ರಾಧಾಕೃಷ್ಣ ಧಾರಾವಾಹಿ ನಟಿ ಮಲ್ಲಿಕಾ ಸಿಂಗ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ
ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ರಾಧಾಕೃಷ್ಣ ಧಾರಾವಾಹಿ ಕಿರುತೆರೆಯ ವೀಕ್ಷಕರನ್ನು ಮೋಡಿ ಮಾಡಿದೆ.ಅದರಲ್ಲಿಯೂ ರಾಧಾ ಕೃಷ್ಣಯರ ಪಾತ್ರದಾರಿಗಳು ಮನೆಮನ ತಲುಪಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಮೂಲ ಹಿಂದಿಯಲ್ಲಿ ಬರುವ ಧಾರಾವಾಹಿ ಕನ್ನಡದಲ್ಲಿಯೂ ಧಾರಾವಾಹಿ ಮೂಡಿಬರುತ್ತಿದೆ.ಅದರಲ್ಲಿಯೂ ರಾಧಾ ಪಾತ್ರಧಾರಿ ಮಲ್ಲಿಕಾ ಸಿಂಗ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.
ಅದುವೇ ಸಿಂಪಲ್ ಸುನಿ ನಿರ್ದೇಶನದ ಒಂದು ಸರಳ ಪ್ರೇಮಕಥೆಯ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ.ಚಿತ್ರಕ್ಕೆ ಆಯ್ಕೆಯಾದ ಬಗೆಯನ್ನು ನಿರ್ದೇಶಕ ಸುನಿ ವಿವರಿಸಿದ್ದು ಹೀಗೆ.
ನಿರ್ಮಾಪಕ ಮೈಸೂರು ರಮೇಶ್ ಕುಟುಂಬ ರಾಧಾ ಕೃಷ್ಣ ಧಾರಾವಾಹಿಯನ್ನು ಹೆಚ್ಚಾಗಿ ನೋಡುತ್ತಿದೆ. ಅವರ ಮನೆಯವರು ಮಲ್ಲಿಕಾ ಸಿಂಗ್ ಪಾತ್ರದ ಮೇಲೆ ಹೆಚ್ಚು ಪ್ರೀತಿ ತೋರುತ್ತಿದ್ದುನ್ನು ಕಂಡ ನಿರ್ಮಾಪಕರು ಮಲ್ಲಿಕಾ ಸಿಂಗ್ ಅವರನ್ನು ಸಂಪರ್ಕಿಸಿದರು.
ಕಪ್ ನಮ್ದೇ ಅಂದ ಮಲ್ಲಿಕಾ ಸಿಂಗ್
ಮತ್ತೊಂದು ಕಡೆ ನಾನೂ ಕಾಳು ಹಾಕುತ್ತಿದ್ದೆ. ಕಾಳಿಗೆ ಮಲ್ಲಿಕಾ ಸಿಂಗ್ ಬಿದ್ದರು. ಹೀಗಾಗಿ ಒಂದು ಸರಳ ಪ್ರೇಕಥೆಗೆ ಆಯ್ಕೆಯದರು.ಸ್ವಾತಿಷ್ಠ ಜೊತೆಗೆ ಮಲ್ಲಿಕಾ ಸಿಂಗ್ ಕೂಡ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 50 ರಷ್ಟು ಚಿತ್ರೀಕರಣ ಮುಗಿದೆ ಎಂದರು.