ಅಕ್ಟೋಬರ್ 13 ರಂದು “ಸುವರ್ಣ ದಸರಾ ದರ್ಬಾರ್”
ದಸರಾ ಹಬ್ಬದ ವಿಶೇಷವಾಗಿ ವೀಕ್ಷಕರಿಗೆ ಇನ್ನಷ್ಟು ಮನರಂಜನೆಯನ್ನು ನೀಡುವ ಉದ್ದೇಶದಿಂದ ಸ್ಟಾರ್ ಸುವರ್ಣ ವಾಹಿನಿಯು ಕಿರುತೆರೆಯ ಅತೀ ದೊಡ್ಡ ದಸರಾ ಸಂಭ್ರಮವನ್ನೊಳಗೊಂಡ “ಸುವರ್ಣ ದಸರಾ ದರ್ಬಾರ್” ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಲು ಸಜ್ಜಾಗಿದೆ.
ನಾಡಹಬ್ಬದ ಪ್ರಯುಕ್ತ ಸುವರ್ಣ ದಸರಾ ದರ್ಬಾರ್ ವೇದಿಕೆಯಲ್ಲಿ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಪುರಸ್ಕಾರಗಳನ್ನು ಮಾಡಲಾಗಿದೆ. ನವಶಕ್ತಿಯರ ಮಹತ್ವವನ್ನು ಸಾರುವ ಈ ನವರಾತ್ರಿಯಂದು ಇದೇ ಮೊದಲ ಬಾರಿಗೆ ತಾಯಂದಿರ ಮಹತ್ವವನ್ನು ಸಾರಲು ಕಿರುತೆರೆ ಕಲಾವಿದರು ತಮ್ಮ ತಾಯಂದಿರೊಂದಿಗೆ ವೇದಿಕೆಯಲ್ಲಿ ಭಾಗಿಯಾಗಿದ್ದು, ತಾಯಂದಿರ ಬಗ್ಗೆ ಹಿತನುಡಿಗಳನ್ನಾಡಿ, ತಾಯಂದಿರ ಪಾದ ಪೂಜೆಯನ್ನು ಮಾಡಿ ಉಡುಗೊರೆಯನ್ನು ನೀಡಿದ್ದಾರೆ.
ಕಾರ್ಯಕ್ರಮದ ಮತ್ತೊಂದು ವಿಶೇಷ ಅಂದರೆ ನಟ ರೋರಿಂಗ್ ಸ್ಟಾರ್ ಶ್ರೀ ಮುರಳಿ ಆಗಮಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದು ಕೊಟ್ಟಿದ್ದಾರೆ. ಜೊತೆಗೆ ತಾಯಿಯ ಬಗ್ಗೆ ಮಾತನಾಡಿ ಭಾವುಕರಾಗಿದ್ದರು.
‘ನೀನಾದೆನಾ’ ಖ್ಯಾತಿಯ ವಿಕ್ರಂ-ವೇದಾ, ನಟಿ ತನಿಷಾ, ವರ್ತೂರ್ ಸಂತೋಷ್, ಕಿರಿಕ್ ಕೀರ್ತಿ, ರೆಮೋ, ಸ್ನೇಹಿತ್, ಅನನ್ಯ, ನಟಿ ಪ್ರಿಯಾಂಕ, ಗಾಯಕ ಚಿನ್ಮಯ್ ಆತ್ರೇಯಸ್ ಎಲ್ಲರೂ ಒಂದಾಗಿ ವೇದಿಕೆಯಲ್ಲಿ ಭರ್ಜರಿ ಮನರಂಜನೆಯ ಮಹಾ ಮಳೆಯನ್ನೇ ಸುರಿಸಿದ್ದಾರೆ. ನಟಿ ಮಾನ್ವಿತಾ ಹರೀಶ್ ಹಾಗು ರಕ್ಷಕ್ ಬುಲೆಟ್ ಅದ್ಬುತ ಡಾನ್ಸ್ ಪರ್ಫಾರ್ಮೆನ್ಸ್ ನೀಡಿದ್ದು, ಕಾರ್ತಿಕ್ ಹಾಗು ನಮ್ರತಾ ಜೋಡಿಯಾಗಿ ಮಾಡಿರೋ ರೇನ್ ಡಾನ್ಸ್ ಗೆ ವೀಕ್ಷಕರು ಮನಸೋಲೋದಂತೂ ಖಚಿತ.
ಸುವರ್ಣ ಸೂಪರ್ ಸ್ಟಾರ್’ ಖ್ಯಾತಿಯ ನಟಿ, ನಿರೂಪಕಿ ಶಾಲಿನಿ ‘ದಸರಾ ದರ್ಬಾರ್’ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ನಿಭಾಯಿಸಿದ್ದಾರೆ. ಜೊತೆಗೆ ಭರ್ಜರಿ ಡಾನ್ಸ್, ಹಾಡು ಹರಟೆ, ಆಟ ತುಂಟಾಟಗಳಿಂದ ವೀಕ್ಷಕರಿಗೆ ಮನರಂಜನೆಯ ಹೂರಣವನ್ನು ನೀಡಲಿದೆ ಸ್ಟಾರ್ ಸುವರ್ಣ.
ಜಬರ್ದಸ್ತ್ ಮೋಜು ಮಸ್ತಿಯನ್ನು ಹೊತ್ತು ಬರ್ತಿದೆ “ಸುವರ್ಣ ದಸರಾ ದರ್ಬಾರ್” ಅಕ್ಟೋಬರ್ 13 ರ ಭಾನುವಾರ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ