ಫೆಬ್ರವರಿ 15 ರಂದು ಜೀ ಕನ್ನಡ ಹಾಗು ಜೀ 5 ಒಟಿಟಿಯಲ್ಲಿ ‘ಮ್ಯಾಕ್ಸ್’ ಅಬ್ಬರ

ಕನ್ನಡ ಕಿರುತೆರೆಯ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಜೀû ಕನ್ನಡ ವಾಹಿನಿಯು ಬರೀ ಧಾರಾವಾಹಿಗಳಿಂದ ಮಾತ್ರವಲ್ಲದೇ, ರಿಯಾಲಿಟಿ ಶೋಗಳು, ವಲ್ರ್ಡ್ ಟೆಲಿವಿಷನ್ ಪ್ರೀಮಿಯರ್ ಗಳಿಂದ ಪ್ರೇಕ್ಷಕರ ಮನಗೆದ್ದು ನಂ.1 ಪಟ್ಟದಲ್ಲಿದೆ.

ಅಷ್ಟೇ ಅಲ್ಲದೇ ಈಗ ಜೀ ಕನ್ನಡ ವಾಹಿನಿಯು ಪ್ರೇಕ್ಷಕರಿಗೆ ಮತ್ತೊಂದು ಗುಡ್ ನ್ಯೂಸ್ ಕೊಡಲು ಮುಂದಾಗಿದೆ. ಹೌದು, ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿರುವ ಬ್ಲಾಕ್ಬಸ್ಟರ್ ಚಲನಚಿತ್ರ ಮ್ಯಾಕ್ಸ್ ಇದೇ ಫೆಬ್ರವರಿ 15 ರಂದು 7:30 ಕ್ಕೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಅದೇ ದಿನ ಜೀ 5 ಒಟಿಟಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ.
ಕಿಚ್ಚ ಸುದೀಪ್ ಮ್ಯಾಕ್ಸ್ ಆಗಿ ನಟಿಸಿರುವ ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳಿದ್ದಾರೆ. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗಾಗಿ ಮಾಡಿರುವ ಈ ಸಿನೆಮಾವನ್ನು ಸ್ವತಃ ಕಿಚ್ಚ ಸುದೀಪ್ ಮತ್ತು ಎಸ್. ಧನು ನಿರ್ಮಿಸಿದ್ದಾರೆ. ಇಡೀ ಚಿತ್ರವನ್ನು ಕಿಚ್ಚ ಸುದೀಪ್ ಆವರಿಸಿಕೊಂಡಿದ್ದು ಸುನಿಲ್, ವರಲಕ್ಷ್ಮಿ ಶರತ್ ಕುಮಾರ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ವಿಜಯ್ ಚಂಡೂರು ಮುಂತಾದ ಅದ್ಬುತ ಕಲಾವಿದರ ಸಾಥ್ ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಅಜನೀಶ್ ಲೋಕನಾಥ್ ಸಂಗೀತ ಮತ್ತು ಶೇಖರ್ ಚಂದ್ರ ಛಾಯಾಗ್ರಾಹಣ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಇನ್ನು ಸಕ್ಕತ್ ಆಕ್ಷನ್, ಖಡಕ್ ಡೈಲಾಗ್, ಸುಮಧುರ ಮತ್ತು ಮಾಸ್ ಹಾಡುಗಳು ಪ್ರೇಕ್ಷಕರನ್ನು ಅತ್ತಿತ್ತ ಕದಲದಂತೆ ಮಾಡುತ್ತದೆ ಅಂದರೆ ತಪ್ಪಾಗಲ್ಲ.

ಈ ಚಿತ್ರದ ಕಥೆಯು ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ (ಸುದೀಪ್) ಸುತ್ತ ಸುತ್ತುತ್ತದೆ. ಅರ್ಜುನ್ ಒಬ್ಬ ಪೆÇಲೀಸ್ ಅಧಿಕಾರಿಯಾಗಿದ್ದು ನ್ಯಾಯದ ಪರ ಹೋರಾಡಲು ಹೋಗಿ ಅತೀಹೆಚ್ಚು ಬಾರಿ ಅಮಾನತ್ತುಗೊಂಡಿರುತ್ತಾನೆ. ಈತ ನಟೋರಿಯಸ್ ಗ್ಯಾಂಗ್ ಗಳಿಗೂ ಮ್ಯಾಕ್ಸ್ ಅಂತಾನೆ ಚಿರಪರಿಚಿತ. ಮ್ಯಾಕ್ಸ್ ಎಂಬ ಹೆಸರು ಕೇಳಿದ್ರೆ ಪುಡಿ ರೌಡಿಗಳಿಂದ ಹಿಡಿದು ಗ್ಯಾಂಗ್ ಸ್ಟರ್ ಗಳು ಕೂಡ ಭಯ ಬೀಳುತ್ತಾರೆ. ಹೀಗಿರುವಾಗ ಅಮಾನತ್ತಿನಲ್ಲಿದ್ದ ಮ್ಯಾಕ್ಸ್ ರಾತ್ರೋರಾತ್ರಿ ಹೊಸ ಸ್ಟೇಷನ್ ಗೆ ವರ್ಗಾವಣೆ ಆಗುತ್ತಾನೆ.
ಆ ರಾತ್ರಿ ಒಂದು ನಟೋರಿಯಸ್ ಗ್ಯಾಂಗ್ ನಿಂದ ಅಲ್ಲಿ ದೊಡ್ಡ ಅವಘಡ ನಡೆಯುತ್ತದೆ. ಆದ ತಪ್ಪಿಗೆ ಕಾರಣರಾದ ಮಿನಿಸ್ಟರ್ ಮಕ್ಕಳಿಬ್ಬರನ್ನು ಅದೇ ರಾತ್ರಿ ಮ್ಯಾಕ್ಸ್ ಅರೆಸ್ಟ್ ಮಾಡ್ತಾನೆ. ಆದರೆ ಸ್ಟೇಷನ್ ಒಳಗೆ ಅವರಿಬ್ಬರೂ ಸಾವಿಗೀಡಾಗುತ್ತಾರೆ. ಅಲ್ಲಿಂದ ಮುಂದೆ ಮ್ಯಾಕ್ಸ್ ಈ ಕೇಸ್ ನ ಹೇಗೆ ತೆಗೆದುಕೊಂಡು ಹೋಗ್ತಾನೆ ಅನ್ನೋದೇ ಈ ಚಿತ್ರದ ಹೈಲೈಟ್ ಪಾಯಿಂಟ್.
ಆ ರಾತ್ರಿ ಅಲ್ಲಿ ಅವಘಡ ಹೇಗಾಯು ಮ್ಯಾಕ್ಸ್ ಮುಂದೆ ಏನ್ಮಾಡ್ತಾನೆ ಇವೆಲ್ಲವನ್ನೂ ತಿಳ್ಕೊಳೋಕೆ ನೀವು ನೋಡ್ಲೇಬೇಕು ‘ಮ್ಯಾಕ್ಸ್’ ಇದೇ ಫೆಬ್ರವರಿ 15 ರಂದು 7:30 ಕ್ಕೆ ಪ್ರಸಾರವಾಗಲಿದೆ.
‘ಮ್ಯಾಕ್ಸ್’ ಚಿತ್ರವನ್ನು ತಮಿಳಿನ ಕಲೈಪುಲಿ ಎಸ್ ಧಾನು ಅವರು ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಸುದೀಪ್ ಜೊತೆಗೆ ವರಲಕ್ಷ್ಮೀ ಶರತ್ ಕುಮಾರ್, ‘ಉಗ್ರಂ’ ಮಂಜು, ಸುಕೃತಾ ವಾಗ್ಳೆ, ಸಂಯುಕ್ತಾ ಹೊರನಾಡು, ವಿಜಯ್ ಚೆಂಡೂರು, ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ, ತೆಲುಗು ನಟ ಸುನೀಲ್ ಮುಂತಾದವರು ನಟಿಸಿದ್ದರು. 2024ರ ಡಿಸೆಂಬರ್ 25ರಂದು ರಿಲೀಸ್ ಆಗಿದ್ದ ಮ್ಯಾಕ್ಸ್ ಥಿಯೇಟರ್ ನಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಬಾಕ್ಸಾಫೀಸ್ ನಲ್ಲಿಯೂ ಒಳ್ಳೆ ಕಲೆಕ್ಷನ್ ಮಾಡಿತ್ತು.