“ಜೀ ರೈಟರ್ಸ್ ರೂಮ್” ಮೂಲಕ ಮುಂದಿನ ಪೀಳಿಗೆಯ ಚಿತ್ರಕಥೆಗಾರರ ಹುಡುಕಾಟ
ಕಂಟೆಂಟ್ ಮತ್ತು ತಂತ್ರಜ್ಞಾನ ಶಕ್ತಿ ಕೇಂದ್ರವಾದ ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ದೇಶಾದ್ಯಂತ ಯುವ, ಉದಯೋನ್ಮುಖ ಚಿತ್ರಕಥೆ ಪ್ರತಿಭೆಗಳನ್ನು ಗುರುತಿಸಲು ಹೊರಟಿದೆ.

ಮನರಂಜನಾ ಪ್ರಪಂಚದಲ್ಲಿ ವಿಕಸನಗೊಳ್ಳುತ್ತಿರುವ ಅಗತ್ಯಗಳೊಂದಿಗೆ ಗುರುತಿಸಲ್ಪಟ್ಟಿರದ ಪ್ರತಿಭೆಗಳ ಹುಡುಕಾಟ ನಡೆದಿದೆ. ಇದಕ್ಕಾಗಿ 80 ನಗರಗಳು ಮತ್ತು 32 ಈವೆಂಟ್ ಸೆಂಟರ್‍ಗಳಲ್ಲಿ ನಡೆಯಲಿದೆ. ಹಿಂದಿ, ಮರಾಠಿ, ಬಂಗಾಳಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿನ ಭರವಸೆಯ ಕಥೆಗಾರರನ್ನು ಗುರಿಯಾಗಿಸಿಕೊಂಡು, ಶೋಧ ನಡೆಯಲಿದೆ
ಜೀû ರೈಟರ್ಸ್ ರೂಮ್ ಕೇವಲ ಪ್ರತಿಭೆಗಳನ್ನು ಹುಡುಕುವುದು ಮಾತ್ರವಲ್ಲದೇ ಅದಕ್ಕಿಂತಲೂ ಮಿಗಿಲಾದ ಯುವ, ಉದಯೋನ್ಮುಖ ಚಿತ್ರಕಥೆ ಬರಹಗಾರರ ಪ್ರತಿಭೆಯನ್ನು ಪತ್ತೆ ಹಚ್ಚಲಿದೆ.ಕಂಪನಿಯ ಬ್ರಾಂಡ್ ಫಿಲಾಸಫಿಯಾದ ಯುವರ್ಸ್ ಟ್ರೂಲಿ, ಝೀ, ಜೊತೆಗೆ ತನ್ನ ಕಂಟೆಂಟ್ ಕೊಡುಗೆಯನ್ನು ಪ್ಲಾಟ್‍ಫಾರ್ಮ್‍ಗಳಾದ್ಯಂತ ಬೆಳೆಸುವ ಗುರಿಯೊಂದಿಗೆ ಉದ್ದೇಶಿಸಲಾದ ಸೃಜನಶೀಲ ಪ್ರಯತ್ನವಾಗಿದೆ. ಆಯ್ದ ಬರಹಗಾರರಿಗೆ ಜೀû ನ ವಿಸ್ತೃತ ಟಿವಿ, ಡಿಜಿಟಲ್ ಮತ್ತು ಚಲನಚಿತ್ರ ಪ್ಲಾಟ್‍ಫಾರ್ಮ್‍ಗಳಲ್ಲಿ ಕಥೆಗಳನ್ನು ರಚಿಸಲು ಅವಕಾಶ ನೀಡುತ್ತಿದೆ.
ಝೀ ಎಂಟರ್‍ಟೈನ್‍ಮೆಂಟ್ ಎಂಟರ್‍ಪ್ರೈಸಸ್ ಲಿಮಿಟೆಡ್‍ನ ಚೀಫ್ ಕ್ರಿಯೇಟಿವ್ ಆಫೀಸರ್ ರಾಘವೇಂದ್ರ ಹುಣಸೂರು ಪ್ರತಿಕ್ರಿಯೆ ನೀಡಿ “ಭಾರತದ ಅತಿದೊಡ್ಡ ಕಥೆಗಾರರಲ್ಲಿ ಒಬ್ಬರಾಗಿ.ಕೇವಲ ಅವಕಾಶ ಮಾತ್ರವಲ್ಲದೇ, ಮುಂದಿನ ಪೀಳಿಗೆಯ ಬರವಣಿಗೆಯ ಪ್ರತಿಭೆ ಪೋಷಿಸುವುದು ಕರ್ತವ್ಯ ಕೂಡ ಆಗಿದೆ. ಝೀ ರೈಟರ್ಸ್ ರೂಮ್ ನೊಂದಿಗೆ, ಹೊಸ ಧ್ವನಿಗಳು, ಕೇಳಿರದ ವಿಚಾರಗಳು ಮತ್ತು ಪ್ರಾಮಾಣಿಕ ಭಾವನೆಗಳು ಒಂದು ರೂಪ ತಾಳುವಂತೆ ಮಾಡುತ್ತೇವೆ. ಇದು ಒಂದು ಸ್ಪರ್ಧೆಯಲ್ಲ ಬದ್ಧತೆಯಾಗಿದೆ ಎಂದಿದ್ದಾರೆ
ಜೀûನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್ ಮಹಾದೇವ್ ಮಾತನಾಡಿ, “ ಝೀ ರೈಟರ್ಸ್ ರೂಮ್ ಮೂಲಕ ಕಥೆ ಹೇಳುವ ಕೌಶಲ್ಯ ಹೆಚ್ಚಿಸುವ ಮೂಲಕ ಒಂದು ಹೆಜ್ಜೆ ಮುಂದೆ ಇಡುತ್ತಿದ್ದೇವೆ. ಇದು ಉತ್ಸಾಹಭರಿತ ಬರಹಗಾರರಿಗೆ ನಾಳೆಯ ಕಥೆಗಾರರಾಗಲು ಉತ್ತಮ ಅವಕಾಶ ನೀಡುತ್ತಿದ್ದೇವೆ” ಎಂದರು.

ಜೀû ಎಂಟರ್ಟೈನ್ಮೆಂಟ್ ಎಂಟರ್‍ಪ್ರೈಸಸ್ ಲಿಮಿಟೆಡ್‍ನ ಪೂರ್ವ, ಉತ್ತರ, ಪ್ರೀಮಿಯಂ ಕ್ಲಸ್ಟರ್‍ನ ಮುಖ್ಯ ಕ್ಲಸ್ಟರ್ ಅಧಿಕಾರಿ ಸಾಮ್ರಾಟ್ ಘೋಷ್ ಮಾತನಾಡಿ ಬಂಗಾಳ ಯಾವಾಗಲೂ ಸಾಹಿತ್ಯ ಮತ್ತು ಸಿನಿಮಾ ಪ್ರತಿಭೆಯ ಕೇಂದ್ರವಾಗಿದೆ. ಜೀû ರೈಟರ್ಸ್ ರೂಮ್ ಮೂಲಕ ಉದಯೋನ್ಮುಖ ಬಂಗಾಳಿ ಕಥೆಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ನಾವು ನವಯುಗದ ಪ್ಲಾಟ್‍ಫಾರ್ಮ್ ಅನ್ನು ನಿರ್ಮಿಸುತ್ತಿದ್ದೇವೆ” ಎಂದು ಹೇಳಿದ್ದಾರೆ
ಚೀಫ್ ಕ್ಲಸ್ಟರ್ ಆಫೀಸ್-ಸೌತ್, ವೆಸ್ಟ್, ಜೀû ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ಸಿಜು ಪ್ರಭಾಕರನ್, ಮಾತನಾಡಿ “ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳು ದೇಶದಲ್ಲಿಯೇ ಅತ್ಯಂತ ರೋಮಾಂಚನಕಾರಿ ಕಥೆಗಳನ್ನು ಹೇಳುವ ಸಂಸ್ಕೃತಿಗಳ ತವರೂರಾಗಿವೆ. ಜೀû ರೈಟರ್ಸ್ ರೂಮ್, ಇಂತಹ ಉತ್ಸಾಹ ಮತ್ತು ಸೃಜನಶೀಲತೆಯನ್ನು ಟಿವಿ, ಒಟಿಟಿ ಮತ್ತು ಚಲನಚಿತ್ರದಾದ್ಯಂತ ಬೆಳೆದು ನಿಲ್ಲಬಹುದಾದ ವೃತ್ತಿಪರವಾದ ರಚನಾತ್ಮಕ ಕಂಟೆಂಟ್ ರಚಿಸಲು ಸಹಾಯ ಮಾಡುತ್ತದೆ” ಎಂದರು.
ನೋಂದಣಿಗೆ ಜಾಲತಾಣ : www.zeewritersroom.com ಗೆ ಭೇಟಿ ನೀಡಬಹುದಾಗಿದೆ.

