ಹಿರಿಯ ನಟ ಅನಂತ್‍ನಾಗ್ ಸಿನಿ ಪಯಣಕ್ಕೆ 50 ವರ್ಷ :ಸುವರ್ಣ ಸಂಭ್ರಮದಲ್ಲಿ ನೆನಪಿನ ಮೆರಣಿಗೆ
ರಂಗಭೂಮಿ, ಮರಾಠಿ,ಹಿಂದಿ, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸುವ ಮೂಲಕ ಸಹಸ್ರಾರು ಹೃದಯ ಕದ್ದ ಚೋರ ಚಿತ್ತ ಚೋರ ಅನಂತ್ ನಾಗ್. ಅವರ ಸಿನಿಮಾ ಪಯಣಕ್ಕೆ ಸುವರ್ಣ ಸಂಭ್ರಮ. 50 ವರ್ಷಗಳ ಚಿತ್ರ ಜೀವನದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡಿದ ಅಪರೂಪದ ಕಲಾವಿದ.
ಸಿನಿಮಾ ಜೊತೆ ಜೊತೆಯಲ್ಲಿಯೇ ರಾಜಕಾರಣಿಯಾಗಿ ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡುವ ಮೂಲಕ ಸಾಮಾಜಿಕ ಕಳಕಳಿಯೂ ಉಂಟು ಎಂದು ನಿರೂಪಿಸಿದ ಅಭಿಜಾತ ಕಲಾವಿದ ಅನಂತ್‍ನಾಗ್.
ಚಿತ್ರರಂಗ ಪ್ರವೇಶಿಸಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ “ರಾಘವೇಂದ್ರ ಚಿತ್ರವಾಣಿ” ಸಂಸ್ಥೆ ಆಯೋಜಿಸಿದ್ದ “ ಸುವರ್ಣ ಅನಂತ” ಅಭಿನಂದನಾ ಸಮಾರಂಭ ಅನಂತ್‍ನಾಗ್ ಅವರ ವೃತ್ತಿ ಬದುಕನ್ನು ಅವರದೇ ಮಾತುಗಳಲ್ಲಿ ಒಮ್ಮೆ ಮೆಲುಕು ಹಾಕುವಂತೆ ಮಾಡಿತ್ತು.

ಇಂತಹ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದುಕೊಟ್ಟಿದ್ದು ಹಿರಿಯ ನಟ ಅನಂತ್‍ನಾಗ್ ಬದುಕಿನ ಯಾನವನ್ನು ನಿರೂಪಕ, ನಟ ರಮೇಶ್ ಅರವಿಂದ್ ಮುಂದೆ ಬಿಚ್ಚಿಟ್ಟರು. ಚಿತ್ರರಂಗದಲ್ಲಿ ಸುವರ್ಣ ಸಂಭ್ರಮದಲ್ಲಿರುವ ಅನಂತ್ ನಾಗ್ ಅವರೊಂದಿಗೆ ಸುವರ್ಣ ಅನಂತ ಸಂಭ್ರಮದಲ್ಲಿ ನೆನಪಿನ ಬುತ್ತಿ ಅನಾವರಣಗೊಂಡದ್ದು ಹೀಗೆ.
ಇನ್ನು ಹಿರಿಯ ಕಲಾವಿದ ಅನಂತ್ ಅವರ ಬದುಕಿನ ಯಾನವನ್ನು ಅವರೆ ಹೇಳ್ತಾರೆ ನೋಡಿ..
ಅನುಕರಣೆ ಮಾಡ್ತಿದ್ದೆ:
ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಯಾರನ್ನಾದರೂ ನೋಡಿದರೆ ಅವರ ಹಾವ ಭಾವ, ನಗು, ಕೋಪ, ಗಂಭೀರ ಸ್ವಭಾವ, ಗಂಟು ಹಾಕಿಕೊಂಡ ಮುಖದ ಲಕ್ಷಣಗಳನ್ನು ಅನುಕರಣೆ ಮಾಡುತ್ತಿದ್ದೆ. ನೆಂಟರು ಮನೆಗೆ ಬಂದೂ ಅವರ ಹಾಗೆ ಅನುಕರಣೆ ಮಾಡುತ್ತಿದ್ದೆ. ತಾಯಿ . ಅನಂತಾ.. ಹಾಗೆ ಮಾಡಬಾರದು ಎಂದು ಕಣ್ಸನ್ನೆಯಲ್ಲೇ ಹೇಳುತ್ತಿದ್ದರು. ಹಾಗೆ ಮಾಡಿದ ಅನುಕರಣೆ ಚಿತ್ರರಂಗದಲ್ಲಿ ಇಷ್ಟು ವರ್ಷ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ.

ಓದು ತಲೆಗತ್ತಲಿಲ್ಲ:
ಅದ್ಯಾಕೆ ಏನೋ ಓದು ತಲೆಗೆ ಹತ್ತಲಿಲ್ಲ. ಕಲೆ, ವಿಜ್ಞಾನ, ವಾಣಿಜ್ಯ ವಿಷಯಗಳನ್ನು ತೆಗೆದುಕೊಂಡರೂ ಯಾವುದು ಸಲುಭವಾಗಿರಲಿಲ್ಲ. ಎಲ್ಲವೂ ಕಷ್ಟವಾಗಿತ್ತು. ವಿಜ್ಞಾನ ವಿಷಯ ತೆಗೆದುಕೊಂಡಾಗ ಪ್ರಯೋಗಾಲಯದಲ್ಲಿ ಕಪ್ಪೆ ಕೊಟ್ಟು ಅದರ ದೇಹದ ಭಾಗ ಕತ್ತರಿಸಿ, ಮನುಷ್ಯನ ದೇಹವೂ ಹೀಗೆ ಎಂದರು. ನನ್ನ ಅಕ್ಕ ಪಕ್ಕ ಇದ್ದ ಹುಡುಗಿಯರೆಲ್ಲಾ ಸಲೀಸಾಗಿ ಕಟ್ ಮಾಡುತ್ತಿದ್ದರೂ ನನಗೂ ಅದನ್ನು ನೋಡಿದರೆ ಆಗುತ್ತಿರಲಿಲ್ಲ, ಇನ್ನು ಕಟ್ ಮಾಡುವುದು ಹೇಗೆ ಎಂದು ಸುಮ್ಮನೆ ನಿಂತಿದ್ದೆ. ಅಕ್ಕದ ಪಕ್ಕದ ಹುಡುಗಿತರು ಬಂದು ಸಹಾಯ ಮಾಡಿದ್ದರು. ಈಗೇನೋ ನಾವು ಮಾಡುತ್ತೇವೆ ಪರೀಕ್ಷೆಯಲ್ಲಿ ಏನು ಮಾಡ್ತೀಯಾ ಅಂದರು.
ಮತ್ತೊಂದು ದಿನ ಜಿರಳೆ ಹೀಗೆ ಬೇರೆ ಬೇರೆ ಪ್ರಾಣಿಗಳನ್ನು ಕೊಟ್ಟು ಕತ್ತರಿಸಲು ಹೇಳುತ್ತಿದ್ದರು. ನಾನು ಮಠದಲ್ಲಿ ಬೆಳೆದವ. ಹೀಗಾಗಿ ಅದನ್ನು ಕಟ್ ಮಾಡಲು ಮನಸ್ಸು ಬಾರದೆ ವಿಜ್ಞಾನ ವಿಷಯಕ್ಕೆ ತಿಲಾಂಜಲಿ ಇಟ್ಟೆ. ವಾಣಿಜ್ಯ ವಿಷಯ ತೆಗೆದುಕೊಂಡೆ ಅದು ತಲೆಗೆ ಹತ್ತಲಿಲ್ಲ. ಇನ್ನೂ ಕಲಾ ಮಾಧ್ಯಮವೂ ರುಚಿಸಲಿಲ್ಲ. ಊರಿನ ಮಂದಿ ಯಾರಾದರೂ ಎದುರಿಗೆ ಸಿಕ್ಕರೆ ಓದಲು ಏನಾಗಿದೆ. ಅಪ್ಪ ಅಮ್ಮ ನಿಮ್ಮ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ ಎಂದು ಲೆಕ್ಚರ್ ಹೊಡಿತಾರೆ ಎನ್ನುತ್ತಿದ್ದರು. ಅಂತವರು ಸಇಕ್ಕರೆ ಬೇರೆ ದಾರಿಯಲ್ಲಿ ಹೋದ ಉದಾಹರಣೆಯೂ ಇದೆ ಎಂದು ಹೇಳಿಕೊಂಡರು.

ಪರೀಕ್ಷೆಗೆ ಮಾತ್ರ ಭಯವಿತ್ತು:
ಜೀವನದಲ್ಲಿ ಯಾವುದೇ ವಿಷಯಕ್ಕೆ ಎದರಿಕೊಂಡ ನಿದರ್ಶನವೇ ಇಲ್ಲ ಅನ್ನಿ, ನನ್ನ ದೃಷ್ಠಿಯಲ್ಲಿ ಭಯ ಎನ್ನುವುದು ನಿರ್ಭಯದಂತಿತ್ತು. ಸಮುದ್ರ, ನದಿಯಲ್ಲಿ ಈಜಿದ್ದೇನೆ. ನನಗೆ ಇದ್ದುದೇ ಒಂದೇ ಭಯ ಅದು “ಪರೀಕ್ಷೆಯ ಭಯ”. ಫೇಲಾದರೆ ಅಪ್ಪ ಎಲ್ಲಿ ನನ್ನ ಪ್ರಶ್ನೆ ಮಾಡುತ್ತಾರೆ ಎನ್ನುವ ವಿಷಯ ಮನಸ್ಸಿನಲ್ಲಿ ಕಾಡುತ್ತಿತ್ತು.
ಸೇನೆಗೆ ಸೇರಿಸಿಕೊಳ್ಳಲಿಲ್ಲ:
ಹಾಗು ಹೀಗು ಒಂದು ಹಂತದವರೆಗೆ ಓದಿದ್ದೆ. ಸೇನೆಗೆ ಸೇರಬೇಕು ಎಂದು ಬಯಸ್ಸಿದ್ದೆ. ಆದರೆ ತೂಕ ಇಲ್ಲ ಎಂದು ವಾಪಸ್ಸು ಕಳುಹಿಸಿದರು. ವಾಯು ಸೇನೆಯಲ್ಲಿ ನಿನ್ನ ಕಣ್ಣು ಸರಿಯಿಲ್ಲ ಎಂದು ರಿಜೆಕ್ಟ್ ಮಾಡಿದರು. ಹೀಗಾಗಿ ನಾಟಕದ ಕಡೆ ಒಲವು ಬೆಳೆಸಿಕೊಂಡೆ. ವಯಕ್ತಿಕವಾಗಿ ಅನುಭವಿಸದ ಪಾತ್ರಗಳನ್ನು ನಾಟಕದ ಪಾತ್ರಗಳ ಮೂಲಕ ಅನುಭವಿಸಿದೆ ಎಂದು ಅನಂತ್ ನಾಗ್ ತಮ್ಮ ನೆನಪಿನ ಬುತ್ತಿಯನ್ನು ಮೆಲುಕು ಹಾಕಿದರು.
ಪ್ರತಿ ಪಾತ್ರ ವಿಭಿನ್ನ:

50 ವರ್ಷಗಳ ಚಿತ್ರಜೀವನದಲ್ಲಿ ಸಿಕ್ಕ ಪ್ರತಿಯೊಂದು ಪಾತ್ರವೂ ವಿಭಿನ್ನವಾಗಿವೆ. ನಾಯಕನಾಗಿ ಹಾಡುವುದು ರಾಜ್‍ಕುಮಾರ್ ಅವರಿಗೆ ಕಲೆ ಒಲಿದಿದ್ದಿತು ಆದರೆ ಅದು ಎಲ್ಲಾ ನಟರಿಗೆ ಸಾಧ್ಯವಾಗಲಿಲ್ಲ. ಸಿನಿಮಾ ಜೀವನದಲ್ಲಿ ಏರು,ಪೇರು, ತೇರು ಎಲ್ಲವೂ ಇದೆ. ಪ್ರೇಕ್ಷಕರು ಒಪ್ಪಿದರೆ ನಾವು ತೇರಿನಲ್ಲಿ ಹೋಗಬಹುದು . ಪ್ರತಿಯೊಂದು ವೃತ್ತಿಯಲ್ಲಿಯೂ ಅನಿಶ್ವಿತತೆ ಕೂಡಿದೆ. ಹೀಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ . ಜೊತೆಗೆ ನನ್ನ ಮೇಲೆ ನಂಬಿಕೆ ಇಟ್ಟು ಕೆಲಸ ಕೊಟ್ಟ ನಿರ್ದೇಶಕರು, ನಿರ್ಮಾಪಕರು, ಸಂಭಾಷಣೆಕಾರರ ಪರಿಶ್ರಮ ಕಾರಣ. ಪ್ರತಿಯೊಬ್ಬರಿಗೂ ಅಬಾರಿ ಎಂದರು ಅನಂತ್ ನಾಗ್.

ಯಶಸ್ವಿ ನಾಯಕನಾರು:
ನನ್ನ ದೃಷ್ಠಿಯಲ್ಲಿ ಹೇಳಬೇಕಾದರೆ ಯಶಸ್ವಿ ನಾಯಕ ಎಂದರೆ ಯಾರು ತನಗೆ ವಹಿಸಿದ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಬಾಯಿಸುತ್ತಾರೋ ಅವರೇ ನಿಜವಾದ ನಾಯಕ. ಕಷ್ಟ ಪಟ್ಟು ಮೇಲೆ ಬಂದವರು. ಕೆಲವನ್ನು ಪ್ರೀತಿಸುವ ಮಂದಿ ನನ್ನ ದೃಷ್ಠಿಯಲ್ಲಿ ನಾಯಕ. ಇತ್ತೀಚೆಗೆ ಕನ್ನಡ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ ಖುಷಿಯ ಸಂಗತಿ. ಅಂತಹರ ಬಗ್ಗೆ ಪ್ರೀತಿ, ಅಭಿಮಾನ ಮತ್ತಷ್ಟು ಇಮ್ಮಡಿಯಾಗಲಿದೆ.
ಕೋಪ ಮಾಡಿಕೊಳ್ಳುವುದು ಈಸಿ:
ಕಲಾ ಪ್ರಪಂಚದಲ್ಲಿ ಎಲ್ಲಾ ರಸಗಳನ್ನು ಮಾಡುವುದು ತುಸು ಕಷ್ಟ ಆದರೆ ಕೋಪ ಮಾಡಿಕೊಳ್ಳುವುದು ಸುಲಭ, ಆದರೆ ಮತ್ತೊಬ್ಬರ ಮುಖದಲ್ಲಿ ನಗು ಮೂಡಿಸುವುದು ಕಷ್ಟ, ಹಾಗೆ ನೋಡಿದರೆ ಅಳು ಕೂಡ ಬೇಗ ಬರಲಿದೆ. ಇನ್ನುಳಿದಂತೆ ಉಳಿದ ಭಾವಗಳನ್ನು ಅನುಕರಣೆ ಮಾಡಲು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ನನ್ನ ಸಿನಿಮಾಯಾನದಲ್ಲಿ 95 ಪ್ರಮುಖ ಕಲಾವಿದರ ಜೊತೆ ನಟಿಸಿದ್ದೇನೆ ಅದರ ಪಟ್ಟಿ ಮಾಡಿದ್ದೇನೆ. ಅವರಿಲ್ಲ ಎನ್ನುವುದನ್ನು ತಿಳಿದು ಖಿನ್ನತೆಗೂ ಒಳಗಾಗಿದ್ದೆ. ಹೀಗಾಗಿ ಪಟ್ಟಿ ಮಾಡುವುದನ್ನೂ ಬಿಟ್ಟೆ ಎಂದರು

ಪತ್ನಿ ಬೆನ್ನೆಲುಬು:
ನನ್ನ ಸಿನಿಮಾ ಯಾನದಲ್ಲಿ ಪತ್ನಿ ಗಾಯತ್ರಿ ನನ್ನ ಬೆನ್ನೆಲುಬಿಗಿಂತ ಹೆಚ್ಚು. ಆಕೆಯ ಬೆಂಬಲದಿಂದ ತಾವು 50 ವರ್ಷಗಳು ಚಿತ್ರರಂಗದಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ಅತ್ಯುತ್ತಮ ಜೀವನ ಸಂಗಾತಿಯಾಗಿ ನನ್ನನ್ನು ಮುನ್ನೆಡೆಸುತ್ತಿದ್ದಾರೆ. ಮುಂದೆಯೂ ನಮ್ಮ ಪಯಣ ಹೀಗೆ ಸಾಗಲಿದೆ ಎಂದರು ಅನಂತ್ ನಾಗ್
ಜೀವಂತ ಜ್ವಾಲಮುಖಿ

ಪತಿ ಅನಂತ್ ನಾಗ್ ಅವರು ಜೀವಂತ ಜ್ವಾಲಾಮುಖಿ. ಅವರಿಗೆ ಕೋಪ ಬೇಗ ಬರುತ್ತದೆ. ಅಡುಗೆ ಸರಿ ಇರಲಿಲ್ಲ ಎಂದರೆ, ಮನೆಯಲ್ಲಿ ಪುಸ್ತಕ ಸೇರಿದಂತೆ ಕೆಲ ವಸ್ತುಗಳ ಒಂದು ಕಡೆ ಇಲ್ಲದಿದ್ದರೆ ಕೋಪ ಬೇಗ ಬಂದು ಬಿಡುತ್ತದೆ. ಅವರು ಒಪ್ಪಲಿ ಬಿಡಲಿ, ಕೋಪ ಜಾಸ್ತಿ ಎಂದು ಪತಿಯ ಕೋಪದ ಬಗ್ಗೆ ಎಲ್ಲರೆದುರು ಗಾಯತ್ರಿ ಬಿಚ್ಚಿಟ್ಟರು.
ರಾಘವೇಂದ್ರ ಚಿತ್ರವಾಣಿಯಿಂದ ಸನ್ಮಾನ

ಚಿತ್ರರಂಗದಲ್ಲಿ 50 ವರ್ಷ ಪೂರ್ಣಗೊಳಿಸಿದ ಹಿರಿಯ ನಟ ಅನಂತ್ ನಾಗ್ ಅವರಿಗೆ ರಾಘವೇಂದ್ರ ಚಿತ್ರವಾಣಿ
ಸಂಸ್ಥೆಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಘವೇಂದ್ರ ಚಿತ್ರವಾಣಿ ಸಂಸ್ಥಾಪಕ ಸುದೀಂದ್ರ ಅವರು ಹಿರಿಯ ನಟ ಅನಂತ್ ನಾಗ್ ಅವರ ಜೊತೆ ಉತ್ತಮ ಒಡನಾಟ ಹೊಂದಿದ್ದ ಹಿನ್ನೆಲೆಯಲ್ಲಿ ಚಿತ್ರವಾಣಿಯನ್ನು ಮುನ್ನೆಡೆಸುತ್ತಿರುವ ಸುಧೀಂದ್ರ ವೆಂಕಟೇಶ್, ಸುನೀಲ್, ಸುಧೀಂದ್ರ ಹಾಗು ಡಿಜಿ. ವಾಸುದೇವ ಅವರು ಹಿರಿಯ ನಟ ಅನಂತ್ ನಾಗ್ ಮತ್ತು ಗಾಯತ್ರಿ ದಂಪತಿಯನ್ನು sಸನ್ಮಾನಿಸಿದರು.
ಸುವರ್ಣ ಅನಂತ ಸಂಭವದ ಮೂಲಕ ಅಪರೂಪದ ಕಾರ್ಯಕ್ರಮದ ಮೂಲಕ ಅನಂತ್ ನಾಗ್ ಅವ ಚಿರಂಗಕ್ಕೂ ಮುನ್ನ ಅಭಿನಂಧಿಸುವ ಮೂಲಕ ಸುಧೀಂದ್ರ ವೆಂಕಟೇಶ್ – ಮತ್ತವರ ಬಳಗೆ ಚಿತ್ರರಂಗಕ್ಕೆ ಮಾದರಿಯಾಗಿದ್ದಾರೆ.

