ಬಿರ್ಲಾ ಓಪಸ್ ನಿಂದ` ಪ್ರೈಮ್ ಎಕ್ಸ್ ಪ್ರೆಸ್ 125 ದಿನ ಪ್ರವಾಸ

ಬಿರ್ಲಾ ಓಪಸ್ ನಿಂದ `ಪ್ರೈಮ್ ಎಕ್ಸ್ ಪ್ರೆಸ್ ಎಂಬ ಎರಡು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಬಸ್‍ಗಳು 125 ದಿನಗಳಲ್ಲಿ 44 ನಗರಗಳನ್ನು ಪ್ರವಾಸ ಮಾಡಲಿದೆ. ಬಿರ್ಲಾ ಓಪಸ್ ಪೇಂಟ್ಸ್‍ನ ಸಾಂಸ್ಥಿಕ ವಿಭಾಗವಾದ ಬಿರ್ಲಾ ಓಪಸ್ ಪ್ರೈಮ್, ಪ್ರೈಮ್ ಎಕ್ಸ್ ಪ್ರೆಸ್ ಪ್ರಾರಂಭಿಸುವುದಾಗಿ ಘೋಷಿಸಿದೆ.

ಗ್ರಾಹಕರು ಬಣ್ಣ ಪರಿಹಾರಗಳೊಂದಿಗೆ ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ಪರಿವರ್ತಿಸುವ ಗುರಿ ಹೊಂದಿರುವ ಆನ್-ರೋಡ್ ಅನುಭವ ಕೇಂದ್ರವಾಗಿದೆ. ಅಭಿಯಾನವನ್ನು ಬಿರ್ಲಾ ಓಪಸ್‍ನ ಮುಂಬೈ ಪ್ರಧಾನ ಕಚೇರಿ ಮತ್ತು ದೆಹಲಿ ವಲಯ ಕಚೇರಿಯಿಂದ ಅಧಿಕೃತವಾಗಿ ಪ್ರಾರಂಭಿಸಲಾಗಿದೆ .
ಮುಂದಿನ 125 ದಿನಗಳಲ್ಲಿ, ಎರಡು ಬಸ್‍ಗಳು ದೇಶದಾದ್ಯಾಂತ 44 ನಗರಗಳನ್ನು ಪ್ರವಾಸ ಮಾಡುವುದರ ಜೊತೆಗೆ, ಒಂದು 180-ದಿನಗಳ ಅಭಿಯಾನ ಚಟುವಟಿಕೆಯ ಭಾಗವಾಗಿ ಬಿರ್ಲಾ ಓಪಸ್‍ನ ಮುಂದಿನ ತಲೆಮಾರಿನ ಪೈಂಟ್ ತಂತ್ರಜ್ಞಾನಗಳನ್ನು ಬಿಲ್ಡರ್‍ಗಳು, ಡೆವಲಪರ್‍ಗಳು, ಕಾರ್ಪರೇಟ್ ಗಳು, ಸರ್ಕಾರದ ಏಜೆನ್ಸಿಗಳು ಮತ್ತು ಆರ್ಕಿಟೆಕ್ಟ್ ಸಂಸ್ಥೆಗಳ ಬಾಗಿಲಿಗೆ ನೇರವಾಗಿ ಕರೆದೊಯ್ಯಲಿದ್ದಾರೆ.
ಪ್ರತಿ ಬಸ್ಸಿನ ಒಳವಲಯವನ್ನು ಪ್ರಸಿದ್ಧ ಕಲಾವಿದೆ ಕಣಕ್ ನಂದಾ ವಿನ್ಯಾಸಗೊಳಿಸಲಾಗಿದ್ದು, ಗ್ರಾಹಕರಿಗೆ ಪ್ರೀಮಿಯಂ ಅನುಭವವನ್ನು ನೀಡಲಿದೆ.
ಬಿರ್ಲಾ ಓಪಸ್ ಪೈಂಟ್ಸ್‍ನ ಸಿಇಒ ರಕ್ಷಿತ್ ಹಾರ್ಗವೇ ಮಾತನಾಡಿ, ‘“ಪ್ರೈಮ್ ಎಕ್ಸ್ ಪ್ರೆಸ್ ಅಭಿಯಾನ ಇನ್‍ಸ್ಟಿಟ್ಯೂಷನಲ್ ಪೈಂಟ್ ಸೆಗ್ಮೆಂಟ್‍ನಲ್ಲಿ ಗ್ರಾಹಕರ ಎಂಗೇಜ್‍ಮೆಂಟ್‍ಗೆ ಹೊಸ ಚಾಪ್ಟರ್ ಆರಂಭಿಸುತ್ತಿದ್ದು, ಮೂಲಕ, ಬಿರ್ಲಾ ಓಪಸ್ ಪೈಂಟ್ಸ್ ಉತ್ಪನ್ನದಿಂದ ಪ್ರಾಜೆಕ್ಟ್ ಸಪೋರ್ಟ್ ವರೆಗೆ ಸಮಗ್ರ ಪರಿಹಾರಗಳನ್ನು ನೀಡುವಲ್ಲಿ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದಿದ್ಧಾರೆ