ಆಕ್ಷನ್,ಥ್ರಿಲ್ಲರ್ ಸೆಂಟಿಮೆಂಟ್ ಚಿತ್ರ “ಹಿರಣ್ಯ”
ಚಿತ್ರ: ಹಿರಣ್ಯ
ನಿರ್ದೇಶನ: ಪ್ರವೀನ್ ಅವ್ಯುಕ್ತ್
ತಾರಾಗಣ: ರಾಜವರ್ದನ್, ರಿಹಾನ, ದಿವ್ಯ ಸುರೇಶ್, ದಿಲೀಪ್ ಶೆಟ್ಟಿ, ಅರವಿಂದರಾವ್, ಹುಲಿ ಕಾರ್ತಿಕ್ ಮತ್ತಿತರರು
ರೇಟಿಂಗ್: * ** 3/5
ಆಕ್ಷನ್, ಥ್ರಿಲ್ಲರ್ ಜೊತೆಗೆ ತಾಯಿ-ಮಗುವಿನ ಬಾಂಧವ್ಯದ ಕಥನ ಹೊಂದಿರುವ “ ಹಿರಣ್ಯ” ಹೊಡೆದಾಟ ಬಡಿದಾಟದ ಮೂಲಕ ವಿಜೃಂಬಿಸಿದ್ದು ಈ ವಾರ ತೆರೆಗೆ ಬಂದಿದೆ.
ಸರಳವಾದ ಕತೆಯನ್ನು ಮುಂದಿಟ್ಟುಕೊಂಡು ಕಡೆ ತನಕ ಕುತೂಹಲ ಕಾಪಾಡಿಕೊಂಡು ಬಂದಿದ್ದಾರೆ ನಿರ್ದೇಶಕ ಪ್ರವೀಣ್ ಅವ್ಯುಕ್ತ್. ಈ ಮೂಲಕ ಹೊಸದೊಂದು ಬಗೆಯ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡುವಲ್ಲಿ ಸಫಲರಾಗಿದ್ದಾರೆ.
ದುಡ್ಡಗಾಗಿ ಕೈ ಮೈ ತುಂಬಾ ರಕ್ತದ ಕೋಡಿ ಹರಿಸಿ ಕೊಲೆ ಮಾಡುವುದನ್ನು ನೀರು ಕುಡಿದಷ್ಟು ಸಲೀಸು ಎಂದುಕೊಂಡ ರಾಣಾ- ರಾಜವರ್ದನ್, ಮಗುವನ್ನು ಅಪಹರಣ ಮಾಡಿಕೊಂಡು ಬಂದವ, ಇನ್ನೇನು ಎಲ್ಲಾ ಸಲೀಸು ಎನ್ನುವಷ್ಟರಲ್ಲಿ ಮಗುವಿನ ಕೊಲೆ ವಿಚಾರದಲ್ಲಿ ತಾನು ಸಾಕಿ ಬೆಳೆಸಿದ ಗುರುವನ್ನೇ ಎದುರು ಹಾಕಿಕೊಳ್ಳುತ್ತಾನೆ.
ಹಾಲುಗಲ್ಲದ ಮಗುವನ್ನು ರಕ್ಷಣೆ ಮಾಡಲು ಕಂಕಣತೊಟ್ಟ ರಾಣಾ. ಅದಕ್ಕಾಗಿ ನಾನಾ ಸವಾಲು ,ಸಂದಿಗ್ವ ಪರಿಸ್ಥಿತಿ ಎದುರಿತ್ತಾನೆ. ಈ ನಡುವೆ ಬಾರ್ನಲ್ಲಿ ಡ್ಯಾನ್ಸ್ ಮಾಡುವ ಲೈಲಾ- ದಿವ್ಯ ಸುರೇಶ್ ಸಹಾಯದೊಂದಿಗೆ ಮಗುವಿನ ಪಾಲನೆಗೆ ಮುಂದಾಗುತ್ತಾನೆ. ಈ ನಡುವೆ ಹೆತ್ತ ಮಗು ಕಳೆದುಕೊಂಡ ಅಭಿ- ರಿಹಾನ ತನ್ನ ಮಗುವಿಗಾಗಿ ಹಂಬಲಿಸುತ್ತಾಳೆ.
ಆಗ ತಾನೆ ಹುಟ್ಟಿದ ಮಗು ಕೊಲೆಗೆ ಸುಫಾರಿ ನೀಡಿದವರು ಯಾರು, ಅದರ ಹಿಂದೆ ಇರುವವರು ಯಾರು ಎನ್ನುವುದು ರೋಚಕ. ಅದರ ಹಿಂದೆ ಮತ್ತೊಂದು ಕಥೆ ಅನಾವರಣವಾಗುತ್ತದೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ಆಕ್ಷನ್ ಸನ್ನಿವೇಶಗಳಲ್ಲಿ ನಟ ರಾಜವರ್ದನ್ ಮಿಂಚಿದ್ದಾರೆ. ನಟನೆಯಲ್ಲಿ ಮತ್ತಷ್ಟು ಪಳಗಬೇಕಾಗಿದೆ. ಸಂಭಾಷಣೆಯಲ್ಲಿ ಅವರ ಮಾತುಗಳಲ್ಲಿ ಇನ್ನಷ್ಟು ಸ್ಪಷ್ಟತೆ ಬೇಕು,ಅದಕ್ಕಾಗಿ ಅವರು ಪ್ರಯತ್ನ ಮಾಡಿದರೆ ಉತ್ತಮ ನಟನಾಗುವ ಎಲ್ಲಾ ಸಾಮಥ್ರ್ಯವಿದೆ. ಬರೀ ದೇಹ ದಂಡನೆಯೊಂದೇ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ.
ನಟಿ ದಿವ್ಯ ಸುರೇಶ್, ನಟ ದಿಲೀಪ್ ಶೆಟ್ಟಿ, ಕಡಿಮೆ ಸಮಯ ತೆರೆಯ ಮೇಲೆ ಕಾಣಿಸಿಕೊಂಡರೂ ಇದ್ದಷ್ಟು ಸಮಯ ಚಿತ್ರಕ್ಕೆ ಕಳೆಕಟ್ಟಿದ್ದಾರೆ. ನಟಿ ರಿಹಾನ, ಅರವಿಂದರಾವ್,ಹುಲಿ ಕಾರ್ತಿಕ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ
ನಿರ್ದೇಶಕ ಪ್ರವೀಣ್ ಅವ್ಯುಕ್ತ್, ದಿಲೀಪ್ ಪಾತ್ರದ ವಿಷಯದಲ್ಲಿ ಒಂದಷ್ಟು ಸಣ್ಣ ಸಣ್ಣ ವಿಷಯಗಳ ಕಡೆಗೆ ಗಮನ ಹರಿಸಿದ್ದರೆ ಒಳ್ಳೆಯದಿತ್ತು. ಒಂದು ಕಡೆ ಅಣ್ಣ, ಮತ್ತೊಂದು ಕಡೆ ತಮ್ಮ ಎಂದು ಹೇಳಿದ್ದಾರೆ. ಉಳಿದಂತೆ ಉತ್ತಮ ಪ್ರಯತ್ನ ಮಾಡಿರುವ ಚಿತ್ರ. ಯೋಗೇಶ್ವರ್ ಆರ್. ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.