Will Pratap become captain in the Bigg Boss house this week: Curious

ಬಿಗ್ ಬಾಸ್ ಮನೆಗೆ ಈ ವಾರ ಪ್ರತಾಪ್ ಕ್ಯಾಪ್ಟನ್ ಆಗ್ತಾರಾ: ಕುತೂಹಲ - CineNewsKannada.com

ಬಿಗ್ ಬಾಸ್ ಮನೆಗೆ ಈ ವಾರ ಪ್ರತಾಪ್ ಕ್ಯಾಪ್ಟನ್ ಆಗ್ತಾರಾ: ಕುತೂಹಲ

ಭರಪೂರ ಭಾವುಕತೆಯಲ್ಲಿಯೇ ಈ ವಾರ ಕಳೆದಿದೆ. ಬಿಗ್‍ಬಾಸ್ ಮನೆಯೊಳಗೆ ಪ್ರವೇಶಿಸಿದ ಎಲ್ಲ ಸದಸ್ಯರ ಕುಟುಂಬದವರು, ಎಲ್ಲ ಸದಸ್ಯರಿಗೂ ಕಿವಿಮಾತು ಹೇಳಿ ಹೋಗಿದ್ದಾರೆ. ಬಿಗ್‍ಬಾಸ್ ಕುಟುಂಬದ ಬಂಧವನ್ನು ಇನ್ನಷ್ಟು ಗಟ್ಟಿ ಮಾಡಿದ್ದಾರೆ.

ವಾರವಿಡೀ ಹಲವು ಹೃದಯಸ್ಪರ್ಶಿ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದ ಬಿಗ್‍ಬಾಸ್ ಮನೆ ವಾರಾಂತ್ಯದಲ್ಲಿ ಮತ್ತೆ ಮೊದಲಿನ ಹಳಿಗೆ ಮರಳುತ್ತಿದೆ. `ಕ್ಯಾಪ್ಟನ್ ಯಾರು’ ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರದ ಜೊತೆಗೇ ಕಿಚ್ಚನ ವಾರಾಂತ್ಯದ ಎಪಿಸೋಡ್‍ಗಳಲ್ಲಿ ಭಾಗಿಯಾಗಲು ಸದಸ್ಯರು ಕಾಯುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರದ ಸುಳಿವು ಈವತ್ತು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪೆÇ್ರೀಮೊದಲ್ಲಿ ಇದೆ.

ಈ ವಾರ ಮನೆಯೊಳಗೆ ಬಂದ ಸ್ಪರ್ಧಿಗಳ ಕುಟುಂಬದವರಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಅವರ ಕುಟುಂಬದ ಸದಸ್ಯರನ್ನು ಬಿಟ್ಟು ಬೇರೆ ಯಾರು ಈ ಮನೆಯ ಕ್ಯಾಪ್ಟನ್ ಆಗಬೇಕಾಗಬೇಕು ಎಂದು ಬಯಸುತ್ತೀರಿ ಎಂಬ ಪ್ರಶ್ನೆಗೆ ಎಲ್ಲರೂ ತಮ್ಮ ಅಭಿಪ್ರಾಯ ಸೂಚಿಸಿದ್ದರು. ಅದರ ಅನುಸಾರ ಸಂಗೀತಾ, ತನಿಷಾ ಮತ್ತು ಪ್ರತಾಪ್ ಹೆಸರು ಅತಿ ಹೆಚ್ಚು ಸಲ ಬಂದಿತ್ತು. ಹಾಗಾಗಿ ಈ ಮೂವರು ಕ್ಯಾಪ್ಟನ್ಸಿ ಟಾಸ್ಕ್‍ನಲ್ಲಿ ಆಡಲು ಸಜ್ಜಾಗಿದ್ದರು. ಈ ನಡುವೆ ಬಿಗ್‍ಬಾಸ್ ಇನ್ನೊಂದು ಶಾಕ್ ಕೊಟ್ಟಿದ್ದಾರೆ.

ಮನೆಯ ಸದಸ್ಯರಿಗೇ ಈ ಮೂವರಲ್ಲಿ ಯಾರು ಕ್ಯಾಪ್ಟನ್ಸಿ ಟಾಸ್ಕ್‍ನಲ್ಲಿ ಆಡುವುದು ಬೇಡ ಎಂಬುದನ್ನು ಸೂಚಿಸಲು ತಿಳಿಸಿದ್ದಾರೆ. ಆಗ ಬಹುತೇಕ ಎಲ್ಲರೂ ಸೂಚಿಸಿದ್ದು ಪ್ರತಾಪ್ ಹೆಸರನ್ನು. ಪ್ರತಾಪ್ ಅಧಿಕಾರ ಸಿಕ್ಕ ಕೂಡಲೇ ಸ್ಟ್ರಿಕ್ಟ್ ಆಗಿಬಿಡ್ತಾರೆ',ಅವರು ಮೂಡಿ’, `ಪದೇ ಪದೇ ಮೂಡ್‍ಸ್ವಿಂಗ್ ಆಗುತ್ತಿರುತ್ತದೆ’ ಹೀಗೆಲ್ಲ ಹಲವು ಅಭಿಪ್ರಾಯಗಳು ಬಂದಿದೆ. ಇದರಿಂದ ಪ್ರತಾಪ್ ಮನಸ್ಸಿಗೆ ನೋವೂ ಆಗಿದೆ.

ಬಹುಶಃ ಈ ವಾರ ಮನೆಯ ಸದಸ್ಯರ ಅಭಿಪ್ರಾಯದ ಮೇರೆಗೆ ಪ್ರತಾಪ್ ಕ್ಯಾಪ್ಟನ್ಸಿ ಟಾಸ್ಕ್‍ನಿಂದ ಹೊರಗೆ ಉಳಿಯಬಹುದು. ಸಂಗೀತಾ ಮತ್ತು ತನಿಷಾ ಕ್ಯಾಪ್ಟನ್ಸಿ ಟಾಸ್ಕ್ ಆಡಬಹುದು. ಆ ಇಬ್ಬರಲ್ಲಿ ಯಾರು ಈ ವಾರದ ಕ್ಯಾಪ್ಟನ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಷ್ಟೆ.

ಬಿಗ್‍ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ.
ಪ್ರತಿದಿನದ ಎಪಿಸೋಡ್‍ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin