ನಟಿ, ನಿರೂಪಕಿ ಅನುಪಮ ಗೌಡ ಸಾರಥ್ಯದಲ್ಲಿ ಬರುತ್ತಿದೆ “ಜಾಕ್ ಪಾಟ್”
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿ ಹೊಸತನದ ಕಾರ್ಯಕ್ರಮಗಳನ್ನು ನೀಡುವಲ್ಲಿ ಸದಾಕಾಲ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ, ಪ್ರೇಕ್ಷಕರಿಗೆ ಇನ್ನಷ್ಟು ಮನೋರಂಜನೆ ನೀಡಲು ಹೊತ್ತು ತರ್ತಿದೆ ಹೊಸ ಗೇಮ್ ಶೋ “ಸುವರ್ಣ ಜಾಕ್ ಪಾಟ್. ನಟಿ ನಿರೂಪಕಿ ಅನುಪಮಾ ಗೌಡ ಸಾರಥ್ಯದಲ್ಲಿ ಮೂಡಿ ಬರುತ್ತಿದೆ.
‘ಜಾಕ್ ಪಾಟ್’ ಇದೊಂದು ವಿಭಿನ್ನ ಕಾನ್ಸೆಪ್ಟ್ ಹೊಂದಿರುವ ಶೋ. ಇಲ್ಲಿ ಭಾಗವಹಿಸುವ ಪ್ರತಿ ಸೆಲೆಬ್ರಿಟಿಗಳು ಆಟದ ಜೊತೆ 50 ಲಕ್ಷ ರೂಪಾಯಿ ಬೆಲೆಬಾಳುವ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್, ಲ್ಯಾಪ್ ಟಾಪ್, ಎಲೆಕ್ಟ್ರಿಕ್ ಸ್ಕೂಟರ್ ಹಾಗು ಇನ್ನಿತರ ಗೃಹಉಪಯೋಗಿ ವಸ್ತುಗಳನ್ನು ಪಡೆಯುವ ಅವಕಾಶ ಗಳಿಸುತ್ತಾರೆ. ಆದರೆ ನೀಡಿರುವ ಮಂತ್ರ ಸರಿಯಾಗಿ ಹೇಳಿದರೆ ಮಾತ್ರ ಅವರು ಆಯ್ಕೆ ಮಾಡಿದ ವಸ್ತುಗಳನ್ನು ಗೆಲ್ಲುತ್ತಾರೆ.
ಇದೊಂತರ ತಾರೆಯರಿಗೆ ಆಟದ ಜೊತೆ ನೆನಪಿನ ಶಕ್ತಿಗೆ ಸವಾಲೊಡ್ಡುವ ಗೇಮ್ ಶೋ.. ಪ್ರತಿ ವಾರ 2 ತಂಡಗಳು ಭಾಗವಹಿಸುತ್ತದೆ. “ಬಾಗ್ಲು ತೆಗಿಯೇ ಸೇಸಮ್ಮ” ಎಂಬ ಬರಹದಡಿ ಶುರುವಾಗುತ್ತಿರುವ ‘ಸುವರ್ಣ ಜಾಕ್ ಪಾಟ್ ಕಾರ್ಯಕ್ರಮದಲ್ಲಿ ಅದೃಷ್ಟದ ಬಾಗಿಲು ತೆರೆದು ಯಾರು ಜಾಕ್ ಪಾಟ್ ಹೊಡೆಯುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಈಗಾಗಲೇ ‘ಸುವರ್ಣ ಜಾಕ್ ಪಾಟ್ ಗ್ರಾಂಡ್ ಲಾಂಚ್ ಗೆ ಭರ್ಜರಿಯಾಗಿ ತಯಾರಿ ನಡೆದಿದ್ದು, ವಾಹಿನಿಯಲ್ಲಿ ಮೂಡಿಬರುತ್ತಿರುವ ಪೆÇ್ರಮೋಗೆ ಪ್ರೇಕ್ಷಕರಿಂದ ಅದ್ಬುತ ಪ್ರತಿಕ್ರಿಯೆ ದೊರೆಯುತ್ತಿದೆ. ಹಲವಾರು ಸೂಪರ್ ಹಿಟ್ ಶೋಗಳನ್ನು ನಡೆಸಿಕೊಟ್ಟು ನೋಡುಗರ ಮನಗೆದ್ದಿರುವ ನಟಿ, ನಿರೂಪಕಿ ಅನುಪಮ ಗೌಡ ಈ ಬಾರಿ `ಸುವರ್ಣ ಜಾಕ್ ಪಾಟ್ ನ ಸಾರಥಿಯಾಗಿದ್ದರೆ.
ಬರ್ತಿದೆ ‘ಸುವರ್ಣ ಜಾಕ್ ಪಾಟ್ ಇದೇ ನವೆಂಬರ್ 26 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ `ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಪ್ರಸಾರವಾಗಲಿದೆ.