I waited 15 years for victory; Music director Veer Samarth is in tears

ಗೆಲುವಿಗಾಗಿ 15 ವರ್ಷ ಕಾದಿದ್ದೇನೆ; ಬಾವೋದ್ವೇಗಕ್ಕೊಳಗಾದ ಸಂಗೀತ ನಿರ್ದೇಶಕ ವೀರ ಸಮರ್ಥ್ - CineNewsKannada.com

ಗೆಲುವಿಗಾಗಿ 15 ವರ್ಷ ಕಾದಿದ್ದೇನೆ; ಬಾವೋದ್ವೇಗಕ್ಕೊಳಗಾದ ಸಂಗೀತ ನಿರ್ದೇಶಕ ವೀರ ಸಮರ್ಥ್

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಕಾರದ ಸಂಗೀತ ನೀಡುವ ಕಲೆ ಕಗರತ ಮಾಡಿಕೊಂಡಿರುವ ಅಪ್ಪಟ ದೇಸೀ ಪ್ರತಿಭೆ ಸಂಗೀತ ನಿರ್ದೇಶಕ ವೀರ್ ಸಮರ್ಥ್. ಕಳೆದ 15 ವರ್ಷಗಳಿಂದ ತನ್ನ ಕೆಲಸವನ್ನು ತನ್ನ ಪಾಡಿಗೆ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಪ್ರಶಸ್ತಿ ಬರುತ್ತವೆ ಎಂದು ನಿರೀಕ್ಷೆ ಇಟ್ಟುಕೊಂಡ ಚಿತ್ರಗಳು ಕೈಕೊಟ್ಟಿವೆ. ಇನ್ನು ಕೆಲವು ಚಿತ್ರಗಳಲ್ಲಿ ಹಾಡು, ಸಂಗೀತ ನಿರೀಕ್ಷೆಗೆ ಮೀರಿ ಯಶಸ್ಸು ಕಂಡಿದೆ.

ಆದರೂ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರಲ್ಲಿ ಕೊರಗು ಮಾತ್ರ ಹಾಗೆ ಇತ್ತು. ಅದು ಬರೋಬ್ಬರಿ 15 ವರ್ಷಗಳ ನಂತರ ‘ಒಂದು ಸರಳ ಪ್ರೇಮಕತೆ” ಚಿತ್ರದ ಮೂಲಕ ಈಡೇರಿದೆ. ಈ ಖುಷಿ ಹಂಚಿಕೊಳ್ಳುತ್ತಲೇ ಭಾವೋದ್ವೇಗಕ್ಕೆ ಒಳಗಾದರು. ಕಣ್ಣಲ್ಲಿ ತುಂಬಿ ಬಂದ ನೀರನ್ನು ಹಾಗೆ ಅದುಮಿಟ್ಟುಕೊಂಡರು.

“ಒಂದು ಸರಳ ಪ್ರೇಮಕಥೆ” ಚಿತ್ರದ 25ನೇ ದಿನದ ಸಂಭ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಾರಂಜಿ ಚಿತ್ರದಿಂದ ಆರಂಭವಾದ ಸಂಗೀತ ನಿರ್ದೇಶನದಲ್ಲಿ ಇದು ಮೊದಲ ಗೆಲುವು ಎನ್ನುತ್ತಲೇ ಕಣ್ಣಲ್ಲಿ ನೀರು ತುಂಬಿಕೊಂಡರು. 45 ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಯಶಸ್ಸು ಅನ್ನುವುದು ಸಿಕ್ಕಿರಲಿಲ್ಲ. ಈ ಚಿತ್ರದ ಮೂಲಕ ಸಿಕ್ಕಿದೆ ಅದನ್ನು ಪದಗಳಲ್ಲಿ ವರ್ಣಿಸಲು ಆಗುತ್ತಿಲ್ಲ ಎಂದರು.

ಚಿತ್ರ ಬಿಡುಗಡೆಯಾದ ದಿನದಿಂದ ಇಡಿದು ಇಲ್ಲಿಯ ತನಕ ನನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ದಿನ ಸಂದೇಶಗಳ ಶುಭಹಾರೈಕೆಯೇ ಬರುತ್ತಿದೆ. ಹಲವು ಮಂದಿ ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬರುತ್ತದೆ ಎಂದು ಮೆಚ್ಚುಗೆಯ ಮಾತನಾಡಿದ್ದಾರೆ. ಇದನ್ನೆಲ್ಲಾ ಕೇಳಿದಾಗ 15 ವರ್ಷ ಕಾದಿದ್ದಕ್ಕೂ ಸಾರ್ಥಕವಾಗುತ್ತಿದೆ. ವೃತ್ತಿಜೀವನದಲ್ಲಿ ಕಾರಂಜಿ' ಮತ್ತುದ್ಯಾವ್ರೇ’ ಎರಡು ವಿಭಿನ್ನವಾದ ಚಿತ್ರಗಳು. ಆದರೆ, ಆ ಚಿತ್ರಗಳಿಗೆ ಪ್ರಶಸ್ತಿ ಬರಲಿಲ್ಲ. ಇದು ಸಹ ಒಂದು ವಿಭಿನ್ನವಾದ ಚಿತ್ರ. ಸಾಕಷ್ಟು ಪ್ರಯೋಗ ಮಾಡಿದ್ದೇನೆ’

ಚಿತ್ರದ ನಿರ್ದೇಶಕ ಸುನಿ ಮತ್ತು ನಿರ್ಮಾಪಕ ಮೈಸೂರು ರಮೇಶ್, ಚಿತ್ರ ಬಿಡುಗಡೆಯಾಗಿ 25 ದಿನ ಕಳೆದರೂ ನನ್ನನ್ನು ಪ್ರೊಮೋಟ್ ಮಾಡುತ್ತಿದ್ದಾರೆ ಅವರಿಗೆ ಎಷ್ಟು ಧನ್ಯವಾದ ಅರ್ಪಿಸಿದರೂ ಸಾಲದು ಎಂದು ಕಣ್ಣಲ್ಲಿ ತೇಲಿ ಬಂದ ಕಣ್ಣೀರನ್ನು ಹಾಗೆ ಅದುಮಿಟ್ಟುಕೊಂಡರು.

ಸಕ್ಸಸ್ ಬಳಿಕ ಹಲವು ಚಿತ್ರಗಳಿಂದ ಅವಕಾಶ ಬರುತ್ತಿವೆ. ಆದರೂ ಇನ್ನೂ ಯಾವುದನ್ನು ಅಂತಿಮ ಗೊಳಿಸಿಲ್ಲ. ಹೊಸ ಚಿತ್ರ ಬರಲು ಕನಿಷ್ಟ 6 ತಿಂಗಳಾದರೂ ಬೇಕು ಎಂದು ಅವರು ಹೇಳಿಕೊಂಡರು

ಒಂದು ಸರಳ ಪ್ರೇಮಕತೆ ಚಿತ್ರದಲ್ಲಿ ಮಾಡಿರುವ ಪ್ರಯೋಗ ಮತ್ತು ಇರುವ ವೆರೈಟಿ, ಇತ್ತೀಚಿನ ವರ್ಷಗಳಲ್ಲೇ ಯಾವುದೇ ಚಿತ್ರದಲ್ಲೂ ಆಗಿಲ್ಲ ಎನ್ನುವ ವೀರ್, `ಮೆಲೋಡಿ, ಸೂಫಿ, ದಾಸರ ಪದ, ತತ್ವಪದ, ಗಝಲ್, ರಾಜಸ್ಥಾನಿ ಜಾನಪದ ಸಂಗೀತ ಹೀಗೆ ಬಹಳ ವೆರೈಟಿ ಇರುವ ಚಿತ್ರ ಇದು. ಈ ತರಹದ ಪ್ರಯೋಗ ಬಹಳ ಅಪರೂಪವಾಗುತ್ತದೆ.
ಇದಕ್ಕೆ ನಿರ್ದೇಶಕ ಸುನಿ ಅವರಿಗೆ ಥ್ಯಾಂಕ್ಸ್ ಹೇಳಬೇಕು. ನಾನು ಇಂಥದ್ದೊಂದು ಅವಕಾಶ ಸಿಗಬಹುದು ಅಂತ ಅಂದುಕೊಂಡಿರಲಿಲ್ಲ ಅವರು ಬಂದು ನನ್ನ ಬಳಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಬೇಕು ಎಂದು ಹೇಳಿದಾಗ ನನಗೆ ಆತಂಕ ಆಯಿತು.ಜೊತೆಗೆ ಚಿತ್ರ ಮೆಚ್ಚಿಕೊಂಡಿರುವುದು ಖುಷಿಕೊಟ್ಟಿದೆ ಎಂದರು

ನಿರ್ದೇಶಕ ಸುನಿ ಮೊದಲ ಬಾರಿ ನನ್ನ ಬಳಿ ಮ್ಯೂಸಿಕಲ್ ಸಿನಿಮಾ ಮಾಡಬೇಕು ಎಂದಾಗ ಆಶ್ಚರ್ಯವಾಯಿತು. ಅವರುಕಾರಂಜಿ’ ಹಾಡುಗಳನ್ನು ಬಹಳ ಇಷ್ಟಪಟ್ಟಿರುವುದಾಗಿ ಹೇಳಿದರು. ಇದುವರೆಗೂ ನನ್ನ ತಾಕತ್ ತೋರಿಸಬೇಕು ಅಂತ ಆಸೆ ಇತ್ತಾದರೂ, ಬಹಳಷ್ಟು ಚಿತ್ರಗಳಲ್ಲಿ ಅದು ಸಾಧ್ಯವಾಗಿರಲಿಲ್ಲ. ನನಗೆ ಒಂದು ಪರಿಪೂರ್ಣ ಕ್ಲಾಸಿಕಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಬೇಕು ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin