ಸಿನಿಮಾ ನಿಮ್ದು, ಜಾತ್ರೆ ನಿಮ್ದು, ತೇರು ಎಳೆಯಿರಿ, ಜನರಿಗೆ ಖುಷಿ ಹಂಚಿ: ಗೋಲ್ಡನ್ಸ್ಟಾರ್ ಗಣೇಶ್
“ನಮ್ ಹುಡುಗ್ರು ಪ್ರತಿಬಾರಿಯೂ ನಿಮ್ಮ ಸಿನಿಮಾ ಜಾತ್ರೆ ಮಾಡಬೇಕು ಅಂತಾ ಕೇಳ್ತಾ ಇದ್ರು, ಮಾಡ್ರಪ್ಪ ಈಗ, ಪಿಕ್ಚರ್ ನಿಮ್ದು, ಜಾತ್ರೆ ನಿಮ್ದು, ತೇರು ಎಳೆಯಿರಿ, ಜನರಿಗೆ ಖುಷಿ ಕೊಡಿ..” ಎಂದು ತಮ್ಮ ಜೊತೆಗಾರರು, ಅನುಯಾಯಿಗಳಿಗೆ ಗೋಲ್ಡನ್ಸ್ಟಾರ್ ಗಣೇಶ್ ಮುಕ್ತ ಆಹ್ವಾನ ನೀಡಿದರು.

ಅದರಲ್ಲಿಯೂ ರೇಣು, ದಾಸೇಗೌಡ, ಜಗ್ಗಿ, ಸನತ್, ಕುಮಾರ್ ಸೇರಿದಂತೆ ನಮ್ಮೆಲ್ಲಾ ಹುಡುಗರು ಕೇಳ್ತಾ ಇದ್ದ ಸಮಯ ”ಕೃಷ್ಣಂ ಪ್ರಯಣ ಸಖಿ” ಚಿತ್ರದ ಮೂಲಕ ಬಂದಿದೆ. ಸಿನಿಮಾ ನಿಮ್ದು ಜಾತ್ರೆ ನಿಮ್ದು ಮಾಡಿ ಖುಷಿ ಹಂಚಿ ಎಂದರು.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ಚಿತ್ರ” ಕೃಷ್ಣಂ ಪ್ರಯಣ ಸಖಿ” ಚಿತ್ರ ಇದೇ ತಿಂಗಳು 15 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪ್ರೀ ರಿಲೀಸ್ ಈವೆಂಟ್ನಲ್ಲಿ ಮನಬಿಚ್ಚಿ ಮಾತನಾಡಿ ಮತ್ತೊಂದು ಸಂಭ್ರಮ ಮತ್ತು ದೊಡ್ಡ ಗೆಲುವು ಆಸ್ವಾದಿಸುವ ಖುಷಿಯ ಸಿದ್ದತೆಯಲ್ಲಿದ್ದರು.
ಈ ವೇಳೆ ಮಾತು ಹಂಚಿಕೊಂಡ ಗಣೇಶ್, ಚಿತ್ರದ ಪ್ರತಿಯೊಂದು ಹಾಡು ಚೆನ್ನಾಗಿ ಬಂದಿದೆ. ನಾನು ಕೃಷ್ಣನ ಅನುಯಾಯಿ, ಅವರ ಬಗೆಗಿನ ಹಾಡು ಕೂಡ ಚೆನ್ನಾಗಿ ಮೂಡಿ ಬಂದಿದೆ. ಹಾಡುಗಳು ಯಶಸ್ಸು ಗಳಿಸಿವೆ ಅದರ ಪ್ರತಿಯೊಂದು ಶ್ರೇಯ ಕನ್ನಡಿಗರು, ತಂಡಕ್ಕೆ ಸಲ್ಲಬೇಕು ಅದಕ್ಕಾಗಿ ನಾನು ಅಭಾರಿ. ಜೊತೆಗೆ ಅಭಿಮಾನಿಗಳಿಗೆ ಸಾಷ್ಟಾಂಗ ನಮಸ್ಕಾರ. ನನಗೆ ಗೊತ್ತು. ನಾನು ಹೆಚ್ಚು ಖುಷಿ ಪಟ್ಟಿರುವುದಕ್ಕಿಂತ ಹೆಚ್ಚಾಗಿ ನನ್ನ ಅಭಿಮಾನಿಗಳು ಸಂಭ್ರಮಿಸಿದ್ಧಾರೆ ಎಂದರು
ರಂಗಾಯಣ ರಘು, ಗಿರೀಶ್ ಶಿವಣ್ಣ, ರವಿಶಂಕರ್ ಸೇರಿದಂತೆ ಐದಾರು ಮಂದಿಯ ಬಳಗವಿದೆ. ಜೊತೆಗೆ ಅಭಿಮಾನಿಗಳು ಅ ಗೋಲ್ಡನ್ ಸ್ಟಾರ್ಗೆ ದೊಡ್ಡ ಹಾಡು ಬರಬೇಕು ಎಂದು ಬಯಸುತ್ತಿದ್ದ ಅಭಿಮಾನಿಗಳಿಗೆ ಆ ಘಳಿಗೆ ಬಂದಿದೆ. ದ್ವಾಪರ, ಚಿನ್ನಮ್ಮ ಸಕ್ಸಸ್ ಪ್ರತಿಯೊಬ್ಬ ಅಭಿಮಾನಿಗಳಿಗೆ ಸಮರ್ಪಣೆ ಮಾಡುವೆ. ನನಗೆ ಜೈಕಾರ ಹಾಕಬೇಡಿ, ಹಾಡು ಸಕ್ಸಸ್ ಮಾಡಿರುವ ನಿಮಗೆ ಜೈಕಾರ ಹಾಕಬೇಕು, ದೇವರು ಅವನದೇ ಆದ ಪ್ಲಾನ್ ಹಾಕಿಕೊಂಡಿರುತ್ತಾತೆ ಶ್ರೀನಿವಾಸ್ ರಾಜ್, ಪ್ರಶಾಂತ್ ನನ್ನನ್ನು ಹಾಕಿಕೊಂಡು ಸಿನಿಮಾ ಮಾಡಿದ್ದಾರೆ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಕೇಳಿಕೊಂಡರು
ಕೋಟಿ ಕೋಟಿ ಸುರಿದರೂ ಖುಷಿ ಸಿಗಲ್ಲ:
ಚಿತ್ರೀಕರಣದ ಸಮಯದಲ್ಲಿ ಖುಷಿ ಆಗಿರಬೇಕು, ಚಿತ್ರೀಕರಣ ಸ್ಥಳದಲ್ಲಿ ತಟ್ಟೆ ಇಡ್ಲಿ, ಚಟ್ನಿ, ಮಸಾಲ ವಡೆ, ರಂಗಾಯಣ ರಘು, ಸಾಧು ಕೋಕಿಲ ಜೊತೆ ತರ್ಲೆ ಮಾಡಿಕೊಂಡು, ಗಿರೀಶ್ ಶಿವಣ್ಣನ ಕಾಲು ಎಳೆದುಕೊಂಡು ಆ ಎನರ್ಜಿಯಲ್ಲಿ ಕ್ಯಾಮರಾ ಮುಂದೆ ಆಕ್ಟ್ ಮಾಡುವ ಖುಷಿ, ಸುಖ ನನಗೆ ಎಲ್ಲಿಯೂ ಸಿಗಲ್ಲ, ನನಗೆ ಹೆಚ್ಚು ಅತಿ ಖುಷಿ, ಮನಸ್ಸಿಗೆ ನೆಮ್ಮದಿ ತೃಪ್ತಿ ಕೊಡುವ ಕೆಲಸ ಅಂದರೆ ಕ್ಯಾಮರ ಮುಂದೆ ನಟಿಸೋದು. ಜೊತೆಗೆ ಮನೆ ಮತ್ತು ಸಿನಿಮಾ ಕ್ಯಾಮರ ಮುಂದೆ ಸಿಗುವ ಖುಷಿ ನನ್ನ ಮುಂದೆ ಕೋಟಿ ಕೋಟಿ ಸುರಿದರೂ ಸಿಗುವುದಿಲ್ಲ ಎಂದರು

ಕ್ಯಾಮರ ಮುಂದೆ, ನಟನೆ ಮಾಡಬೇಕಾದರೆ ಕ್ಯಾಮಾರದಲ್ಲಿ ನನ್ನ ಅಷ್ಟು ಅಭಿಮಾನಿಗಳನ್ನು ಕಾಣ್ತೇನೆ ಚಿತ್ರಮಂದಿರಕ್ಕೆ ಬಂದು ನಮ್ ಗಣೇಶ್ ಚೆನ್ನಾಗಿ ಮಾಡಿದ್ದಾನೆ ಅಂದರೆ ಅಷ್ಟೇ ಸಾಕು. ಫೈಟು, ಎಮೋಷನ್, ಹಾಡು ಚೆನ್ನಾಗಿ ಮಾಡಿದ್ದಾನೆ ಅನ್ನಿಸಿದರೆ ಅದಕ್ಕಿಂತ ಖುಷಿ ಇನ್ನೊಂದು ಇರಲಾರದು ಅಂತಹ ಪ್ರೀತಿ ಕಾಣುವ ಘಳಿಗೆ ಕೃಷ್ಣಂ ಪ್ರಯಣ ಸಖಿ ಮೂಲಕ ಸಿಕ್ಕಿದೆ ಎಂದರು
ಚಿತ್ರದಲ್ಲಿ ರಂಗಾಯಣ ರಘು, ಶಶಿಕುಮಾರ್, ಗಿರಿ, ಮಾಳವಿಕ ನಾಯರ್, ಶರಣ್ಯ ಶೆಟ್ಟಿ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ. ಜಸ್ಟ್ ಕರಣಗೆ ಎಲ್ಲರಿಗೂ ಒಳ್ಳೆಯದಾಗಲಿ, ಅಭಿಮಾನಿಗಳಿಗೆ ನಮಸ್ಕಾರ ನಮಸ್ಕಾರ ನಮಸ್ಕಾರ . ಹಿರಿಯ ಗೀತಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಹಳೆ ಸ್ನೇಹಿತರು, ತುಂಬಾ ಹಾಡು ಬರೆದಿದ್ದಾರೆ. ಈ ಮಟ್ಟಕ್ಕೆ ಹೋಗಿರಲಲ್ಲ. ಹಾಡುಗಳು ಹಿಟ್ ಆಗಿವೆ. ಅದರ ಹಿಂದಿನ ಶ್ರಮದಲ್ಲಿ ತಂಡಕ್ಕೆ ಜೀವ ಝಲ್ ಎಂದಿದೆ. ಆಗಸ್ಟ್ 15ಕ್ಕೆ ಚಿತ್ರ ಬಿಡುಗಡೆ ಆಗ್ತಾ ಇದೆ. ಇದೇ 15ಕ್ಕೆ ಚಿತ್ರಮಂದಿಕ್ಕೆ ಬನ್ನಿ ಚಿತ್ರ ನೋಡಿ ಎಂದು ಕೇಳಿಕೊಂಡರು

