ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೋ ಆರಂಭ
ಆದಿತ್ಯ ಬಿರ್ಲಾ ಗ್ರೂಪ್ ಅಡಿಯಲ್ಲಿ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಬೆಂಗಳೂರಿನಲ್ಲಿ ಹೊಸ ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೊ ಪ್ರಾರಂಭಿಸಿದೆ.
ಗುರುಗ್ರಾಮ್, ಲಖನೌ, ಮುಂಬೈ ಮತ್ತು ನವಿ ಮುಂಬೈಗಳಲ್ಲಿ ಯಶಸ್ವಿಯಾಗಿ ತನ್ನ ಪೇಂಟ್ ಸ್ಟುಡಿಯೊಗಳ ಯಶಸ್ವಿ ಪ್ರಾರಂಭದ ನಂತರ ವಿಸ್ತರಣೆಯು ಪೇಂಟ್ ಮತ್ತು ಅಲಂಕರಣದ ಉದ್ಯಮವನ್ನು ಆವಿಷ್ಕಾರ, ಪ್ರೀಮಿಯಂ ಕೊಡುಗೆಗಳು ಮತ್ತು ನೈಜ ತಲ್ಲೀನಗೊಳಿಸುವ ಗ್ರಾಹಕರ ಅನುಭವಕ್ಕೆ ಪರಿವರ್ತಿಸುವ ಬ್ರಾಂಡ್ ನ ಬದ್ಧತೆಯನ್ನು ಮರು ದೃಢೀಕರಿಸಿದೆ.
ಬಿರ್ಲಾ ಓಪಸ್ ಪೇಂಟ್ಸ್ ಬೆಂಗಳೂರು ಸ್ಟುಡಿಯೊವನ್ನು ಸಾಮಾನ್ಯ ರೀಟೇಲ್ ಪ್ರಯಾಣ ಸ್ಫೂರ್ತಿದಾಯಕ, ತಲ್ಲೀನಗೊಳಿಸುವ ಅನುಭವವಾಗಿ ಪರಿವರ್ತಿಸಲು ಆಲೋಚನಾಪೂರ್ವಕವಾಗಿ ರೂಪಿಸಲಾಗಿದೆ. ಪೇಂಟ್ ಸ್ಟುಡಿಯೊಗಳನ್ನು ಸೃಜನಶೀಲತೆಯ ಕೇಂದ್ರಗಳಾಗಿ ವಿನ್ಯಾಸಗೊಳಿಸಿದ್ದು ಸಾಂಪ್ರದಾಯಿಕ ಪೇಂಟ್ ಮಳಿಗೆಗಳ ಆಚೆಗೆ ಮುಂದುವರಿದಿವೆ.
ಗ್ರಾಹಕರು ಬಣ್ಣದ ಆಯ್ಕೆ, ರಚನೆಗಳು ಮತ್ತು ಬಳಕೆಯ ತಂತ್ರಗಳ ಕುರಿತು ವೈಯಕ್ತಿಕಗೊಳಿಸಿದ ಸಲಹೆಗಳು ಮೂಲಕ ಉಚಿತ ಪರಿಣಿತರ ಮಾರ್ಗದೆರ್ಶನ ಪಡೆದುಕೊಳ್ಳಬಹುದು, ಸುಧಾರಿತ ವಿಶುಯಲೈಸೇಷನ್ ಸಾಧನಗಳು ಗೃಹ ಮಾಲೀಕರಿಗೆ ಅವರ ಆಯ್ಕೆ ಮಾಡಲಾದ ಬಣ್ಣಗಳು ನಿಜ ಜೀವನದ ಹಿನ್ನೆಲೆಗಳಲ್ಲಿ ಹೇಗೆ ಕಾಣುತ್ತವೆ ಎಂದು ಪ್ರಿವ್ಯೂ ಮಾಡಬಹುದು. ಪೇಂಟ್ಸ್ ಆಚೆಗೂ ಪೇಂಟ್ ಸ್ಟುಡಿಯೋ ವಾಲ್ ಪೇಪರ್ ಗಳು, ಡಿಸೈನರ್ ಫಿನಿಷ್ ಗಳು ಮತ್ತು ಸಮಗ್ರ ಅಲಂಕರಣದ ಪರಿಹಾರಕ್ಕೆ ವಿಶೇಷ ಕೋಟಿಂಗ್ ಆಯ್ಕೆಗಳನ್ನು ಕೂಡಾ ಹೊಂದಿರುತ್ತದೆ.
ಈ ಮಳಿಗೆಯು ಪೂರ್ಣ ಶ್ರೇಣಿಯ 170ಕ್ಕೂ ಉತ್ಪನ್ನಗಳನ್ನು ಪ್ರದರ್ಶಿಸುವುದಲ್ಲದೆ ವಿಶೇಷ ಸೇವೆಗಳನ್ನೂ ಒದಗಿಸುತ್ತದೆ, ಅದರಲ್ಲಿ ಬಣ್ಣದ ಆಯ್ಕೆ, ಆವಿಷ್ಕಾರಕ ಬಳಕೆ ತಂತ್ರಗಳು ಮತ್ತು ಶ್ರೀಮಂತ ಸ್ಥಳೀಯ ಪರಂಪರೆಯಿಂದ ಸ್ಫೂರ್ತಿ ಪಡೆದ ಕ್ಯುರೇಟೆಡ್ ಡೆಕೊರ್ ಪರಿಹಾರಗಳನ್ನು ಕುರಿತು ಪರಿಣಿತರ ಸಲಹೆಗಳನ್ನೂ ಪಡೆಯಬಹುದು.
ಬಿರ್ಲಾ ಓಪಸ್ ಪೇಂಟ್ಸ್ ಸಿಇಒ ಶ್ರೀ ರಕ್ಷಿತ್ ಹರ್ಗವೆ ಮಾತನಾಡಿ “ಬೆಂಗಳೂರಿನ ಇಂದಿರಾನಗರದಲ್ಲಿ ಮೊದಲ ಪೇಂಟ್ ಸ್ಟುಡಿಯೊ ಪ್ರಾರಂಭಿಸುವುದು ಬಿರ್ಲಾ ಓಪಸ್ ಪೇಂಟ್ಸ್ ಗೆ ಪ್ರಮುಖ ಮೈಲಿಗಲ್ಲಾಗಿದೆ. ಈ ಸ್ಟುಡಿಯೊ ಬರೀ ಭೌತಿಕ ತಾಣಕ್ಕಿಂತ ಹೆಚ್ಚಿನದಾಗಿದೆ; ಇದು ಆವಿಷ್ಕಾರ, ಶ್ರೇಷ್ಠತೆ ಮತ್ತು ಗ್ರಾಹಕರ ಅನುಭವ ಹೆಚ್ಚಿಸಲು ನಮ್ಮ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಪ್ರತಿ ಅಂಶವನ್ನೂ ಗೃಹ ಮಾಲೀಕರು ಅವರ ಸ್ಥಳಗಳನ್ನು ನೈಜ ಮಾಸ್ಟರ್ ಪೀಸ್ ಗಳಾಗಿ ಪರಿವರ್ತಿಸಲು ಸನ್ನದ್ಧವಾಗಿಸುವಂತೆ ಎಚ್ಚರಿಕೆಯಿಂದ ರೂಪಿಸಲಾಗಿದೆ. ನಮ್ಮ ಗುರಿ ಗ್ರಾಹಕರು ಪೇಂಟ್ಸ್ ನ ಪರಿವರ್ತನೀಯ ಶಕ್ತಿಯನ್ನು ಪೂರ್ಣವಾಗಿ ಅನುಭವಿಸುವ ಪರಿಸರಗಳನ್ನು ಸೃಷ್ಟಿಸುವ ಮೂಲಕ ಅದನ್ನು ಲಭ್ಯ ಹಾಗೂ ಸ್ಫೂರ್ತಿಯುತವಾಗಿಸುವುದು” ಎಂದರು.

