಳೆ ಕಥೆಯನ್ನು ಮುಂದಿಟ್ಟುಕೊಂಡು ಚಿತ್ರೀಕರಣ ಮಾಡಲಾಗುತ್ತಿದೆ. ವರ್ಷಕ್ಕೆ ಎರಡು ಸಿನಿಮಾ ಮಾಡುವ ಉದ್ದೇಶವಿದೆ.