ಅಶೋಕನ ಮನಗೆಲ್ಲಲು ಬಂದ ಹೂ ಮಾರೋ ಹುಡುಗಿ ಸಪ್ತಮಿಗೌಡ
“ದಿ ರೈಸ್ ಆಫ್ ಅಶೋಕ” ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿರುವ, ಮಾಡುತ್ತಿರುವ ಚಿತ್ರ. ಈ ಕಾರಣಕ್ಕಾಗಿಯೇ ಚಿತ್ರ ನಿರೀಕ್ಷೆ ಹೆಚ್ಚು ಮಾಡಿದೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಚಿತ್ರ ಮೂಡಿ ಬರಲಿದೆ.

ಅಭಿನಯ ಚತುರ ನೀನಾಸಂ ಸತೀಶ್ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದು. ಈಗಾಗಲೇ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ಮೂಲಕ ಚಿತ್ರದ ಬಗೆಗಿನ ಕುತೂಹಲ ಮತ್ತು ಆಸಕ್ತಿ ಹಿಮ್ಮಡಿಗೊಳಿಸಿದೆ. ನಟ ನೀನಾಸಂ ಸತೀಶ್ ಹಿಂದೆಂದೂ ತೆರೆಯ ಮೇಲೆ ಕಾಣಿಸಿಕೊಳ್ಳದ ಅವತಾರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಬಗ್ಗೆ ಚಿತ್ರರಂಗದ ಮಂದಿಯಲ್ಲಿ ನಿರೀಕ್ಷೆ ಹೆಚ್ಚು ಮಾಡಿದೆ.
ಇದೀಗ ಚಿತ್ರತಂಡದಿಂದ ಹೊಸ ಸುದ್ದಿ ಹೊರಬಂದಿದೆ. ‘ದಿ ರೈಸ್ ಆಫ್ ಅಶೋಕ”ನ ಮನಗೆಲ್ಲಲು ಹೂ ಮಾರೋ ಹುಡುಗಿಯ ಅವತಾರದಲ್ಲಿ ನಟಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಮೊದಲ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಅಂಬಿಕಾ ಪಾತ್ರದ ಮೂಲಕ ಗಮನ ಸೆಳೆಯಲು ಸಪ್ತಮಿ ಸಜ್ಜಾಗಿದ್ದಾರೆ.
ನಟ ನೀನಾಸಂ ಸತೀಶ್ ಅವರ ವೃತ್ತಿ ಜೀವನದಲ್ಲಿ ಭಾರಿ ನಿರೀಕ್ಷೆ ಮತ್ತು ಮಹತ್ವಾಕಾಂಕ್ಷೆಯ ಚಿತ್ರ.ಈ ಕಾರಣಕ್ಕಾಗಿಯೇ ಚಿತ್ರದ ಬಗ್ಗೆ ಅತೀವ ಕಾಳಜಿ ಮತ್ತು ಪ್ರೀತಿಯಿಂದ ಚಿತ್ರೀಕರಣದಲ್ಲಿ ನಟ ನೀನಾಸಂ ಸತೀಶ್ ಕಾಣಸಿಕೊಂಡಿದ್ದಾರೆ. ಎದುರಾದ ಅಡೆ ತಡೆ ದಾಟಿ ಚಿತ್ರರಂಗಕ್ಕೆ ಒಳ್ಳೆಯ ಚಿತ್ರ ನೀಡುವ ಗುರಿ ಹೊತ್ತಿದ್ದಾರೆ. ಚಿತ್ರದ ಕುರಿತು ನಟ ನೀನಾಸಂ ಸತೀಶ್ ಮಾಹಿತಿ ಹಂಚಿಕೊಂದಿದ್ದಾರೆ.

- ನಟಿ ಸಪ್ತಮಿ ಗೌಡ ಅವರ ಪಾತ್ರ ಏನು, ಚಿತ್ರೀಕರಣದ ಬಗ್ಗೆ ಮಾಹಿತಿ ನೀಡುವುದಾದರೆ
ಚಿತ್ರದಲ್ಲಿ ನಟಿ ಸಪ್ತಮಿಗೌಡ ಅಂಬಿಕಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೂ ಮಾರುವ ಹುಡುಗಿ. ಜೊತೆಗೆ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವ ಹಂಬಲ ಮತ್ತು ಛಲವಿರುವ ಹೆಣ್ಣುಮಗಳು. ಪಕ್ಕದ ಊರಿನ ಹುಡುಗಿ, ಆಕೆಯನ್ನು ನೋಡಿ ಅಶೋಕ ಇಷ್ಟಪಡುವ ಪಾತ್ರ. ಈಗಾಗಲೇ ಸಪ್ತಮಿ ಅವರ ಪಾತ್ರದ ಚಿತ್ರೀಕರಣ 15 ದಿನ ಪೂರ್ಣಗೊಂಡಿದೆ. ಕಡೆಯ ಹಂತದ ಚಿತ್ರೀಕಣದಲ್ಲಿದ್ದೇವೆ. ಏಪ್ರಿಲ್ 15ರ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರವನ್ನು ಆದಷ್ಟು ಶೀಘ್ರ ತೆರೆಗೆ ತರಬೇಕೆನ್ನುವ ಕಾತುರವಿದೆ. ಜೊತೆಗೆ ಒಳ್ಳೆಯ ಚಿತ್ರ ನೀಡುವ ಗುರಿಯೂ ಕೂಡ.

- ಎಲ್ಲೆಲ್ಲಿ ಚಿತ್ರೀಕರಣ ಆಗಿದೆ. ಬಾಕಿ ಚಿತ್ರೀಕರಣ
ಈಗಾಗಲೇ ಚನ್ನಪಟ್ಟಣ, ದೊಡ್ಡಬಳ್ಳಾಪುರ, ನಂಜನಗೂಡು, ಕೊತ್ತಲವಾಡಿ, ಚಾಮರಾಜನಗರ, ಶ್ರೀರಂಗಪಟ್ಟಣ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಚಾಮರಾಜನಗರ, ಬೆಂಗಳೂರು ಮತ್ತು ಚನ್ನಪಟ್ಟಣ ಸುತ್ತಮುತ್ತಲ ಹಳ್ಳಿಗಳಲ್ಲಿ ಚಿತ್ರೀಕರಣ ಮಾಡಬೇಕು ಎನ್ನುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ.
- ಎಷ್ಟು ಭಾಷೆಯಲ್ಲಿ “ದಿ ರೈಸ್ ಆಫ್ ಅಶೋಕ” ಚಿತ್ರ ಮೂಡಿ ಬರುತ್ತಿದೆ
ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಸೇರಿದಂತೆ ಮೂರು ಭಾಷೆಯಲ್ಲಿ “ದಿ ರೈಸ್ ಆಫ್ ಅಶೋಕ” ಚಿತ್ರ ಮೂಡಿ ಬರಲಿದೆ. ಹೈ ಬಜೆಟ್ ಚಿತ್ರ ಜೊತೆಗೆ ಕಥೆಗೆ ಪೂರಕವಾಗಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ, ಉತ್ತಮ ಚಿತ್ರ ನೀಡುವ ಹಂಬಲ ಮತ್ತು ಗುರಿಯೊಂದಿಗೆ ಇಡೀ ಚಿತ್ರತಂಡ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದೆ. ಕನ್ನಡಕ್ಕೆ ಉತ್ತಮ ಚಿತ್ರ ನೀಡುವ ಉದ್ದೇಶವಿದೆ.
- ಚಿತ್ರದಲ್ಲಿ ಯಾರೆಲ್ಲಾ ಕಲಾವಿದರಿದ್ದಾರೆ..
ಹಿರಿಯ ಕಲಾವಿದರಾದ ಬಿ. ಸುರೇಶ್, ಗೋಲಾಕೃಷ್ಣ ದೇಶಪಾಂಡೆ, ಸಪ್ತಮಿಗೌಡ ಸೇರಿದಂತೆ ದೊಡ್ಡ ಕಲಾವಿದರ ಪಟ್ಟಿಯೇ ಚಿತ್ರದಲ್ಲಿದೆ, ಚಿತ್ರದ ಪ್ರತಿಯೊಂದು ಪಾತ್ರವೂ ಉತ್ತಮವಾಗಿ ಮೂಡಿಬಂದಿದೆ. ಅದಕ್ಕೆ ತಕ್ಕಂತೆ ಎಲ್ಲಾ ಕಲಾವಿದರೂ ಕೂಡ ಉತ್ತಮ ಸಹಕಾರ ನೀಡಿದ್ದಾರೆ. ಹೀಗಾಗಿಯೇ ಚಿತ್ರ ಅಂದುಕೊಂಡಂತೆ ಚೆನ್ನಾಗಿ ಮೂಡಿ ಬರುತ್ತಿದೆ.

- ನಿಮ್ಮ ಚಿತ್ರಜೀವನದಲ್ಲಿ ‘ದಿ ರೈಸ್ ಆಫ್ ಅಶೋಕ” ಚಿತ್ರ ಎಷ್ಟು ಮುಖ್ಯ. ಇದಕ್ಕೆ ನಿಮ್ಮ ತಯಾರಿ ಹೇಗಿದೆ
ಇದುವರೆಗಿನ ನನ್ನ ಚಿತ್ರ ಜೀವನದಲ್ಲಿ ಬಾರಿ ನಿರೀಕ್ಷೆ ಇಟ್ಟುಕೊಂಡಿರುವ ಮಹತ್ವಾಕಾಂಕ್ಷೆಯ ಚಿತ್ರ. ಒಳ್ಳೆಯ ಮತ್ತು ಗುಣಮಟ್ಟದ ಚಿತ್ರ ನೀಡಬೇಕು ಎನ್ನುವ ಉದ್ದೇಶದಿಂದ ಎಲ್ಲಿಯೂ ಕಾಂಪ್ರಮೈಸ್ ಮಾಡಿಕೊಳ್ಳದೆ. ಕಥೆಯ ಮೇಲೆ ವರ್ಷಾನುಗಟ್ಟಲೆ ಕೆಲಸ ಮಾಡಿದ್ದೇವೆ. ಚಿತ್ರೀಕರಣಕ್ಕೆ ತೆರಳುವುದಕ್ಕೂ ಮುನ್ನ ಸಾಕಷ್ಟು ಸಿದ್ದತೆ ಮಾಡಿಕೊಂಡಿದ್ದೇವೆ. ಕನ್ನಡ, ತೆಲುಗು ಮತ್ತು ತಮಿಳು ಮೂರು ಭಾಷೆಯಲ್ಲಿ ಚಿತ್ರ ಮೂಡಿ ಬರುತ್ತಿದ್ದು ಎಲ್ಲಾ ಭಾಷೆಗಳಲ್ಲಿಯೂ ಚಿತ್ರ ಜನರಿಗೆ ಇಷ್ಟವಾಗಲಿದೆ. ಎನ್ನುವ ನಂಬಿಕೆ ಮತ್ತು ವಿಶ್ವಾಸವಿದೆ.
- ಯಾವಾಗ ಚಿತ್ರೀರಕಣ ಪೂರ್ಣಗೊಳಿಸುವ ಉದ್ದೇಶವಿದೆ. ಮುಂದಿನ ಯೋಜನೆ
ಈಗ ಹಾಕಿಕೊಂಡಿರುವ ಶೆಡ್ಯೂಲ್ಡ್ ಪ್ರಕಾರ ಏಪ್ರಿಲ್ 15ಕ್ಕೆ ಚಿತ್ರೀಕರಣ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದ್ದೇವೆ, ಈ ನಿಟ್ಟಿನಲ್ಲಿ ಇಡೀ ಚಿತ್ರತಂಡ ಕೆಲಸ ಮಾಡುತ್ತಿದೆ. ಚಿತ್ರೀಕರಣ ಪೂರ್ಣಗೊಂಡ ನಂತರ ಏಪ್ರಿಲ್ 25ಕ್ಕೆ ಮೊದಲ ಹಾಡು ಬಿಡುಗಡೆ ಮಾಡುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಎಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳದೆ ಉತ್ತಮ ಗುಣಮಟ್ಟದ ಚಿತ್ರ ನೀಡುವ ಹಂಬಲ ಮತ್ತು ತುಡಿತ ನಮ್ಮದು.
- ಚಿತ್ರದ ತಂತ್ರಜ್ಞರ ಬಗ್ಗೆ ಮಾಹಿತಿ ನೀಡುವುದಾದರೆ
ನಿರ್ದೇಶಕ ವಿನೋದ್ ದೋಂಡಳೆ ಮಾಡಿದ್ದ ಕೆಲವನ್ನು ಮನು ಶೆಡ್ಗರ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಉಳಿದಂತೆ ಲವಿತ್ ಕ್ಯಾಮರ, ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ. ಟಿಕೆ ದಯಾನಂದ ಅವರ ಕಥೆ ಚಿತ್ರಕ್ಕಿದೆ. ಮೊದಲೇ ಹೇಳಿದ ಹಾಗೆ ಚಿತ್ರವನ್ನು ಕನ್ನಡ , ತಮಿಳು, ತೆಲುಗು ಭಾಷೆಯಲ್ಲಿ ಮೂಡಿ ಬರುತ್ತಿದೆ. ಚಿತ್ರವನ್ನು ಆದಷ್ಟು ಬೇಗ ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ, ಈ ನಿಟ್ಟಿನಲ್ಲಿ ಇಡೀ ತಂಡ ಪ್ರಯತ್ನದ ಹಾದಿಯಲ್ಲಿದೆ

ಚಿತ್ರವನ್ನು ವೃದ್ಧಿಕ್ರಿಯೇಷನ್ ಮತ್ತು ಸತೀಶ್ ಪಿಕ್ಚರ್ ಹೌಸ್ ಅಡಿ ವರ್ಧನ್ ಹರಿ, ಜೈಶಾನ್ವಿ ಮತ್ತು ನೀನಾಸಂ ಸತೀಶ್ ನಿರ್ಮಾಣ ಮಾಡುತ್ತಿದ್ದು ಸಜ್ಜನ್ ರಾಜ್ ಸಂಕಲ ಮತ್ತು ದೇವರಾಜ್ ಕೃಷ್ಣಪ್ಪ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ರವಿವರ್ಮ ಮತ್ತು ವಿಕ್ರಮ್ ಮೋರ್ ಸಾಹಸ ಚಿತ್ರಕ್ಕಿದ್ದು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚು ಮಾಡಿದೆ

