ಫುಟ್ಬಾಲ್ ಕನಸು ಹೊತ್ತ ಮಕ್ಕಳಿಗೆ ರೆಸಿಡೆನ್ಶಿಯಲ್ ಅಕಾಡೆಮಿ ಉತ್ತಮ ವೇದಿಕೆ

ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಹಲಸೂರಿನಲ್ಲಿ ನೂತನ ರೆಸಿಡೆನ್ಶಿಯಲ್ ಅಕಾಡೆಮಿ ಆರಂಭಿಸುತ್ತಿದೆ. ಈ ರೆಸಿಡೆನ್ಶಿಯಲ್ ಅಕಾಡೆಮಿಗಾಗಿ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಮುಂಬರುವ ಓಪನ್ ಟ್ರಯಲ್ಸ್ ಘೋಷಿಸಿದೆ.

ಬೆಂಗಳೂರಿನ ಹಲಸೂರಿನಲ್ಲಿರುವ ಕ್ಲಬ್ ನಲ್ಲಿ ಓಪನ್ ಟ್ರಯಲ್ಸ್ ನಡೆಯಲಿದೆ. ಮುಂಬರುವ ರೆಸಿಡೆನ್ಶಿಯಲ್ ಅಕಾಡೆಮಿಗೆ ಆಟಗಾರರನ್ನು ಆಯ್ಕೆ ಮಾಡುವುದು ಟ್ರಯಲ್ಸ್ ಮುಖ್ಯ ಉದ್ದೇಶವಾಗಿದೆ. ಯುವ ಫುಟ್ಬಾಲ್ ಆಟಗಾರರಿಗೆ ಉತ್ತಮ ತರಬೇತಿ ಮತ್ತು ಮಾರ್ಗದರ್ಶನ ಒದಗಿಸುವುದು ಅಕಾಡೆಮಿಯ ಉದ್ದೇಶವಾಗಿದೆ.
ಅಕಾಡೆಮಿ ಮೈದಾನದ ಒಳಗೆ ಮತ್ತು ಹೊರಗೆ ಆಟಗಾರರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೇ ಆಧುನಿಕ ಸೌಲಭ್ಯಗಳು, ಪರಿಣಿತ ಕೋಚಿಂಗ್, ಮತ್ತು ವೃತ್ತಿಪರ ಫುಟ್ಬಾಲ್‍ಗೆ ಮಾರ್ಗ ಒದಗಿಸುತ್ತದೆ. ಆಧುನಿಕ ಸೌಲಭ್ಯಗಳು ಮತ್ತು ಪರಿಣಿತ ತರಬೇತಿಯೊಂದಿಗೆ ಸುಸಜ್ಜಿತವಾದ ರೆಸಿಡೆನ್ಶಿಯಲ್ ಅಕಾಡೆಮಿ ಆಟಗಾರ ಕೇವಲ ಉತ್ತಮ ಫುಟ್ಬಾಲ್‍ಗಳಾಗಿ ಮಾತ್ರವಲ್ಲ, ವೃತ್ತಿಪರ ಜೀವನಕ್ಕೆ ಸಿದ್ಧರಾಗುವ ಪರಿಪೂರ್ಣ ವ್ಯಕ್ತಿಗಳಾಗಿಯೂ ರೂಪಿಸಲು ಕಾರ್ಯ ನಿರ್ವಹಿಸುತ್ತದೆ. ಸ್ಪರ್ಧಾತ್ಮಕ ದರಗಳಲ್ಲಿ, ಆಟಗಾರರಿಗೆ ವೃತ್ತಿಪರ ಪಥವನ್ನು ರೂಪಿಸುವ ಅವಕಾಶ ಅಕಾಡೆಮಿ ನೀಡಲಿದೆ.
ಪ್ರತಿಭಾವಂತ ಆಟಗಾರರನ್ನು ಹುಡುಕಲು ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಅನೇಕ ರಾಜ್ಯಗಳಲ್ಲಿ ಓಪನ್ ಟ್ರಯಲ್ಸ್ ಆಯೋಜಿಸುತ್ತಿದೆ. ಫೆಬ್ರವರಿ 15 ರಂದು ಬೆಂಗಳೂರಿನ ಹಲಸೂರಿನಲ್ಲಿರುವ ಪ್ರಥಮ ಓಪನ್ ಟ್ರಯಲ್ಸ್ ನಡೆಯಲಿದ್ದು ಬಳಿಕ ಮಾರ್ಚ್ 1 ಮತ್ತು 2 ರಂದು ಪುಣೆಯ ಬವ್ಧಾನ್ ಮತ್ತು ಖರಾಡಿಯಲ್ಲಿ ಟ್ರಯಲ್ಸ್ ನಡೆಯಲಿವೆ.
11 ರಿಂದ 18 ವರ್ಷ ವಯಸ್ಸಿನ ಎಲ್ಲ ಯುವ ಫುಟ್ಬಾಲ್ ಆಟಗಾರರು ಓಪನ್ ಟ್ರಯಲ್ಸ್ ನಲ್ಲಿ ಭಾಗವಹಿಸಬಹುದಾಗಿದೆ. ಈ ಟ್ರಯಲ್ಸ್ ನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ SUಈಅ ಅಕಾಡಮಿಯಲ್ಲಿ ಸ್ಥಾನ ಪಡೆಯಬಹುದಾಗಿದೆ.
ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಮೊಹಮದ್ ರಫಿಕ್ ಮಾತನಾಡಿ ಯುವ ಫುಟ್ಬಾಲ್ ಆಟಗಾರರಿಗೆ ಟ್ರಯಲ್ಸ್‍ನಲ್ಲಿ ಭಾಗವಹಿಸಲು ಪೆÇ್ರೀತ್ಸಾಹಿಸಿದ್ದಾರೆ. ‘ಅರ್ಹ ಫುಟ್ಬಾಲ್ ಆಟಗಾರರು ಕೌಶಲ್ಯಗಳನ್ನು ಪ್ರದರ್ಶಿಸಿ ಅಕಾಡೆಮಿಯ ಭಾಗವಾಗಲು ಈ ಟ್ರಯಲ್ಸ್ ಅನ್ನು ಆಯೋಜಿಸಲಾಗಿದೆ ಎಂದಿದ್ಧಾರೆ