Mother-Daughter Spectacular Photo Shoot: Malashree, Aradhana Shining in New Look
ಅಮ್ಮ – ಮಗಳ ಭರ್ಜರಿ ಫೋಟೊ ಶೂಟ್ : ಹೊಸ ಲುಕ್ ನಲ್ಲಿ ಮಾಲಾಶ್ರೀ , ಆರಾಧನಾ ಶೈನಿಂಗ್

ಕನ್ನಡ ಚಿತ್ರರಂಗದಲ್ಲಿ ನಟನೆಯ ಮೂಲಕ ಮನೆ ಮಾತಾದ ಹಿರಿಯ ನಟಿ ಮಾಲಾಶ್ರೀ ಹಾಗು ಅವರ ಪುತ್ರಿ ಹಾಗು ನಟಿ ಆರಾಧನಾ ದೀಪಾವಳಿ ಹಬ್ಬಕ್ಕೆ ಹೊಸ ಫೋಟೋ ಶೂಟ್ ಮಾಡಿಸಿಕೊಂಡು ಮಿಂಚಿದ್ದಾರೆ.

ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ. ಬೆಳಕಿನ ಹಬ್ಬದ ಸಂಭ್ರಮ ಹಿರಿಯ ನಟಿ ಮಾಲಾಶ್ರೀ ಅವರ ಮನೆಯಲ್ಲಿ ಈ ಬಾರಿ ಕೊಂಚ ಹೆಚ್ಚ ಎನ್ನಬಹುದು. ಹಬ್ಬದ ಸಂಭ್ರಮವನ್ನು ಸಂಭ್ರಮಿಸಲು ಮಾಲಾಶ್ರೀ ಅವರು ಮಗಳು ಆರಾಧನಾ ಜೊತೆ ಹೊಸ ಲುಕ್ ನಲ್ಲಿ ಮಿಂಚಿದ್ದಾರೆ.

ಅಮ್ಮ – ಮಗಳು ನೂತನ ರೀತಿಯಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಫೋಟೊ ಶೂಟ್ ಮಾಡಿಸಿಕೊಂಡಿದ್ದೇವೆ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಶುಭಾಶಯ ತಿಳಿಸುತ್ತೇನೆ. ಬಹಳ ವರ್ಷಗಳ ನಂತರ ನಾನು ಫೋಟೊ ಶೂಟ್ ಮಾಡಿಸಿಕೊಂಡಿದ್ದೀನಿ. ಮಗಳ ಜೊತೆಗೆ ಫೋಟೊ ಶೂಟ್ ಮಾಡಿಸಿಕೊಂಡಿರುವುದು ಹೆಚ್ಚು ಖುಷಿಯಾಗಿದೆ. ಈ ವರ್ಷ ನನ್ನ ಮಗಳು “ಕಾಟೇರ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾಳೆ. ನನಗೆ ತಾವು ನೀಡಿರುವ ಪ್ರೋತ್ಸಾಹ ನನ್ನ ಮಗಳಿಗೂ ನೀಡಿ ಎನ್ನುತ್ತಾರೆ ನಟಿ ಮಾಲಾಶ್ರೀ