ಅಕ್ಟೋಬರ್ 13 ರಂದು ಅಂಜಲಿ ನೃತ್ಯ ಮತ್ತು ಸಂಗೀತ ಶಾಲೆಯ “ಕಲಾರ್ಪಣ” -6
ಅಂಜಲಿ ಸ್ಕೂಲ್ ಆಫ್ ಡ್ಯಾನ್ಸ್ ಮ್ಯೂಸಿಕ್ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳ ವಾರ್ಷಿಕ ಕಲಾಪ್ರದರ್ಶನ ” ಕಲಾರ್ಪಣ”-6″ ಪ್ರತಿಭಾ ಪ್ರದರ್ಶನ ಅಕ್ಟೋಬರ್ 13 ರಂದು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ನಡೆಯಲಿದೆ.
ನಾಳೆ ಸಂಜೆ 5.30 ಕ್ಕೆ ಜೆಸಿ ರಸ್ತೆಯ ಎಡಿಎ ರಂಗ ಮಂದಿರದಲ್ಲಿ ಅಂಜಲಿ ನೃತ್ಯ ಮತ್ತು ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ, ನೃತ್ಯ ಸ್ಕೂಲ್ ಆಫ್ ಆರ್ಟ್ ನ ಕಲಾತ್ಮಕ ನಿರ್ದೇಶಕರು ಹಾಗು ಸಂಸ್ಥಾಪಕರಾದ ನಾಟ್ಯಕಲಾ ರತ್ನ ಗಾಯತ್ರಿ ಚಂದ್ರಶೇಖರ್, ಎಫ್ ಕೆ ಸಿಸಿಐ ಹಿರಿಯ ಉಪಾಧ್ಯಕ್ಷೆ ಉಮಾ ರೆಡ್ಡಿ ಮತ್ತಿತರರು ಭಾಗಿಯಾಗಲಿದ್ದಾರೆ.
ನಟಿ ಹಾಗು ಅಂಜಲಿ ನೃತ್ಯ ಮತ್ತು ಸಂಗೀತ ಶಾಲೆಯ ಮುಖ್ಯಸ್ಥೆ ಅಂಜಲಿ ಕೆ. ಆರ್ ಸೇರಿದಂತೆ ಮತ್ತಿತರರು ಈ ಅಪರೂಪ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಕಳೆದ 6 ವರ್ಷಗಳಿಂದ ಅಂಜಲಿ ಸ್ಕೂಲ್ ಆಫ್ ಡ್ಯಾನ್ಸ್ ಅಂಡ್ ಮ್ಯೂಸಿಕ್ ಸಂಸ್ಥೆ ಅನೇಕ ಕಲಾವಿದರನ್ನು ತಯಾರು ಮಾಡಿದೆ. ಬಸವೇಶ್ವರ ನಗರದ ಬಿಇಎಂಎಲ್ ಲೇಔಟ್ ನ ಕುವೆಂಪು ರಂಗಮಂದಿರದಲ್ಲಿ ತರಬೇತಿ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ 9243860725 ಹಾಗು 9738350165. ಸಂಪರ್ಕಿಸಬಹುದಾಗಿದೆ ಎಂದು ನಟಿಯೂ ಆಗಿರುವ ಸಂಸ್ಥೆಯ ಮುಖ್ಯಸ್ಥರಾದ ಅಂಜಲಿ ಮಾಹಿತಿ ನೀಡಿದ್ದಾರೆ