Meghashree's guest appearance in `Bhagya Lakshmi': A new twist

`ಭಾಗ್ಯಲಕ್ಷ್ಮೀ’ಗೆ ಮೇಘಾಶ್ರೀ ಅತಿಥಿ ಪ್ರವೇಶ: ಹೊಸ ತಿರುವು - CineNewsKannada.com

`ಭಾಗ್ಯಲಕ್ಷ್ಮೀ’ಗೆ ಮೇಘಾಶ್ರೀ ಅತಿಥಿ ಪ್ರವೇಶ: ಹೊಸ ತಿರುವು

ಕಲರ್ಸ್ ಕನ್ನಡದ ಜನಪ್ರಿಯ ಮೆಗಾ ಧಾರಾವಾಹಿ ಭಾಗ್ಯಲಕ್ಷ್ಮೀಯಲ್ಲಿ ನಟಿ ಮೇಘಾಶ್ರೀ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಲ್ಲಿ ಹೊಸ ಕುತೂಹಲ ಮೂಡಿಸಿದೆ.

ಬರಲಿರುವ ಎಪಿಸೋಡ್‍ಗಳಲ್ಲಿ ಆದಿಯ ಕುಟುಂಬ ಅವನ ಮೇಲೆ ಮದುವೆಯ ಒತ್ತಡ ಹೇರುತ್ತದೆ. ಈ ದಿಸೆಯಲ್ಲಿ ಅವರು ಹುಡುಗಿಯನ್ನು ನೋಡಲು ಹೋಗುವರು ಆ ಹುಡುಗಿಯೇ ಮೇಘಾಶ್ರೀ.

ಮೇಘಾಶ್ರೀ ಪ್ರವೇಶ ಧಾರಾವಾಹಿಗೆ ಭಾವನಾತ್ಮಕ ಚಟುವಟಿಕೆ ಮತ್ತು ತೀವ್ರತೆ ಸೇರಿಸುವುದರ ಜೊತೆಗೆ, ಆದಿ ಮುಂದೇನು ಮಾಡುತ್ತಾನೆ ಎಂಬ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಈ ಭೇಟಿಯು ಅವನ ಬದುಕಿನಲ್ಲಿ ಹೊಸ ತಿರುವು ತರುತ್ತದೆಯೇಕುಟುಂಬದೊಳಗಿನ ಹೊಸ ಸಂಘರ್ಷಗಳಿಗೆ ಕಾರಣವಾಗುತ್ತದೆಯೇ

ಕಲರ್ಸ್ ಕನ್ನಡದಲ್ಲಿ ಪ್ರತಿ ಸಂಜೆ 7 ಕ್ಕೆ ಪ್ರಸಾರವಾಗುವ ಭಾಗ್ಯಲಕ್ಷ್ಮೀ ಕಂತುಗಳು ಕುತೂಹಲ ಹಾಗೂ ರೋಚಕತೆಯನ್ನು ಹೆಚ್ಚಿಸುವುದು ಖಚಿತ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin