CCL starts from February 23: Pulaka among celebrities

ಫೆಬ್ರವರಿ 23 ರಿಂದ ಸಿಸಿಎಲ್ ಆರಂಭ: ಸೆಲೆಬ್ರಿಟಿಗಳಲ್ಲಿ ಪುಳಕ - CineNewsKannada.com

ಫೆಬ್ರವರಿ 23 ರಿಂದ ಸಿಸಿಎಲ್ ಆರಂಭ: ಸೆಲೆಬ್ರಿಟಿಗಳಲ್ಲಿ ಪುಳಕ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ದಿನಗಣನೆಯಷ್ಟೇ ಬಾಕಿ ಉಳಿದಿದೆ. ಇದೇ ತಿಂಗಳ 23ರಿಂದ ತಾರೆಯರು ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯುತ್ತಿದ್ದಾರೆ. ಸ್ಯಾಂಡಲ್ ವುಡ್ ಟು ಬಾಲಿವುಡ್ ತನಕ ಎಲ್ಲಾ ಇಂಡಸ್ಟ್ರೀಯ ಸ್ಟಾರ್ ಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್ 10 ಸೀಸನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಮಾಲೀಕ ಅಶೋಕ್ ಖೇಣಿ, ಸಿಸಿಎಲ್ ಸಂಸ್ಥಾಪಕ ವಿಷ್ಣು ಇಂದೋರಿ ಹಾಗೂ ಕ್ಯಾಪ್ಟನ್ ಪ್ರದೀಪ್ ಸೇರಿದಂತೆ ಇತತರು ಭಾಗಿಯಾಗಿದ್ದರು. ಅನಾರೋಗ್ಯದ ಕಾರಣದಿಂದ ಕಿಚ್ಚ ಸುದೀಪ್ ಅವರು ಭಾಗಿಯಾಗಲಿರಲಿಲ್ಲ. ಇದೇ ಸಂದರ್ಭದಲ್ಲಿ ಸಿಸಿಎಲ್ ಜರ್ನಿ ವಿಡಿಯೋ ಬಿಡುಗಡೆ ಮಾಡಲಾಯಿತು.

ಬಳಿಕ ಮಾತನಾಡಿದ ಕರ್ನಾಟಕ ಬುಲ್ಡೋಜರ್ಸ್ ಕ್ಯಾಪ್ಟನ್ ಪ್ರದೀಪ್, 12 ವರ್ಷದ ಸಿಸಿಎಲ್ ಜರ್ನಿ ನೋಡಿದ್ಮೇಲೆ. ತುಂಬಾ ಎಮೋಷನಲ್ ಮೂವೆಂಟ್ ತರ ಇದೆ. ವರ್ಷಕ್ಕೆ 2 ತಿಂಗಳು ಇಟ್ಟುಕೊಂಡರೇ 24 ತಿಂಗಳಾಯ್ತು. ಅಂದ್ರೆ 2 ವರ್ಷದ ಜೀವನವನ್ನು ಸಿಸಿಎಲ್ ಗೆ ಕೊಟ್ಟಿದ್ದೇವೆ. ಅಷ್ಟು ವರ್ಷದ ಎಫರ್ಟ್ ಇವತ್ತು ಬುರ್ಜ್ ಖಾಲೀಫಾ ಮೇಲೆ ಬರ್ತಿದೆ. ಸಿಸಿಎಲ್ ಬಿಗ್ಗರ್ ಅಂಡ್ ಬೆಟ್ಟರ್ ಆಗ್ತಿದೆ. ಇವಿಷ್ಟಕ್ಕೂ ನಾನು ವಿಷ್ಣು ಸರ್ ಗೆ ಧನ್ಯವಾದ ಹೇಳುತ್ತೇನೆ. ಕರ್ನಾಟಕ ಬುಲ್ಡೋಸರ್ಸ್ ಸ್ಟಾಟ್ ಆಗುವುದೇ ಕೆ ಅಕ್ಷರದಿಂದ ಅಂದ್ರೆ ಸುದೀಪಣ್ಣ ಅವರನ್ನು ಬಿಟ್ಟು ಮಾತನಾಡಲು ಸಾಧ್ಯವಿಲ್ಲ. ಅವರಿಗೆ ಹುಷಾರಿಲ್ಲ. ಹೀಗಾಗಿ ಅವರು ಬರಲು ಆಗಲಿಲ್ಲ ಎಂದರು.

ಕರ್ನಾಟಕ ಬೋಲ್ಡರ್ ತಂಡದ ಮಾಲೀಕ ಅಶೋಕ್ ಖೇಣಿ ಮಾತನಾಡಿ, 10 ವರ್ಷದ ಹಿಂದೆ ಕನ್ನಡ ಸಿನಿಮಾ ಇಂಡಸ್ಟ್ರೀ ಚಿಕ್ಕ ಇಂಡಸ್ಟ್ರೀಯಾಗಿತ್ತು. ಇಂಡಸ್ಟ್ರೀಯ ಒಟ್ಟಾರೆ ಗಳಿಗೆ 50 ಕೋಟಿಯಾಗಿತ್ತು. ಇದು 10 ವರ್ಷದ ಹಿಂದಿನ ಕಥೆ. ಕೆಜಿಎಫ್ ಬಂದ್ಮೇಲೆ ಇಂಡಸ್ಟ್ರೀ ತುಂಬ ಬದಲಾಗಿದೆ. ದರ್ಶನ್ ಇಂಡಸ್ಟ್ರೀಗೆ ಬಂದು 25 ವರ್ಷವಾಯ್ತು. ಅವರಿಗೆ 47 ವಯಸ್ಸು. ಇಂದಿಗೂ. ಹೀರೋ ಆಗಿಯೂ ನಟಿಸ್ತಿದ್ದಾರೆ. ವರ್ಷಕ್ಕೆ 2 ಸಿನಿಮಾ ಮಾಡ್ತಿದ್ದಾರೆ. ನನ್ನ ಅದೃಷ್ಟ ಸಿಸಿಎಲ್ ನಲ್ಲಿ ಇಂತಹ ತಂಡ ಪಡೆದಿರುವುದು. ಸುದೀಪ್ ಅವರಿಗೆ ಕ್ರಿಕೆಟ್ ಅಂದ್ರೆ ಹುಚ್ಚು. ಕ್ರಿಕೆಟ್ ನ್ನು ಪ್ರೀತಿಸ್ತಾರೆ. ಒಮ್ಮೆ ಸಿಸಿಎಲ್ ನಲ್ಲಿ ಪೆಟ್ಟು ಮಾಡಿಕೊಂಡಿದ್ದರು. ಆದ್ರೆ ಅದನ್ನು ಲೆಕ್ಕಿಸದೇ ಮತ್ತೆ ಆಟವಾಡಿದ್ದರು. ಕ್ರಿಕೆಟ್ ಸಿನಿಮಾ ಇಂಡಸ್ಟ್ರೀಯ ಭಾಗ. ಅದೇ ರೀತಿ ಸಿನಿಮಾ ಕ್ರಿಕೆಟ್ ನ ಒಂದು ಭಾಗ ಎಂದರು.

ಸಿಸಿಎಲ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆಗಿರುವ ವಿಷ್ಣು ವರ್ಧನ್ ಇಂದೂರಿ ಮಾತನಾಡಿ, ಸಿಸಿಎಲ್ ನ ಆಳ ಏನೆಂಬುವುದು ಮೊದಲೇ ಗೊತ್ತಿದ್ದರೆ ಖಂಡಿತ ಇದಕ್ಕೆ ಕೈ ಹಾಕುತ್ತಿರಲಿಲ್ಲ. ಇದನ್ನು ಈ ಮಟ್ಟಕ್ಕೆ ತರಬೇಕಾದರೆ ಬಹಳ ಕಷ್ಟಪಟ್ಟಿದ್ದೇವೆ. ನೋವು ಅನುಭವಿಸಿದ್ದೇವೆ. ಅನೇಕ ಬಾರಿ ನಿಲ್ಲಿಸುವ ಯೋಚನೆ ಯೂ ಬಂದಿದೆ. ಆದರೆ ಅಶೋಕ್ ಸರ್, ಸುದೀಪ್ ಸರ್ ಸಪೆÇೀರ್ಟ್ ಹಾಗೂ ಆಟದ ಮೇಲಿ ಪ್ರೀತಿ ಇದನ್ನು ಇಲ್ಲಿವರೆಗೆ ತರಲು ಸಾಧ್ಯವಾಯಿತು. ಈ ಬಾರಿ ಸಿಸಿಎಲ್ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು,ಕ್ರಿಕೆಟ್ ಪ್ರೇಮಿಗಳು ಮತ್ತು ಸಿನಿಮಾ ಪ್ರೇಮಿಗಳು ಮೈದಾನದಲ್ಲಿ ಮಾತ್ರವಲ್ಲ ದೂರದರ್ಶ, ಸೋನಿ, ಜಿಯೋ ಸಿನಿಮಾ ಪ್ರಸಾರಗೊಳ್ಳುತ್ತಿರುವುದು ಹೊಸ ದಾಖಲೆ ಬರೆದಿದೆ ಎಂದರು.

ಸಿಸಿಎಲ್ 10ನೇ ಸೀಸನ್ ಫೆಬ್ರವರಿ 23 ರಿಂದ ಶುರುವಾಗಿ ಮಾರ್ಚ್ 17 ರವರೆಗೆ ನಡೆಯಲ್ಲಿದೆ..ಭಾರತದ ಎಂಟು ಚಲನಚಿತ್ರೋದ್ಯಮಗಳ ಸೂಪಸ್ರ್ಟಾರ್ಗಳನ್ನು ಒಳಗೊಂಡಿರುವ ಒಟ್ಟು ಎಂಟು ತಂಡಗಳು ಯುಎಇ ಸೇರಿದಂತೆ ಭಾರತದ ಐದು ಸ್ಥಳಗಳಲ್ಲಿ 24 ದಿನಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಯುಎಇಯ ಶಾರ್ಜಾದಲ್ಲಿ ಲೀಗ್ನ ಮೂರು ಪಂದ್ಯಗಳು ನಡೆಯಲ್ಲಿದ್ದು, ಆ ನಂತರ ಲೀಗ್ ಭಾರತಕ್ಕೆ ಕಾಲಿಡಲಿದೆ.

ಭಾರತದ ಐದು ನಗರಗಳಾದ ಹೈದರಾಬಾದ್, ಬೆಂಗಳೂರು, ಚಂಡೀಗಢ, ತಿರುವನಂತಪುರ ಮತ್ತು ವೈಜಾಗ್ನಲ್ಲಿ ಉಳಿದ ಪಂದ್ಯಗಳು ನಡೆಯಲ್ಲಿವೆ. ವಾರಾಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಡಬಲ್ ಹೆಡರ್ ಪಂದ್ಯಗಳಿರಲಿವೆ. ಅಂದರೆ ದಿನಕ್ಕೆ ಎರಡು ಪಂದ್ಯಗಳು ನಡೆಯಲ್ಲಿವೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಕರ್ನಾಟಕ ಬುಲ್ಡೋಜರ್ಸ್ ಮೊದಲ ಪಂದ್ಯಾವಳಿ ಇದೇ 25ರಂದು ನಡೆಯುತ್ತಿದ್ದು, ಮುಂಬೈ ಹೀರೋಸ್ ಎದುರು ಸೆಣಸಾಡಲಿದೆ.

ತಂಡಗಳು ಯಾವುವು?

  • ಮುಂಬೈ ಹೀರೋಸ್
  • ಕೇರಳ ಸ್ಟ್ರೈಕರ್ಸ್
  • ತೆಲುಗು ವಾರಿಯರ್ಸ್
  • ಭೋಜ್ಪುರಿ ದಬಾಂಗ್ಸ್
  • ಕರ್ನಾಟಕ ಬುಲ್ಡೋಜರ್ಸ್
  • ಬೆಂಗಾಲ್ ಟೈಗರ್ಸ್
  • ಚೆನ್ನೈ ರೈನೋಸ್
  • ಪಂಜಾಬ್ ದಿ ಶೇರ್

ಮುಂಬೈ ಹೀರೋಸ್' ತಂಡಕ್ಕೆ ನಟ ಸಲ್ಮಾನ್ ಖಾನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ರಿತೇಶ್ ದೇಶಮುಖ್ ಕ್ಯಾಪ್ಟನ್ ಆಗಿದ್ದಾರೆ. ಸೋಹೈಲ್ ಖಾನ್ ಅವರು ಈ ತಂಡದ ಮಾಲೀಕ.ತೆಲುಗು ವಾರಿಯರ್ಸ್’ ಟೀಮ್ಗೆ ವೆಂಕಟೇಶ್ ಅವರು ಬ್ರ್ಯಾಂಡ್ ಅಂಬಾಸಿಡರ್. ಆ ತಂಡಕ್ಕೆ ಅಖಿಲ್ ಅಕ್ಕಿನೇನಿ ನಾಯಕನಾಗಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್' ಟೀಮ್ ಗೆ ಪ್ರದೀಪ್ ಕ್ಯಾಪ್ಟನ್ ಆಗಿದ್ದಾರೆ. ಮೋಹನ್ ಲಾಲ್ ಸಹ-ಮಾಲೀಕರಾಗಿರುವಕೇರಳ ಸ್ಟ್ರೈಕರ್ಸ್’ ತಂಡವನ್ನು ಕ್ಯಾಪ್ಟನ್ ಇಂದ್ರಜಿತ್ ಮುನ್ನಡೆಸಲಿದ್ದಾರೆ. ಭೋಜಪುರಿ ದಬಾಂಗ್ಸ್' ತಂಡಕ್ಕೆ ಮನೋಜ್ ತಿವಾರಿ ನಾಯಕ. ಸೋನು ಸೂದ್ ಅವರುಪಂಜಾಬ್ ದೆ ಶೇರ್’ ತಂಡಕ್ಕೆ ನಾಯಕರಾಗಿದ್ದಾರೆ. ಬೋನಿ ಕಪೂರ್ ಒಡೆತನದ `ಬೆಂಗಾಲ್ ಟೈಗರ್ಸ್’ ಟೀಮ್ ಗೆ ಜಿಸ್ಸು ಸೇನ್ಗುಪ್ತ ಕ್ಯಾಪ್ಟನ್ ಆಗಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin