Comedian Ravi Shankar, who returned to television: Home Minister's responsibility

ಮರಳಿ ಕಿರುತೆರೆಗೆ ಬಂದ ಹಾಸ್ಯ ನಟ ರವಿಶಂಕರ್ : ಗೃಹ ಮಂತ್ರಿಯ ಜವಾಬ್ದಾರಿ - CineNewsKannada.com

ಮರಳಿ ಕಿರುತೆರೆಗೆ ಬಂದ ಹಾಸ್ಯ ನಟ ರವಿಶಂಕರ್ : ಗೃಹ ಮಂತ್ರಿಯ ಜವಾಬ್ದಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನದ ಮನರಂಜನೆಯಾಗಿ ಆರಂಭವಾದ “ಸುವರ್ಣ ಗೃಹಮಂತ್ರಿ” ಎಂಬ ಹೊಸ ಬಗೆಯ ರಿಯಾಲಿಟಿ ಶೋ ಈಗಾಗಲೇ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಆದರೆ ಇದೀಗ ಮತ್ತಷ್ಟು ಮೆರುಗು ನೀಡಲು ಇದೇ ಮೊದಲ ಬಾರಿಗೆ ಸುವರ್ಣ ವಾಹಿನಿಯ ಮೂಲಕ ಖ್ಯಾತ ನಟ ರವಿಶಂಕರ್ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ.

Actor Ravishankar

ಇನ್ಮುಂದೆ ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ನಟ ರವಿಶಂಕರ್ ಹೊರಲಿದ್ದಾರೆ. ವರ್ಷಗಳ ಬಳಿಕ ನಟ ರವಿ ಶಂಕರ್ ಅವರನ್ನು ಗೃಹಮಂತ್ರಿ ಪ್ರೊಮೋದಲ್ಲಿ ನೋಡಿದ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತ ಪಡಿಸಿದ್ದು, ‘ಸುವರ್ಣ ಗೃಹಮಂತ್ರಿ’ಯ ಸಂಚಿಕೆಯಲ್ಲಿ ರವಿಶಂಕರ್ ನಿರೂಪಣೆ ನೋಡಲು ಕಾತುರತೆಯಿಂದ ಕಾಯುತ್ತಿದ್ದಾರೆ.

Actor Ravishankar

ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು, ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು ‘ಥ್ಯಾಂಕ್ ಯು’ ಅಂತನೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಜೊತೆ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ “ಸುವರ್ಣ ಗೃಹಮಂತ್ರಿ” ಕಾರ್ಯಕ್ರಮದ ಶೈಲಿಯಾಗಿದೆ.

Actor Ravishankar

ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಇನ್ಮುಂದೆ ನಟ ರವಿಶಂಕರ್ ರವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆಯನ್ನು ಕೊಟ್ಟು ಮನೆ ಗೃಹಿಣಿಯನ್ನು ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಗೆ ಬಂದಿರುವ ಆಪ್ತ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೂ ಆಟವನ್ನು ಆಡಿಸಿ ಬಹುಮಾನಗಳನ್ನು ನೀಡಲಿದ್ದಾರೆ.

Actor Ravishankar

ತಪ್ಪದೇ ವೀಕ್ಷಿಸಿ ‘ಸುವರ್ಣ ಗೃಹಮಂತ್ರಿ’ ಇದೇ ಸೋಮವಾರದಿಂದ ಶನಿವಾರ ಮಧ್ಯಾಹ್ನ 1 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin